ಒಟ್ಟು 17 ಕಡೆಗಳಲ್ಲಿ , 9 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನನಿ ಬ್ರಹ್ಮಾಣಿಯೆ | ವರ ವೀಣಾಪಾಣಿಯೆ || ಜನನಿ ಬ್ರಹ್ಮಾಣಿಯೆ ಪ. ಕರುಣಿಯೆ | ಫಣಿವೇಣಿಯೆ || ಬಾ ಬಾ ಶುಕವಾಣೀ | ಜನನೀ ಬ್ರಹ್ಮಾಣಿಯೆ 1 ದೋರುತೆ ವರಗಳೀಯುತೆ | ಬಾ ಬಾ ಗೀರ್ವಾಣೀ ಜನನಿ ಬ್ರಹ್ಮಾಣಿಯೆ 2 ವಿಮಲಚರಿತೆಯೆ || ಬಾ ಬಾ ವಾಗ್ವಾಣೀ | ಜನನಿ ಬ್ರಹ್ಮಾಣಿಯೆ 3
--------------
ವೆಂಕಟ್‍ರಾವ್
ದಯಮಾಡಿ ನಡೆಸೆ ಶಾರದೆ ದಯಮಾಡಿ ನಡೆಸೆ ಪ. ಹೃಯಾಂಗಣದಿ ಸದನವ ಮಾಡುತ ವಿಧವಿಧ ನವರಸದುದಯದ ತನಕ 1 ಭೃಂಗಕುಂತಳೆ ಕೃಪಾಪಾಂಗೆ ಬ್ರಹ್ಮಾಣಿ ಕು- ರಂಗನಯನೆ ಶ್ರೀರಂಗಭಕ್ತಳೆ 2 ಭೂರಿ ಶಾಸ್ತ್ರವಿಚಾರವ ಪಾಲಿಸೆ ಧೀರ ಲಕ್ಷ್ಮೀನಾರಾಯಣನ ಸೊಸೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನೆಲೆಸೆನ್ನ ವದನದಿ ವಾಣಿ ಬ್ರಹ್ಮಾಣಿ ನೆಲೆಸೆನ್ನ ವದನದಿ ವಾಣಿ ಪ ಜಲಜನಾಭನ ಗುಣಗಣ ನಲಿಯುತ ಪಾಡಲು ಸುಲಲಿತವಾದಂಥ ಪದಗಳನು ನುಡಿಸುತ್ತ ಅ.ಪ. ಸದಾಶಿವಾದಿ ಸಕಲ ಸುರಗಣ ಸೇವಿತ ಪಾದ ಪಂಕಜವನ್ನು 1 ಇಂದುವದನೆ ನಿನ್ನ ಮಂದಸ್ಮಿತವೆಂಬುವ ಚಂದ್ರಕಾಂತಿಯ ಮನ್ಮನದೊಳು ಬೀರುತ 2 ಕರದಲಿ ವೀಣೆಯ ನುಡಿಸುತ ವದನದಿ ಹರುಷದಿ ರಂಗೇಶವಿಠಲನ ಪಾಡುತ 3
--------------
ರಂಗೇಶವಿಠಲದಾಸರು
ಬಾರಮ್ಮ ಭಾಗ್ಯನಿಧಿಯೆ | ಸಿರಿಯೆ ಪ ಬಾರಮ್ಮ ನಿನ್ನ ಪಾದಾರವಿಂದ ತೋರಲು ಅ.ಪ ಸರಸಿಜಾಕ್ಷನ ವಕ್ಷ ಮಂದಿರೆ ಇಂದಿರೆ ಸರಸಿಮುದವೆರಸಿ ನಿನ್ನರಸನೊಡನೆನೀ 1 ಸೀತಾರುಕ್ಮಿಣ್ಯಾದ್ಯವತಾರಿಣಿ ಬುಧ- ವ್ರಾತ ಮನಃ ಪದ್ಮ ವಿಹಾರಿಣಿ ಚೇತೋದ್ಭವ ಜನನೀ ಶ್ರೀತರುಣೀಮಣಿ 2 ಬ್ರಹ್ಮರುದ್ರೇಂದ್ರಾದಿ ಸುರಸೇವಿತೆ ಬ್ರಹ್ಮಾಣಿ ಗಿರಿಜಾ ಶಚೀವಂದಿತೆ ಪರ- ಬ್ರಹ್ಮ ಗುರುರಾಮವಿಠಲನ ದಯಿತೆ 3
--------------
ಗುರುರಾಮವಿಠಲ
ಭಕ್ತಿ ಗೀತಾವಳಿ ಸರಸ್ವತಿ ಸ್ತುತಿಗಳು 1 ಜಯ ಜಯ ಜನನಿ ಜಗದುಜ್ಜೀವಿನಿ ಪ ಜಯ ಬ್ರಹ್ಮಾಣಿ ಅ.ಪ ಆವಳ ಕೃಪೆಯಿಂ ಜೀವಿಪೆಮೋ ಮ ತ್ತಾವಳ ವ್ಯಾಪನೆಯಿಂ ದೈವಿಕ ಗುಣಸಂಭಾವಿತರಪ್ಪೆವೋ ಭಾವಿಪೆವಾದೇವಿಯ ನಾವ್ 1 ಉಡುವುದು ತೊಡುವುದು ಕೊಡುವುದು ಹಿಡಿವುದದಾರಿಂದಂ ನುಡಿವೆಣ್ಣೆನಿಸಿದವಳಾವಳೋ ನಾವವ ಳೆಡಬಿಡದೆರೆವೋಂ 2 ತಾಯೆಮಗರಿವಂ ಕಾಯಕೆಬಲಮಂ ಮಾಯೆಯೆ ಬಿಡಿಸಿನ್ನು ಕಾಯಜಪಿತ ಶೇಷಾದ್ರೀಶನೆ ನೆನೆವಾಸನ್ಮತಿಯೆಂದೆಂದುಂ 3
--------------
ನಂಜನಗೂಡು ತಿರುಮಲಾಂಬಾ
ಶ್ರೀವಾಣಿ ಕಲ್ಯಾಣಿ ಬ್ರಹ್ಮಾಣಿ ಗೀರ್ವಾಣಿ ಕೈವಲ್ಯಮಾರ್ಗ ಪ್ರದರ್ಶಿನೀ ಕವಿಜೀವಿನೀ ಮಜ್ಜನನೀ ಪ. ಕಾಮಿನೀ ಗುಣಭರಣೀ ಕಮನೀಯ ಸುಶ್ರೋಣಿ ರಾಮಾಣೀಯಕ ಪಲ್ಲವಪಾಣಿ ಕೋಮಲ ಶುಕವಾಣಿ 1 ಮಂಗಳಂ ವಿಧಿರಮಣೀ ಜಯ ಮಂಗಳಂ ಘನಕರುಣಿ ಸಂಗೀತ ಶಾಸ್ತ್ರ ವಿಲಾಸಿನೀ ಪರಿಪಾಹಿಮಾಂ ಜನನೀ 2 ಭುವನೈಕ ಮೋಹಿನಿ ತರುಣಿ ಭಾಷಾಭಿಮಾನಿನಿ ರಮಣಿ ಶೇಷಶೈಲವಾಸ ಕೀರ್ತನಾಮೋದದಾಯಿನಿ ಜನನಿ 3
--------------
ನಂಜನಗೂಡು ತಿರುಮಲಾಂಬಾ
ಶ್ರೀಶ ವೇದವ್ಯಾಸನಾದನು ಪ ಶ್ರೀಶ ವೇದವ್ಯಾಸನಾಗಲು ಸಾಸಿರ ನಯನ ಸಾಸಿರ ವದನ ಕರ ಮಿಕ್ಕ ಸುರರೆಲ್ಲ ತು- ತಿಸಿ ಹಿಗ್ಗುತ ಹಾರೈಸಲಂದು ಅ.ಪ. ದರ್ಪಕ ಜನಕ ಸರ್ಪತಲ್ಪನಾಗಿ ತಪ್ಪದನುಗಾಲ ಇಪ್ಪ ವಾರಿಧೀಲಿ ಕಂದರ್ಪ ಹರನೈಯ ಸುಪರ್ಣರಥನಾಗಿ ಒಪ್ಪಿಕೊಂಡು ಇಪ್ಪತ್ತು ಲಕ್ಷಗಲಿಪ್ಪ ಯೋಜನದ ಅಪ್ಪನ ಅರಮನೆ ದರ್ಪಣದಂತೆ ತಾ ರಪ್ಪಥ ಮೀರಿದಂತಿಪ್ಪದು ನೋಡಿ ಸಾ- ಮೀಪಕ್ಕೆ ವಾಣೀಶ ಬಪ್ಪ ಬೇಗಾ 1 ಬಂದು ಬೆನ್ನೈಸಿದ ಮಂದಮತಿ ಕಲಿ- ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು ಕುಂದ ಭಕ್ತನಿಗೆ ಒಂದೆ ಮಾತಿನಲಾ- ನಂದ ಬಡಿಸಿ ಪೋಗೆಂದು ಪೇಳೆ ಅಂದು ಸುಯೋಜನಗಂಧಿ ಗರ್ಭದಲ್ಲಿ ನಿಂದವತರಿಸುತ ಪೊಂದಿದ ಅಜ್ಞಾನ ಅಂಧಕಾರವೆಲ್ಲ ಹಿಂದು ಮಾಡಿ ಸುರ- ಸಂದಣಿ ಪಾಲಿಸಿ ನಿಂದ ದೇವ 2 ಕೆಂಜೆಡೆವೊಪ್ಪ ಕೃಷ್ಣಾಜಿನ ಹಾಸಿಕೆ ಕಂಜಾಪ್ತನಂದನದಿ ರಂಜಿಸುವ ಕಾಯ ಮಂಜುಳ ಸುಜ್ಞಾನ ಪುಂಜನು ವಜ್ಜರ- ನಿತ್ಯ ಅಂಜಿದಗೆ ಸಂಜೆಯ ತೋರಿ ಧನಂಜಯ ಶಿಷ್ಯ ನೀ- ಗಂಜದಂತೆ ಕರಕಂಜವ ತಿರುಹಿ ನಿರಂಜನ ಪೇಳಿದ ಕುಂಜರ ವೈರಿಯ ಭಂಜನನು 3 ಗಂಗಾತೀರದಲಿ ಶೃಂಗಾರ ಉಪವ- ನಂಗಳದರೊಳು ಶಿಂಗಗೋಮಾಯು ಭು ಮೂಷಕ ಮಾತಂಗ ಸಾರಮೇಯ ಕೊಂಗಹಂಗ ಸರ್ವಾಂಗ ರೋಮ ಶರಭ ವಿಹಂಗ ಶಾರ್ದೂಲ ಸಾ- ರಂಗ ಕುರಂಗ ಕುಳಿಂಗ ಪಾಳಿಂಗ ಪ್ಲ ವಂಗ ತುರಂಗ ಪತಂಗ ಭೃಂಗಾದಿ ತು- ರಂಗವು ತುಂಬಿರೆ ಮಂಗಳಾಂಗ 4 ಬದರಿ ಬೇಲವು ಕಾದರಿ ಕಾಮರಿ ಮಧುಮದಾವಳಿ ಅದುಭುತ ತೆಂಗು ಕದಳಿ ತಪಸಿ ಮದಕದಂಬ ಚೂ- ತದಾರು ದ್ರಾಕ್ಷಿಯು ಮೃದು ಜಂಬೀರವು ಬಿದಿರು ಖರ್ಜೂರ ಮೋದದಿ ದಾಳಿಂಬ ತುದಿ ಮೊದಲು ಫ ಲದ ನಾನಾವೃಕ್ಷ ಪದಲತೆಯ ಪೊದೆಯು ಫಲ್ಲಸೈ ಇದೆ ಆರು ಋತು ಸದಾನಂದ 5 ವನದ ನಡುವೆ ಮುನಿಗಳೊಡೆಯ ಕಾನನ ಸುತ್ತಲು ಆ- ನನ ತೂಗುತ್ತ ಧ್ವನಿಯೆತ್ತಿ ಬಲು- ಗಾನ ಪಾಡಿದವು ಗುಣದಲ್ಲಿ ಕುಣಿದು ಖಗಾದಿ ಗಣಾನಂದದಿಂದಿರೆ ವನನಿಕರ ಮೆಲ್ಲನೆ ಮಣಿದು ನೆ- ಲನ ಮುಟ್ಟುತಿರೆ ಅನಿಮಿಷರು ನೋ ಡನಿತಚ್ಚರಿಯನು ಪೇಳೆ 6 ಮೌನಿ ನಾರದನು ವೀಣೆ ಕೆಳಗಿಟ್ಟು ಮೌನವಾದನು ಬ್ರಹ್ಮಾಣಿ ತಲೆದೂಗಿ ಗೀರ್ವಾಣ ಗಂಧರ್ವರು ಗಾನ ಮರೆದು ಇದೇನೆನುತ ಮೇನಕೆ ಊರ್ವಸಿ ಜಾಣೀರು ತಮ್ಮಯ ವಾಣಿ ತಗ್ಗಿಸಿ ನರ್ತನೆಯ ನಿಲ್ಲಿಸಿ ದೀನರಾದರು ನಿಧಾನಿಸಿ ಈಕ್ಷಿಸಿ ಎಣಿಸುತ್ತಿದ್ದರು ಶ್ರೀನಾಥನ 7 ನಮೋ ನಮೋಯೆಂದು ಹಸ್ತ- ಕಮಲ ಮುಗಿದು ನಮಗೆ ನಿಮ್ಮಯ ಅಮಲಗುಣ ನಿಗಮದಿಂದೆಣಿಸೆ ಕ್ರಮಗಾಣೆವು ಉತ್ತಮ ದೇವ ಕೂರ್ಮ ಖಗಮೃಗ ಸಮವೆನಿಸಿ ಅ- ಚಮತ್ಕಾರದಲ್ಲಿ ನಾಮಸುಧೆಯಿತ್ತ ರಮೆಯರಸ ಆಗಮನತ8 ಇದನು ಪಠಿಸೆ ಸದಾ ಭಾಗ್ಯವಕ್ಕು ಮದವಳಿ ದಘವುದದಿ ಬತ್ತೋದು ಸಾಧನದಲ್ಲಿಯೆ ಮದುವೆ ಮುಂಜಿ ಬಿಡದಲ್ಲಾಗೋದು ಶುಭದಲ್ಲಿ ಪದೆಪದೆಗೆ ಸಂಪದವಿಗೆ ಜ್ಞಾನ- ನಿಧಿ ಪೆಚ್ಚುವುದು ಹೃದಯ ನಿರ್ಮಲ ಬದರಿನಿವಾಸ ವಿಜಯವಿಠ್ಠಲ ಬದಿಯಲ್ಲೆ ಬಂದೊದಗುವ 9
--------------
ವಿಜಯದಾಸ
ಸತಿ ಮದ್ಬಾರ ನಿನ್ನದಮ್ಮಾ | ಕರುಣದಿ ಪೊರೆಯಮ್ಮ ಪ ಸರಸಿಜಾಕ್ಷ ಹರಿಭಕುತಿ ನೀಡೆ ತಾಯೇ | ಆರತರನು ಕಾಯೇ ಅ.ಪ. ಕಾಳಿ ದ್ರೌಪತಿ ಶಿವಕನ್ಯೆ | ಮನ್ಮನದಲಿ ನಿಲು ಘನ್ನೆಫಾಲಾಕ್ಷನ ಪ್ರಿಯ ಜನನೀ | ದಯದಲಿ ಪೊರೆ ಕರುಣೀ ||ನಳನಂದಿನಿ ಇಂದ್ರಸೇನೆ ತಾಯೇ | ಕಲಿ ಕಲ್ಮಷ ಕಳೆಯೇಏಳಲ ಮಾಡದೆ ನೀಲವರ್ಣನ ತೋರೇ | ಕರುಣಾರಸ ಬೀರೇ 1 ಭವ ಖಗ ಪನ್ನಗ ಭವ ದೂರೇ2 ಕೃತಿ ರಮಣನ ಪ್ರಿಯ ಪುತ್ರಿ | ನರಹರಿ ಗುರುಭಕ್ತೀಪ್ರಥಮಾಂಗನ ಪ್ರಿಯರಾಣೀ | ನಮಿಸುವೆ ಬ್ರಹ್ಮಾಣಿ ||ಪತಿತನ ಪಾಲಿಸೆ ಪರಮ ಕಲ್ಯಾಣಿ | ಪಾವನೆಯ ಭಾವಿವಾಣಿಗತಿಪ್ರದ ಗುರು ಗೋವಿಂದ ವಿಠಲನ್ನ | ಪದ ತೋರಿಸೆ ಘನ್ನ 3
--------------
ಗುರುಗೋವಿಂದವಿಠಲರು
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ- ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ - ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹಂಸವಾಹನ ಜಾಯೆ ಕಾಯೆ ಪ ವಿಪಾಂಸಗನ ಪದಪಾಂಸು ಧರಿಸುವಳೆ ಮನ ಸಂಶಯವ ಕಳೆ ಅ.ಪ. ಸತಿ | ಅ-ಜ್ಞಾನ ನೀಗಿ ಸುಜ್ಞಾನ ವೀಯುತ |ಜ್ಞಾನ ಪೂರ್ಣ ಪ್ರಜ್ಞಾನ ಘನಗುಣಗಾನ ಮಾಳ್ಪ ವಿಜ್ಞಾನ ವೀವುದು 1 ಭಕ್ತಿರೂಪಿ - ಸುವ್ಯಕ್ತಿಗೈ ಹರಿಸಭಕ್ತಿಯನು ಗುರುಭಕ್ತಿಯೆನ್ನಲ್ಲಿ |ಶಕ್ತಿ ಕೊಟ್ಟಾಸಕ್ತಿಯಲಿ ವೇ-ದೋಕ್ತದಲಿ ಎನ ಯುಕ್ತ ನೆನಿಸಮ್ಮ 2 ವಾಣಿಯೇ ಬ್ರಹ್ಮಾಣಿಯೇ ವೇ-ದಾಣಿಯೇ ಸುಜ್ಞಾನಿಯೇ ಪೊರೆವೀಣೆ ಧರಿಸಿಹ ಪಾಣಿಯೇ ಸು-ಶ್ರೋಣಿಯೇ ಚತು | ರಾನನ ಪ್ರಿಯೆ 3 ನೆಲಸಿ ರಸನದಿ | ವಿಲಸಿತಾಮಲಲಲಿತ ಹರಿಗುಣ | ಫಲಿಸಿ ಕೀರ್ತಿಸುಅಲವ ಭೋದರ | ಲಲಿತ ಉಕ್ತಿಲಿಪುಳಕ ಪುಳಕದಿ | ನಿಲಿಸು ಮನ್ಮನವಾ 4 ಸನ್ನುತ ಕ | ಟಾಕ್ಷ ತೋರಿಸು 5
--------------
ಗುರುಗೋವಿಂದವಿಠಲರು
ದಯಮಾಡಿ ನಡೆಸೆ ಶಾರದೆ ದಯಮಾಡಿ ನಡೆಸೆ ಪ.ಹೃಯಾಂಗಣದಿ ಸದನವ ಮಾಡುತವಿಧವಿಧ ನವರಸದುದಯದ ತನಕ 1ಭೃಂಗಕುಂತಳೆ ಕೃಪಾಪಾಂಗೆಬ್ರಹ್ಮಾಣಿಕು-ರಂಗನಯನೆ ಶ್ರೀರಂಗಭಕ್ತಳೆ 2ಭೂರಿಶಾಸ್ತ್ರವಿಚಾರವ ಪಾಲಿಸೆಧೀರ ಲಕ್ಷ್ಮೀನಾರಾಯಣನ ಸೊಸೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ಪವಾಗಭಿಮಾನಿ ವರಬ್ರಹ್ಮಾಣಿಸುಂದರವೇಣಿ ಸುಚರಿತಾಣಿ ಅ.ಪಜಗದೊಳು ನಿಮ್ಮ ಪೊಗಳುವೆನಮ್ಮಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ 1ಪಾಡುವೆ ಶ್ರುತಿಯ ಬೇಡುವೆ ಮತಿಯಪುರಂದರವಿಠಲನ ಸೋದರ ಸೊಸೆಯೆ2
--------------
ಪುರಂದರದಾಸರು