ಒಟ್ಟು 9 ಕಡೆಗಳಲ್ಲಿ , 3 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನ ಮಾಡಿ ತೀರುವೆ ಸದ್ಗುರುನಾಥಗೆ ಏನಮಾಡಿ ತೀರುವೆನೀನೆಯು ಬ್ರಹ್ಮವೆಂದು ಯನ್ನಕೈಯಲಿ ಹಿಡಿದು ಕೊಟ್ಟ ಪ ವೇದಕ್ಕೆ ನಿಲುಕದಿಹ ಷಣ್ಮತಗಳ ವಾದಕ್ಕೆ ತೋರದಿಹನಾದಕ್ಕೆ ಬೇರಿಹ ನಾಮರೂಪವಳಿದಿಹಆದಿಯು ನೀನೆಯೆಂದು ಯನ್ನಕೈಯಲಿ ಪಿಡಿದು ಕೊಟ್ಟ 1 ಬುದ್ಧಿ ಮನಕೆ ಹೊರತಾ ತತ್ವಂಗಳಲಿದ್ದ ಗುಣಕೆ ಅತೀತಶುದ್ಧ ಬ್ರಹ್ಮವು ನೀನು ಸಿದ್ಧಾ ಸಿದ್ಧಾಂತೆಂದುಮುದ್ದಿಸಿ ನಿನ್ನನು ಎನ್ನ ಕೈಯಲಿ ಹಿಡಿಕೊಟ್ಟ2 ಕಾರ್ಯ ತನುವ ಧರಿಸಿ ಜನ್ಮ ಜನ್ಮಾದಿ ತೋರುವ ಜೀವವೆನಿಸಿಕಾರ್ಯ ಕಾರಣಾತೀತನಾದ ಚಿದಾನಂದನು ಬೇರಿಲ್ಲನೀನೇ ಎಂದು ಎನ್ನ ಕೈಯಲಿ ಹಿಡಿದು ಕೊಟ್ಟ 3
--------------
ಚಿದಾನಂದ ಅವಧೂತರು
ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ ಉದಯಾಸ್ತಮಾನವಿಲ್ಲದೆ ಸದೋದಿತ ಭಾಸುತಿದೆ ಧ್ರುವ ವಸ್ತುವಿದೆ ನಿತ್ಯವಾದ ಅತ್ತ್ಯೋತ್ತಮಾನಂದಬೋಧ ಎತ್ತ ನೋಡಿದರತ್ತ ಹತ್ತಿಲೆ ಸೂಸುತಲ್ಯದೆ 1 ಸತ್ಯಸದಾನಂದೋಬ್ರಹ್ಮ ನಿತ್ಯತೃಪ್ತ ನಿರುಪಮ ಅತ್ತಿತ್ತಲಾಗದೆ ಪೂರ್ಣಮತ್ತವಾಗ್ಯೆನ್ನೊಳಗದೆ 2 ಗುಪಿತ ನಿಜ ಸಕಲಾಗಮ ಪೂರಿತ ಶುಕಾದಿಗಳೂ ಸೇವಿತ 3 ಸರ್ವಸಾಕ್ಷಿ ಸರ್ವಾಧಾರ ಸರ್ವರೊಳು ಸರ್ವೇಶ್ವರ ಸರ್ವಮಿದÀಂ ಖಲುಬ್ರಹ್ಮವೆಂದು ಶ್ರುತಿ ಸಾರುತಿದೆ 4 ಇಹಪರ ಪರಿಪೂರ್ಣ ಮಹಾಗುರು ನಿರಂಜನ ಮಹಿಪತಿ ಬಾಹ್ಯಾಂತ್ರದೊಳು ಸಹಕಾರ ಸಾಕ್ಷಾತ್ಮವಿದೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋ ಪ ಭಾನುವ ನೋಡಲು ಒಳಕಂಡಿಯ ಹಂಗ್ಯಾಕೆನೀನು ನಿನ್ನರಿವುದಕೆ ಯೋಗಗಳ ಸಾಧನ ಬೇಕೆ 1 ನಳಿನ ಸಖನ ನೋಡುವುದಕೆ ಬೆಳಕನು ಕೋರಲುಬೇಕೆಬಲು ನಿನ್ನನು ಕಾಣುವುದಕೆ ಸಾಧಕರ ಸಾಧನ ಬೇಕೆ 2 ಯೋಗಗಳೆಂಬುವುದಿನ್ನು ಜೀವ ಭ್ರಾಂತಿಯೆನ್ನುಈಗಲು ಇತರರಿಲ್ಲೆನ್ನು ಚಿದಾನಂದ ಸದ್ಗುರು ತಾನೆ ಎನ್ನು 3
--------------
ಚಿದಾನಂದ ಅವಧೂತರು
ಏಕೆ ಕೆಡುವಿರಿ ಸಂಸಾರವು ಸ್ವಪ್ನವೆಂದು ತಿಳಿಯಬಾರದೇಏಕ ಬ್ರಹ್ಮಾಸ್ತ್ರ ದೇವತೆಯ ಹೊಂದಿ ಜನ್ಮ ಕಳೆಯಬಾರದೆ ಪ ಬಿಸಿಲೊಳು ಬಳಲುವರ ಕಂಡು ನೆರಳಿಗೆ ಕರೆಯಬಾರದೆತೃಷೆಯಿಂದ ನಾಲಗೆ ಒಣಗುತಲಿರೆ ನೀರನೆರೆಯಬಾರದೆಹಸಿದು ಬಂದವರಿಗೆ ಇದ್ದದ್ದರೊಳಗೆ ಅನ್ನವ ನೀಡಬಾರದೆಹುಸಿನುಡಿಯ ಬಿಟ್ಟು ಸತ್ಯವಾಕ್ಯವನೀಗ ಆಡಬಾರದೆ1 ಸತಿ ಸುತರು ಸ್ವಾರ್ಥ ಮರೆತು ಮುಕ್ತ ಮನದಿ ಧರ್ಮ ಮಾಡಬಾರದೆಹಿತದವರು ಒಬ್ಬರಾದರೂ ಹಿಂದೆ ಬರುವರೇ ನೀನೇ ನೋಡಬಾರದೆಮತ ಅಭಿಮಾನ ಮರೆತು ಆತ್ಮಾಭಿಮಾನವ ಮರೆಯಬಾರದೆ 2 ನಂಟರ ಮೇಲೆ ಚಿಂತೆಯಿದ್ದಂತೆ ಗುರುವಿನ ಮೇಲೆ ಇರಬಾರದೆಕುಂಠಿಣಿ ಮನೆಗೆ ಹೋಗುವಂತೆ ಮಠಕೆ ಹೋಗಬಾರದೆಒಂಟೆಯಂದದ ಮೋರೆಯನೀಗ ಹಿರಿಯರ ಕಂಡು ತಗ್ಗಿಸಬಾರದೆ 3 ಸಾಧುಗಳು ಕಾಣೆ ಭಕ್ತಿಯಲೆದ್ದು ಚರಣಕೆ ಎರಗಬಾರದೇವ್ಯರ್ಥವಾದದ ಮಾತನು ಬಿಟ್ಟು ಸುಮ್ಮನೆ ತಾನಿರಬಾರದೆಕ್ರೋಧದ ಬೇರನು ಮೊಳಕೆಯಸಹಿತ ಕೀಳಬಾರದೆಮಾರ್ಗದಿ ಕಲ್ಲುಮುಳ್ಳುಗಳಿರೆ ಕಡೆಗೆ ತೆಗೆದೆಸೆಯಬಾರದೆ4 ನಾನಾರು ಎಂದು ವೇದಾಂತ ವಾಕ್ಯದಲಿ ನಿನ್ನ ಅರಿಯಬಾರದೆವಾದವ ಬಿಟ್ಟು ಚಿದಾನಂದನ ಚರಣದಿ ಹೊರಳಬಾರದೆಮೇದಿನಿ ಪೂರ್ಣ ಸರ್ವಬ್ರಹ್ಮವೆಂದು ತಾನು ಅರಿಯಬಾರದೆಭೇದಾ ಭೇದಕೆ ಹೊರಗಾದ ಬಗಳೆಯ ಕೂಡಬಾರದೆ 5
--------------
ಚಿದಾನಂದ ಅವಧೂತರು
ಏನು ನಡತೆಯೋ ಏಕೆ ಕೆಡುವೆಯೋಮನುಜ ಜನ್ಮವನ್ನು ವ್ಯರ್ಥಮಾಡಿಬಿಟ್ಟೆ ಮೂರ್ಖ ಪ ಹಂಡತಿ ಕದಪನು ನೀನು ಸವರಿ ನೋಡುವಂತೆ ಮೊನ್ನೆಕೊಂಡ ಸಾಲಗ್ರಾಮವನ್ನು ಮುಟ್ಟಬಾರದೇ ತಡಹಬಾರದೇರಂಡೆಯರ ವಿಷಯವಾಗಿ ಕಾಲಿಗೆರಗಿದಂತೆ ತತ್ತ್ವಪಂಡಿತರ ಚರಣಕ್ಕೆ ಬೀಳಬಾರದೆ ಹೊರಳಬಾರದೆದುಂಡು ಮುತ್ತಿನ ಸರವ ಸತಿಗೆ ಕೊಂಡು ಹಾಕಿದಂತೆಪಿಂಡಾಂಡ ವಿವರಿಪರಿಗೆ ವಂದನೆ ಮಾಡಬಾರದೇಭಂಡ ಮಾತನು ನಾರಿ ಕಿವಿಯ ಖಂಡಿ ಯೊಳು ಪೇಳ್ದ ತೆರದಿಸುವಚನ ಸಾಧುಗಳೊಳು ಉಸುರಬಾರದೇ ಅರುಹಬಾರದೆ 1 ನನ್ನ ಮಕ್ಕಳೆಂದು ನೀನು ಬನ್ನಬಟ್ಟ ತೆರದಿ ಇತರಸಣ್ಣವರ ಮೇಲೆ ನೀನು ಕರಗಬಾರದೆ ತೋರಬಾರದೆಹೊನ್ನು ಹಣವು ಬಿದ್ದುಯಿರೆ ಹೆಂಟೆಯೆನುತಲಾಗ ಎರಡುಕಣ್ಣು ತೆರೆದು ದೃಷ್ಟಿಸಿ ನೋಡಬಾರದೆ ಕಾಣಬಾರದೆಮನ್ನಣೆ ಎಂಬುದನ್ನು ಸೂಕರನ ವಿಷೈ ಸಮನುಎನ್ನುತಲಿ ಚಿತ್ತದಲ್ಲಿ ಎಣಿಸಬಾರದೆ ಹತ್ತಬಾರದೆಉನ್ನತದ ಜೀವರಾಶಿ ಎಲ್ಲ ಒಬ್ಬ ಶಿವನು ಎಂದುಭಿನ್ನ ಕಳೆದು ಆತ್ಮ ಸುಖದಿ ಮುಳುಗಬಾರದೆ ಬೆಳಗಬಾರದೆ 2 ನಾನಾ ಜನ್ಮ ಜನ್ಮ ತಿರುಗಿ ನರನ ಜನುಮ ಬಂದುನಾನಾರೋ ಎಂದು ನಿನ್ನ ತಿಳಿಯಬಾರದೆ ಅರಿಯಬಾರದೆಜ್ಞಾನಿಗಳ ಮುಖಗಳಿಂದ ನಿನ್ನ ಒಳಗೆ ನಿನ್ನ ಕಂಡುನಾನೆ ಬ್ರಹ್ಮವೆಂದು ನಿಜವ ಕಾಣಬಾರದೆ ಕೂಡಬಾರದೆನಾನಾಧ್ವನಿಯು ನಾನಾಕಳೆಯು ದೇಹದೊಳು ತೋರುತಿರಲುಆನೆಯಂತೆ ನೀನು ಈಗ ತೊನೆಯಬಾರದೆ ತೂಗಬಾರದೆತಾನಾದ ಚಿದಾನಂದ ಗುರುವು ತಾನೆ ತಾನೆಯಾಗಿನಾನು ನೀನು ಎಂಬುದನ್ನು ತಿಳಿಯಬಾರದೆ ಕಳೆಯಬಾರದೆ 3
--------------
ಚಿದಾನಂದ ಅವಧೂತರು
ತಪ್ಪುವುದೇ ಬ್ರಹ್ಮಕೆ ಗುರಿಯು ನೀನುತಪ್ಪಿದರು ತಾನು ತಪ್ಪದು ಅರಿಯೋ ನೀನು ಪ ಕರವ ಭೂಮಿಗೆ ಬಡಿಯಲು ಪೆಟ್ಟಹೊರಗನೆ ಮಾಡುವುದು ಆವ ಪರಿಪರಿಪೂರ್ಣ ಬ್ರಹ್ಮ ತುಂಬಿರಲು ನೀನುಪರವೆಂದು ಕಾಣೆ ಸಂಶಯವೆ ನಿಜವಿರಲು 1 ಗುಡ್ಡಕೆ ಗುರಿಯ ನೋಡಿದೆ ಅದುಅಡ್ಡಬಿಟ್ಟು ಬೇರೆ ನಿಲ್ಲುವುದೆ ನೋಡೆಖಡ್ಡಿಕೊಳ್ಳದು ಬ್ರಹ್ಮವಾಡೆ ನಿನ್ನದೊಡ್ಡ ಬ್ರಹ್ಮವೆನಲು ಸಂಶಯ ನೋಡೆ 2 ಆಕಾಶ ನೋಡುವುದೇ ತಾನು ಆಆಕಾಶ ನೋಡಲು ನೂಕು ನುಗ್ಗೇನುಏಕ ಚಿದಾನಂದ ನೀನು ಜಗದೇಕ ಬ್ರಹ್ಮವೆಂದು ನಿನ್ನ ನೀನೇ ಕಾಣ 3
--------------
ಚಿದಾನಂದ ಅವಧೂತರು
ನಿನ್ನ ಮಾತ ಕೇಳಿ ಗಾಳಿ ನಿಲ್ಲಬೇಕೆ ಶೀತವನ್ನು ಸಹಿಸು ನೀನು ಮಾಯಾಬಲೆಗೆ ಸಿಲುಕೆ ಪಮುನ್ನ ಕಾಯವೆತ್ತಬೇಡವೆಂದಡದಕೆ ನೀನುಧನ್ಯನಾಗದೀಗ ಋತುಧರ್ಮಕಳುಕೆ ಅ.ಪಬಲೆಯ ಬೀಸಬೇಡವೆಂದು ಪಕ್ಷಿ ಪೇಳಲು ಕೇಳಿಬಲೆಯ ಬೀಸುದಿಪ್ಪುದೆಂತು ಪಕ್ಷಿ ಸಿಕ್ಕಲುಅಳುಕಿ ಸಾದು ಬಲೆಯ ಬಾಧೆ ಬಲಿಗನಾಗಲು ಹಾಗೆಛಳಿಯು ನಿನ್ನ ಬಾಧಿಸದು ಪರಮನಾಗಲು1ಬಲಿಗನಂತು ಪಕ್ಷಿ ಭಕ್ಷಣೆಯ ಮಾಳ್ಪನು ಹಾಗೆನಳಿನನಾಭ ತಾನು ವಿಷಯಾಸಕ್ತನೊ ಯೇನುಸಿಲುಕದಿಪ್ಪನೊಂದರೊಳಗೆಂಬುದಿದೇನು ಎಂದುಬಲಿಯವಾಗೆ ಶಂಕೆ ಮನವೆ ನಿನಗೆ ಪೇಳ್ವೆನು 2ಇಲ್ಲವಾದ ಜಗª ಮಾಯೆುಂದ ನಿರ್ಮಿಸಿ ತಾನುಅಲ್ಲಿ ಪೊಕ್ಕು ಉಳ್ಳದೆಂಬಹಾಗೆ ನಟಿಸಿನಿಲ್ಲಲೀಸದಿದನು ಮತ್ತೆ ಕ್ಷಣದೊಳಳಿಸಿ ಕೂಡೆನಿಲ್ಲುವನು ನಿಜದಿ ನಿರ್ವಿಕಾರಿಯೆನಿಸೀ 3ತಾನು ಸುಖಿಸುವಂತೆ ಎನ್ನ ಸುಖಿಸಬಾರದೆ ಲೋಕದೀನಬಂಧುವೆಂಬ ನುಡಿಯ ಹೋಗಲಾಡದೆಮಾನವರ ತನ್ನ ಹಾಗೆ ಕಾಣಬಾರದೆ ಎಂದುನೀನು ಕೇಳೆ ಪೇಳ್ವೆ ನಿನ್ನ ಮಾತ ಮೀರದೆ 4ಆನಂದರೂಪಗೆ ದುಃಖ ತೋರಿಸುವದೆ ಆತನೀನೆಂದೊಮ್ಮೆ ತಿಳಿಯೆ ನಿನಗೆ ದುಃಖ ಮರೆಯದೆಭಾನುವಿನ ಮುಂದೆ ತಮವು ನಿಲ್ಲಬಲ್ಲುದೆ ಜೀವನಾನೆಂಬುದರಿಂದ ಸುಖವು ಮರೆಸಿಕೊಂಡಿದೆ 5ವೇದದಲ್ಲಿ ಪೇಳಿದಂತೆ ಋಗಳೆಲ್ಲರೂ ತಾವುವೇದವೇದ್ಯಬ್ರಹ್ಮವೆಂದು ಸುಖವ ಕಂಡರೂಆದಿಮಧ್ಯತುದಿಗಳಲ್ಲಿ ಬ್ರಹ್ಮವೆಂಬರು ಅದಸಾದರದಿ ಸಾಧಿಸಲು ಸುಖವ ಕಾಂಬರು 6ಅರಿವು ಮರವೆ ಎರಡು ಬಳಿಕ ಕರಣಧರ್ಮವೂ ತಾವುಕರಣಸಾಕ್ಷಿಯಾದ ನಿಜವನರಿಯಲರಿಯವುಕುರುಹನಿಟ್ಟು ನೋಡಲರಿವಿನೊಳಗೆ ಬೆರೆವವೂ ಕೂಡೆತಿರುಪತೀಶ ವೆಂಕಟೇಶನೊಳಗೆ ಬೆರೆವವೂ7ಕಂ||ತನು ತಾ ಜೀವನ ನುಡಿಗೇಳ್ದನುವಾಗಿ ಮೇಲೆ ಮುಕ್ತಿಮಾರ್ಗಕ್ಕೆತನದಿಅನುಕೂಲನಪ್ಪೆನು ನಾ ನಿನ್ನನು ಮೀರೆನೆನುತ್ತ ಪೇಳುತ ತನುವಾದಿಪುದು
--------------
ತಿಮ್ಮಪ್ಪದಾಸರು
ಯೋಗ ಯೋಗಗಳೆಂದು ಕಸಿವಿಸಿ ತಾನೇಕೆಯೋಗವು ತಾನದೆ ಬಂಧಯೋಗವ ಬಿಟ್ಟು ತನ್ನನೆ ಬ್ರಹ್ಮನೆಂದೆನೆಯೋಗವೆ ರಾಜಯೋಗವೆಂದಪವ್ರತನೇಮ ಶೌಚದಿ ಮುಕ್ತಿಯು ಎಂದನೆವ್ರತನೇಮ ಶೌಚವು ಬಂಧಪ್ರತಿಯಿಲ್ಲದಾ ವಸ್ತು ತಾನೆಂದು ಚಿಂತಿಸೆಅತಿರಾಜಯೋಗವೆಂತೆಂದ1ಮೂರ್ತಿಧ್ಯಾನಷ್ಟಾಂಗದಲಿ ಮುಕ್ತಿಯೆಂದನೆಮೂರ್ತಿಧ್ಯಾನಷ್ಟಾಂಗ ಬಂಧಕರ್ತೃನಾ ಸರ್ವ ಕಾರಣವೆಂದು ಚಿಂತಿಸೆಕರ್ತೃರಾಜಯೋಗವೆಂದ2ಲಯ ಲಕ್ಷದಿಂದ ಮುಕ್ತಿ ಎಂದೆನೆಲಯ ಲಕ್ಷ ತಾನದು ಬಂಧಸ್ವಯಂ ಬ್ರಹ್ಮವೆಂದು ತಾನೆ ಚಿಂತಿಸಿನಿಯಮವು ರಾಜಯೋಗವೆಂದ3ಖೇಚರಿ ಭೂಚರಿಯಲಿ ಮುಕ್ತಿ ಎಂದೆನೆಖೇಚರಿ ಭೂಚರಿ ಬಂಧವಾಚಾತೀತ ವಸ್ತು ತಾನೆಂದು ಚಿಂತಿಸೆಗೋಚರ ರಾಜಯೋಗವೆಂದ4ಎರಡಕ್ಕೆ ತಾವಿಲ್ಲ ಇಹನೊಬ್ಬನೇ ತಾನೇಎರಡಾಗಿ ಕಾಂಬುದೊಂದೇ ಬಂಧಗುರುಚಿದಾನಂದನ ಸಾಕ್ಷಾತ್ಕಾರವೆಂದೆನೆಗುರಿಯದು ರಾಜಯೋಗವೆಂದ5
--------------
ಚಿದಾನಂದ ಅವಧೂತರು