ಅಷ್ಟಮಠದ ಯತಿಗಳು
ನೋಡಿ ದಣಿದವೆನ್ನ ಕಂಗಳು ಉಡುಪಿಯಲ್ಲಿರುವ
ಅಷ್ಟಮಠದ ಶ್ರೀಪಾದಂಗಳವರ ಪ.
ಸುಧಿಂದ್ರತೀರ್ಥ ಗುರುವರ್ಯರು
ಬಂದ ಭಕ್ತರಿಗೆ ಕರುಣಾಮೃತ ಮಳೆಗರೆವರು
ಶ್ರೀಹರಿಯ ತೋರುವರು
ನೇಮದಿಂದಲಿ ಇವರ ನಾಮ ನೆನೆದರೆ
ಸ್ವಾಮಿ ಶ್ರೀರಾಮನು ಪ್ರಸನ್ನನಾಗುವನು 1
ವಿಭುದಪ್ರಿಯತೀರ್ಥ ಗುರುವರ್ಯರು
ಬಂದಾ ದುರ್ಜನರ ಮನವನು ಜಯಿಸುವರು
ಮಹಾನುಭಾವರು ತರ್ಕನ್ಯಾಯ ವೇದಾಂತ ನಿಪುಣರು
ಮಹಾಗುಣವಂತರು 2
ವಿದ್ಯಾಪುಣ್ಯತೀರ್ಥ ಶ್ರೀಪಾದಂಗಳವರು
ಬಂದ ಸೇವಕರಿಗೆ ಬ್ರಹ್ಮವಿದ್ಯಾ ಪಾಲಿಸುವರು
ರ್ದುಜನರ ದುರ್ಬುದ್ಧಿ ಒದ್ದಿ ಕೆಡಹುವವರು 3
ವಿಶ್ವೇಂದ್ರತೀರ್ಥರು ಈ ಗುರುವರ್ಯರು
ವಾದಿರಾಜರ ಪೂಜಿಸುವರು
ಜಗಕೆ ಸುಖವ ಸುರಿಸುವರು ಭೂತಪ್ರೇತಪಿಶಾಚಾದಿ
ಮಾಡುವರು ಭಕ್ತರಘ ಕಡಿವರು4
ಇವರು ಭವಸಮುದ್ರವ ನೀಗಿಸುವರು
ಶಿಷ್ಯರಿಗ್ಹರುಷ ಪಡಿಸುವುದು
ಆನಂದದಿಂದಲ್ಲಿ ಹೃನ್ಮಂದಿರದಲಿ ಇಂದಿರೇಶನ ನೋಡುವರು 5
ರಘುಮಾನ್ವತೀರ್ಥ ಗುರುವರ್ಯರು ಲೋಕಮಾನ್ಯರು
ಭಕ್ತರಿಗತಿಪ್ರಿಯರು ಮಹಾನುಭಾವರು
ಅನ್ನದಾನದಲಿ ದೈನ್ಯರು ಆನಂದ ಭರಿತರು ಸುರರಿವರು 6
ಲಕ್ಷ್ಮೀಂದ್ರತೀರ್ಥ ಶ್ರೀಗಳವರು
ಇವರು ತಮ್ಮ ತುಷೆಯೊಳಗಿಟ್ಟುಕೊಂಡು
ರಕ್ಷಿಸುವರು ಲಕ್ಷ್ಮೀರಮಣನ್ನ ಪಾದಾ
ಅಪೇಕ್ಷೆಯ ಮಾಡುಸುವರು ಹರಿಯ ಭಜಿಸುವರು 7
ವಿಶ್ವಮಾನ್ಯತೀರ್ಥ ಈ ಗುರುವರ್ಯರು
ಬಂದ ಭೂಸುರರಿಂದ ಅನುವಾದ ಮಾಡುವರು
ನೋಡುವರಿಗಾನಂದ ಪಡಿಸುವರು
ಸುಜ್ಞಾನ ಯತಿವರ್ಯರು 8
ಅಷ್ಟಮಠದ ಯತಿಗಳ ಮಹಿಮೆಯನ್ನು
ನಿಷ್ಠೆಯಿಂದಲಿ ಪೇಳುವನು ಅವನು ಸುರನು
ಇವರ ದೋಷಿ ಎಂದವರನೇ ನರಕಾಧಿ ಬಾಧಿಸುವುದು
ಕೃಷ್ಣನ ಪೂಜಿಸುವರು 9