ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀಚಪ್ಪರ ಶ್ರೀನಿವಾಸ ಪ.ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆದರ್ಪಕತಾತನೆ ತಾ ಸಜ್ಜನಪ್ರೀತ ಅ.ಪ.ಮಾಧವನಿನ್ನಯ ಮಹಿಮೆ ತಿಳಿಯದಪ-ರಾಧವ ಮಾಡಿದೆ ದಾರಿದ್ರ್ಯದಬಾಧೆಯಿಂದ ತವಪಾದದರುಶನದಗಾದಿಯ ಕಾಣದಾದೆ ನಾ ದ್ರೋಹಿಯಾದೆ 1ತ್ರಾಣವಿರುವಾಗಕಾಣಿಕೆಹಾಕಿದೆದೀನದಾರಿದ್ರ್ಯದ ಹೊತ್ತಿನಲಿಮೇಣದರಿಂದಲಿ ತೆಗೆದು ತೆಗೆದು ಪಂಚಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ 2ಮಂದವಾರದಿಕ್ಕೊಂದೂಟವ ಸತ್ತ್ವದಿಂದಿರುವಾಗ ನಾ ನೇಮಗೈದೆಮಂದಭಾಗ್ಯ ಜ್ವರದಿಂದ ಪೀಡಿತನಾದ-ರಿಂದೆರಡೂಟವನೂ ಮಾಡಿದೆ ನಾನು 3ಶನಿವಾರಕ್ಕೊಂದಾಣೆಕಾಣಿಕೆಹಾಕುತ್ತಮಿನುಗುವ ಡಬ್ಬಿಯ ನಾ ಮಾಡಿದೆಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದಹಣವೆಲ್ಲಗುಣನುಂಗಿತು ಪಾದಕೆ ಗೊತ್ತು4ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣಗುಡ್ಡೆಯ ಮೇಲಿರುವ ಮಹಾನುಭಾವ 5ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯುಮಂಡೆಯೊಳುರಿವುದು ಖಂಡಿತದಿಪುಂಡರೀಕಾಕ್ಷನೆ ಕರುಣಾಮೃತರಸಕುಂಡದೊಳ್ ಮೀಯಿಸಯ್ಯ ವೆಂಕಟರಾಯ 6ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆಕೆಡುಕು ಮಾಡುವುದೇನುಜಡಜನಾಭಕಡಲಶಯನ ಲಕ್ಷ್ಮೀನಾರಾಯಣ ನ-ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ