ದೇಹ ಭಾವವು ಹೋಗಿ ದೇವನೇ ತಾನಾಗಿದೇಹಗುಣವೆಲ್ಲಿಯದೋ ಮುಕ್ತ ಪ
ಗರುಡನ ಮನೆಯೊಳಗೆ ನಾಗರ ಜಾತಿಯಪರಿ ನಡೆವುದೇನೋ ಮುಕ್ತಶರೀರ ಸಹಿತದ ಬ್ರಹ್ಮಾಗಿ ತಾನಿರೆಹರಿವವೆ ಪ್ರಾಣಗಳು ಮುಕ್ತ1
ಉರಿಯದು ಉರಿಯಲು ಉರಿಯಲಿಅರಗದು ಇಹುದೇನೋ ಮುಕ್ತಕರುವಿಟ್ಟೆರಕದಿ ಥಳಥಳ ಹೊಳೆಯದೆಇರುವುದೇ ಈ ಇಂದ್ರಿಯಗಳು ಮುಕ್ತ2
ರವಿಯದು ಬೆಳಗಿರೆ ಕಿರಣ ಕಾಂತಿಯಿಂಗೂಗೆಗಳೆಲ್ಲ ತಿರುಗುವವೋ ಮುಕ್ತಖವ ಖವ ಖವಿಸುತ ಪರವಶವಿರೆವಿವರಿಸೆ ಮನವೆಲ್ಲೊ ಮುಕ್ತ 3
ಈಶನ ಕಣ್ಣುರಿ ಭುಗು ಭುಗು ಭುಗಿಲೆನೆಏಸು ಉಳಿವುದು ಕಾದು ಮುಕ್ತಿಸೂಸುವ ಮುಖದಲಿ ತೃಪ್ತಿಯೆ ತುಂಬಿರೆವಾಸನೆ ಎಲ್ಲಿಹುದೋ ಮುಕ್ತ 4
ಪರಮಾತ್ಮನು ತಾ ಪರಿಪೂರ್ಣನಾನಿರೆಮೆರೆವುದು ಅವಿದ್ಯೆ ಮುಕ್ತಗುರು ಚಿದಾನಂದ ಸಹಜದಿ ತಾನಿರೆಇರುವುದೆ ಜೀವತ್ವ ಮುಕ್ತ 5