(ಮೂಲ್ಕಿಯ ನರಸಿಂಹದೇವರು)
ಜಯತು ಜಯತು ನೃಹರಿ ಬ್ರಹ್ಮಾದಿನಿರ್ಜರ
ಜಯತು ಜಾತಕೈವಾರಿ ಪ.
ಜಯ ನಮೋ ಜಗದಾದಿಮಾಯಾ
ಶ್ರಯ ಚರಿತ್ರ ಪವಿತ್ರ ವಿಗತಾ-
ಮಯ ಸದಾನಂದೈಕನಿಧಿ ಚಿ-
ನ್ಮಯ ದಯಾರ್ಣವ ಭಯನಿವಾರಣ ಅ.ಪ.
ಸುಕುಮಾರ ಪ್ರಹ್ಲಾದನ ಬಾಧಿಸೆ ಭಯಾ-
ನಕ ರೂಪ ತಾಳ್ದಾಕ್ಷಣ
ಸಕಲ ಲೋಕಾಲೋಕಭೀಷಣ
ಪ್ರಕಟನಖಮುಖ ಕ್ರೋಧವಾಹಿನಿ
ಪ್ರಖರ ಜ್ವಾಲಾಮಾಲ ಬದ್ಧ-
ಭ್ರಕುಟಿ ಲಾಲಿತ ಭಕುತ ವತ್ಸಲ 1
ಪಾರಮೇಷ್ಠಿ ರುದ್ರರೇ ಮುಖ್ಯಸ್ಥ ವೃಂ-
ದಾರಕಋಷಿವರರೇ
ವೀರಭದ್ರ ಸುಭದ್ರ ನಂದಿ ಪ್ರ-
ವೀರ ಭೈರವ ಭೃಂಗಿ ಮುಖ್ಯರು
ಶ್ರೀರಮಣ ಕುರು ಕರುಣ ಪಾರಾ-
ವಾರಸಮ ಗಂಭೀರನೆಂಬರು 2
ಶಾಂತವಾಗದು ಕ್ರೋಧ ಮಾಡಿದುದಾ-
ನಂತ ಸಂಕ್ಯಾಪರಾಧಾ
ಎಂತು ನಿರ್ವೃತಿ ಎಂದು ಚಿಂತಾ-
ಕ್ರಾಂತರಾಗಿ ಪಿತಾಮಹಾದ್ಯರು
ಕಂತುಜನನಿಯ ಬೇಡಿಕೊಳಲ-
ತ್ಯಂತ ಹರುಷವನಾಂತು ಬಂದಳು 3
ಪಟ್ಟದರಸನರೂಪ ಕಾಣುತ ಭಯ-
ಪಟ್ಟಳಪೂರ್ವಕೋಪ
ಶ್ರೇಷ್ಠಭಕ್ತಶಿಖಾಮಣಿಯ ಮುಂ-
ದಿಟ್ಟೆರಗಿ ಸಂಸ್ತುತಿಸೆ ದನುಜಘ-
ರಟ್ಟ ಹೃದಯನಿವಿಷ್ಟ ಕರುಣಾ-
ದೃಷ್ಟಿಯಿಂದ ಸಂತುಷ್ಟಗೊಳಿಸಿದ 4
ಶ್ರೀ ಲಕ್ಷ್ಮೀನಾರಾಯಣ ದೈತ್ಯೇಂದ್ರ ಹೃ-
ಚ್ಛೂಲ ಅಖಿಲ ಕಾರಣ
ಕಾಲಕಾಲಾಂತಕ ತಮಾಲ ಸು-
ನೀಲನಿಭ ನಿತ್ಯಾತ್ಮ ಸುರಮುನಿ
ಜಾಲಪಾಲ ವಿಶಾಲ ಗುಣನಿಧಿ
ಮೂಲಿಕಾಲಯಲೋಲ ನರಹರಿ 5