ಇನ್ನು ಏನು ತಿಳಿಯದು ಹರಿ ಪ
ಪನ್ನಗಾದ್ರಿನಿಲಯ ಪರಮ ಪಾವನ್ನ ಜಗನ್ಮೋಹನ ಅ.ಪ
ಎಲ್ಲಾ ಜಗನಿನ್ನೊಳಗಿಹುದು ಎಲ್ಲರೊಳಗೆ ನೀನಿರುವೈ
ಬಲ್ಲಿದನು ನೀನು ನಿನಗೆ ಸಮ ಬ್ರಹ್ಮಾದಿಸುರರೊಳಗ್ಯಾರು 1
ದೀನರು ಮಾಡಿದ ಕರ್ಮವ ನೀನು ಕಳೆಯಲಾರೆಯಾ
ನಾನಿದಕೆ ಭಾಗಿಯೋ ನೀನಿದ್ದು ಮಾಡಿಸಲಿಲ್ಲವೆ 2
ಎಂದೂ ನಿನ್ನ ಆಜ್ಞೆಯಿಲ್ಲದೆ ಒಂದಾದರು ಚಲಿಸುವುದೆ
ತಂದೆ ತಾಯಿ ಗುರುದೈವ ನೀನೆಂದು ನಂಬಿದೆ ಇಂದಿರೇಶ3
ಶೃತಿತತಿ ಶಾಸ್ತ್ರ ಪುರಾಣಗಳತಿಶಯದಲಿ ಪೊಗಳುವುದು
ಗತಿ ನೀನೆ ಎಂದನವರತವು ಕಥೆಗಳ ಕೇಳುವುದೇಕೆ 4
ಅಗಣಿತ ಗುಣನಿಧಿ ಗುರುರಾಮವಿಠಲ 5