ಬ್ರಹ್ಮವೆಂಬಿರಿ ನಿಮ್ಮ ಬರಿದೆ ಮಾತಲ್ಲದೆಬ್ರಹ್ಮನಾದವನ ಬಗೆಯನು ಹೇಳುವೆ ಕೇಳಿ ಪ
ಆಶಾಪಾಶಗಳಿಗೆ ವಶವಾಗದವ ಬ್ರಹ್ಮಮೋಸಹೋಗದೆ ಮಾಯೆಗೆ ಇರುವವ ಬ್ರಹ್ಮಕೂಸಿನಂದದಿ ಭಾವ ಕೂಡಿಹನವ ಬ್ರಹ್ಮಘಾಸಿಯಾಗನು ಮದನಗೆ ಅವನು ಬ್ರಹ್ಮ 1
ಸತಿಸುತರಿಚ್ಛೆಯ ಸಮನಿಸದವ ಬ್ರಹ್ಮಇತರರ ವಾಕ್ಯಕೆ ಕಿವಿಗೊಡದವ ಬ್ರಹ್ಮಗತಿ ಯಾವುದೆನಗೆಂದು ಗುಣಿಸುತಿಪ್ಪವ ಬ್ರಹ್ಮಅತಿ ಹರುಷದಿಂ ಬಾಳುತಿರುವವನು ಬ್ರಹ್ಮ2
ಸಕಲ ವಿಶ್ವವು ಎನ್ನ ಸರಿಯು ಎಂಬುವವ ಬ್ರಹ್ಮಸುಖ ದುಃಖವನು ಸಮದೃಷ್ಟಿಯಲಿ ನೋಡುವವ ಬ್ರಹ್ಮಭಕುತಿ ಭಾವನೆಯಿರುವ ಮಾನವನು ತಾ ಬ್ರಹ್ಮಮುಕುತಿ ಮರ್ಗದಲಿರುವ ಯೋಗಿಯವ ಬ್ರಹ್ಮ 3
ಹುಚ್ಚರಂದದಿ ನೋಡೆ ಹುದುಗಿಕೊಂಡಿಹ ಬ್ರಹ್ಮಅಚ್ಚರಿಯ ಅವನಾಟ ತಿಳಿವವನು ಬ್ರಹ್ಮನಿತ್ಯಕಾಲದಿ ಜ್ಞಾನ ಬೇಕೆನ್ನುವವ ಬ್ರಹ್ಮಕೊಚ್ಚಿತೆಂಬನು ಎಲ್ಲ ಕುಲಜ ಬ್ರಹ್ಮ4
ದಾಸದಾಸರ ದಾಸನಾದವನೆ ಬ್ರಹ್ಮಈ ದೇಹದಾ ಹಂಗ ತೊರೆದವನು ಬ್ರಹ್ಮಭಾಸುರ ಚಿದಾನಂದನ ಭಜಿಪ ಭಕ್ತನೆ ಬ್ರಹ್ಮವಾಸರಿಲ್ಲವೋ ಈ ವಾಕ್ಯಕೆಂಬುವವ ಬ್ರಹ್ಮ5