ಒಂದೇ ಬ್ರಹ್ಮವು ಮತ್ತೊಂದಿಲ್ಲವುಇದ್ದುದು ಬ್ರಹ್ಮವು ಒಂದೇಒಂದನು ಎರಡಾಗಿ ಮಾಡುವುದೆಂತೈಮಾಡಲು ಕೆಡುವನು ಮುಂದೆ 1
ಕನಕದಿಂದ ಒಡವೆ ಬಹಳಾಗಲು ಒಡವೆಗೆಲ್ಲಕನಕವೊಂದೇ ಘನ ಬ್ರಹ್ಮದಿಂದ ನಾನಾ ಜೀವವಾಗೆನಾನಾ ಜೀವಕೆ ಬ್ರಹ್ಮವೊಂದೇ2
ಲೋಹಗಳಿಂದಲಿ ಅನೇಕ ವಿಧವಿರೆಅನೇಕ ವಿಧಕೆ ಲೋಹವೊಂದೇಮಹಾಬ್ರಹ್ಮಾದಿ ಮಹತ್ತು ಅಣುವಿರೆಮಹತ್ತು ಅಣುವಿಗೆ ಬ್ರಹ್ಮವೊಂದೇ 3
ಬೀಜದಿಂದ ಬೀಜವನೇಕವಾಗಲುಅನೇಕ ಬೀಜಕೆ ಬೀಜವೊಂದೇತೇಜ ಚಿದಾನಂದ ಬ್ರಹ್ಮವು ಸರ್ವವುಆ ಸರ್ವಕೆ ಬ್ರಹ್ಮವು ತಾನೊಂದೆ 4