ಬ್ರಹ್ಮಾದಿದೇವಗಣ ನಮಿತ ಪಾದಯುಗಳನೆ
ನಿನಗೆ ರಂಗಧಾಮನೆ ಪ
ಸುಮನಸರೊಡೆಯನೆ ಕಮಲಾಪತಿಯೆ ಅ.ಪ.
ಗೋಪಾಲ ಬಾಲಕಿಯರ ಮನಕುಮುದ ಚಂದ್ರನೆ
ನಿನಗೆ ರಂಗಧಾಮನೆ
ಕಪಟ ರಕ್ಕಸರನು ಮಡುಹಿದನೆ 1
ಕಾವೇರಿ ತೀರದಲ್ಲಿ ನಿಂದ ಪಾವನರೂಪನೆ
ಹಾವಿನಹÉಡೆಯೊಳ್ಕುಣಿದವನೆ ಸನ್ಮಂಗಳಂ
ನಿನಗೆ ರಂಗಧಾಮನೆ
ನಮ ತೋಹನಾಂಗೀಯ ರಾಮನಾಪಹಾರಿಯೆ 2
ಮಾನಿನಿ ದ್ರೌಪದಿಯ ಮಾನವನ್ನು ಕಾಯ್ದನೆ
ನಿನಗೆ ರಂಗಧಾಮನೆ
ದಿನಕರ ಕೋಟಿತೇಜನೆ ರಂಗೇಶವಿಠಲನೆ 3