ಹರಿ ಗೋಪಾಲ ವಿಠಲ | ಪೊರೆಯ ಬೇಕಿವಳಾ ಪ
ದುರಿತ ದುಷ್ಕøತವೆಲ್ಲ | ದೂರ ಓಡಿಸುತಾ ಅ.ಪ.
ತರಳೆ ದ್ರೌಪದಿ ವರದ | ಮರಳ್ಯಹಲ್ಯಯ ಪೊರೆದತರಳ ಪ್ರಹ್ಲಾದನನ | ಪೊರೆದ ನರಹರಿಯೇ |ವರುಷ ಐದರ ಧೃವಗೆ | ವರದನಾಗೀ | ತೋರ್ದೆಕರುಣಾಳು ನಿನ್ಹೊರತು | ಬೇರನ್ಯಕಾಣೇ 1
ಕಂಸಾರಿ ನಿನ್ನ ಪದಪಾಂಸುವನೆ ಶಿರದಿ ನಿ | ಸ್ಸಂಶಯದಿ ಧರಿಸೀಶಂಸಿಸಲು ಮಹಿಮೆ ತವ | ದಾಸ್ಯ ಪಾಲಿಸುತಿನ್ನುಹಂಸವಾಹನ ಪಿತನೆ | ವಂಶ ಉದ್ಧರಿಸೋ 2
ಕರ್ಮ ಪ್ರಾಚೀನಗಳ | ಮರ್ಮ ತಿಳಿದವರ್ಯಾರೊಕರ್ಮನಾಮಕನೆ ದು | ಷ್ಕರ್ಮ ಪರಿಹರಿಸೀ |ಪೇರ್ಮೆಯಿಂದಿವಳ ಪೊರೆ | ನಿರ್ಮಲಾತ್ಮಕ ದೇವಧರ್ಮ ಗೋಪ್ತ ಸ್ವಾಮಿ | ಬ್ರಹ್ಮಾಂಡದೊಡೆಯಾ 3
ಮಧ್ವಮತ ಸಿದ್ಧಾಂತ | ಪದ್ಧತಿಗಳರುಹೃತ್ತಶುದ್ಧಸಾಧನ ಗೈಸೊ | ಮಧ್ವಾಂತರಾತ್ಮಾಅಧ್ವಯನು ನೀನೆಂಬ | ಶುದ್ಧ ಬುದ್ಧಿಯನಿತ್ತುಉದ್ಧರಿಸೊ ಈಕೆಯನು | ಪ್ರದ್ಯುಮ್ನ ದೇವಾ 4
ಸರ್ವಜ್ಞ ಸರ್ವೇಶ | ನಿರ್ವಿಕಾರನೆ ದೇವಸರ್ವದ ತವನಾಮ | ಸ್ಮರಿಪ ಸುಖವಿತ್ತುದುರ್ವಿ ಭಾವ್ಯನೆ ದೇವ | ಅಸ್ವತಂತ್ರಳ ಕಾಯೊಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5