ಸರೋಜಜಾತೆ ಜಗನ್ಮಾತೆ ಪಾಲಿಸು
ಜನಕಸುತೆ ಜನನಮರಣರಹಿತೆ ಪ
ಬನ್ನಬಡಿಸುವುದೇ ನಮ್ಮ ಸೀತಮ್ಮ ಅ.ಪ
ಪತಿಹೃದಯನಿವಾಸಿನಿ ಸುವಾಸಿನಿ ಭ-
ವತ್ಪಾದಾಂಬುಜ ಭಜಿಸುವ ಜನರು
ಸತತವಿಹಪರದಿ ಸೌಖ್ಯ ಪಡುವರೆಂದು ಸಾ-
ರುತಿಹವು ಶೃತಿ ಸ್ಮøತಿ ಪುರಾಣ 1
ಭವ್ಯ ಚರಿತರಾದ ಬ್ರಹ್ಮಾದಿಗಳಿಗಳವೆ ನಿನ್ನ
ದಿವ್ಯಾಂಘ್ರಿ ದರ್ಶನವಾಗುವುದು
ಸೇವ್ಯನಾದ ಪತಿಚಿತ್ತಾನುಸಾರದಿ
ಜೀವನಿಕರವ ಕರುಣದಿ ನೋಡುವ 2
ಕೃತಿ ಶಾಂತಿ ರುಕ್ಮಿಣಿ ಲಕುಮಿ
ನಿರುತವು ನೆನೆವರ ದುರಿತಗಳ ಕಳೆದು
ಗುರುರಾಮವಿಠಲನ ಚರಣವ ತೋರಿಸೆ 3