ಕಲಿಧರ್ಮಮಾಡುತಿದ್ದ ಜಂಗಮಲಿಂಗಾ
ಶಿವಪೂಜೆ ಮಾಡುತಿದ್ದ ಪ
ಅಲ್ಲಿಗಲ್ಲಿಗೆ ಜಾಣ ಬಲ್ಲೆನೈವರಕೂಟ
ಎಲ್ಲೆಲ್ಲಿ ನೋಡಲಿ ಕುಳ್ಳಯೆಂಬೆರುಮಾನೇರು
ನಿಲ್ಲಾರು ನಿಜದಿಂದ ಬಲ್ಲವರದು ಕೇಳಿ
ಕಳ್ಳಾರು ಕದಿವರಲ್ಲ ಜಂಗಮಲಿಂಗ ಸುಳ್ಳು ಹೇಳುವದಿಲ್ಲವೂ 1
ಯೆದುಶೈಲದೊಳು ಹೋಗಿ ಯಾಚಿಸೆಲ್ಲರ ಕಂಡೂ
ಹದಿನೇಳು ತತ್ವಂಗಳಂಗಮಾಯಿತು ಯೆಂದು
ಸುದಿಗಿರಿಭ್ರುಕುಟಿಗೆ ಜೀವತನುವ ತಂದೂ
ಮದನಜನಕನೇಳಿದಾ 2
ನಾದಬಿಂದುವಿದೆಂಬೊ ನಾಡಿಕೊನೆಯೊಳು ನಿಂದೂ
ವಾದಿಭೀಕರ ಮಾದ ವಜ್ರದುಂಗುರವೆಂದು
ಬೋಧಾಯನದೊಳಿಹುದಾದಿ ತತ್ವವಿದೆಂದೂ
ಸಾಧನೆಯನು ಮಾಡಿದಾ ಜಂಗಮಲಿಂಗಾ ವೇದಾವದನಮಾದುದ3
ಅಂಡಪಿಂಡವಿದೆ ಬ್ರಹ್ಮಾಂಡವಾಗಿಹುದೆಂದೂ
ಕಂಡ ಪುಸ್ತಕವೆಲ್ಲಾ ಕಾಣಿಕೆಯನು ಮಾಡಿ
ಕುಂಡಲಪುರದೊಳಿದ್ದ ಜಂಗಮಲಿಂಗಾ
ಶಿವಪೂಜೆ ಮಾಡುತಿದ್ದಾ 4
ಕನಕಾಪುರೀಶ ತನುಮನಕಗೋಚರವಾದಾ-
ಗಣಿತಾವೇಶನುಯೆಂದು ಗುಣಿಸುತಿರಲು ವೇದ
ಅಣಿದು ಬರಲು ಗುರುವು ತುಲಸಿರಾಮನೆಯಾದ
ಘಣಿಶಾಯಿ ಪರತತ್ವವು ಜಂಗಮಲಿಂಗ5