ಬಾದರಾಯಣ ಪಾದಕೆರಗಿದೆನೊ ಪ
ನೀದಯದಿ ಕಾಮಕ್ರೋಧಗಳನೆ ಬಿಡಿಸಿ
ಸಾಧು ಕರ್ಮದಲಿ ಆದರವೀಯೊ ಅ.ಪ
ಜ್ಞಾನಿ ಗೌತಮಿ ಮೌನಿ ಶಾಪದಿಂದ
ಜ್ಞಾನಿಗಳಿಗೆ ಅಜ್ಞಾನತೆ ಬರಲು
ದೈನ್ಯದಲಿ ಚತುರಾನನಾದಿಗಳು
ನೀನೆ ಗತಿಯೆನಲು ಮಾನಿಸಿದ ಸುಖಾತ್ಮ 1
ತಾಪಸೋತ್ತಮ ಆ ಪರಾಶರರು
ದ್ವೀಪದಲ್ಲಿರಲು ನೀ ಪವಳಿಸಿದೆ
ಶಾಪದಿಂದ ಕ್ರಿಮಿರೂಪ ಪೊಂದಿದವಗೆ
ಭೂಪತನವನಿತ್ತ ದ್ವೈಪಾಯನಾಖ್ಯ 2
ಶೃತಿಗಳರ್ಥ ಮಂದಮತಿಗಳರಿಯದಿರೆ
ಹಿತದಿ ಬ್ರಹ್ಮಸೂತ್ರತತಿಗಳನ್ನೆ ರಚಿಸಿ
ಭಾಗವತ ವರ ಮಹಾಭಾ-
ರತಗಳನ್ನು ರಚಿಸಿ ಅತಿ ಪ್ರಸನ್ನರಾದ 3