ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾದವನಾಲಿಸೋ ನಿತ್ಯದಿ ನಾದದೊಳಗಿನ ನಾದ ಸುನಾದಓಂಕಾರ ನಾದವನರಿವನೆ ಧನ್ಯ ಯೋಗೀಶ ಪ ನಾದದಿಂದಲಿ ಅಷ್ಟಪಾಶವಿಕ್ಕಡಿಯಹುದುನಾದದಿಂದಲಿ ಮದಗಳೆಂಟುಡುಗಿ ಹೋಗುವವುನಾದದಿಂದಲಿ ಅರಿಗಳರುವರೂ ತೊಲಗುವರುನಾದದಿಂದಲಿ ಕರ್ಮವು ದೂರಹುದುನಾದದಿಂದಲಿ ಧರ್ಮವು ವೃದ್ಧಿಪುದುನಾದದಿಂದಲಿ ಬ್ರಹ್ಮವು ಯೋಗೀಶ 1 ನಾದದಿಂದಲಿ ಮೌನ ತನಗೆ ತಾನಾಗುವುದುನಾದದಿಂದಲಿ ಚತುಸ್ಸಾಧನವು ದೊರಕುವುದುನಾದದಿಂದಲಿ ಸಪ್ತ ಭೂಮಿಕೆಗಳಾಗಿಹವುನಾದದಿಂದಲಿ ಜ್ಞಾನವು ಸ್ಥಿರವಹುದುನಾದದಿಂದಲಿ ಚಿತ್ರವಚಲವಹುದುನಾದದಿಂದಲಿ ಸರ್ವರು ಯೋಗೀಶ 2 ನಾದದಿಂದಲಿ ಬುದ್ಧಿ ನಿರ್ಮಲವಾಗುವುದುನಾದದಿಂದಲಿ ಮನವು ಹಿಡಿತದಲಿರುತಿಹುದುನಾದದಿಂದಲಿ ದೃಕ್‍ದೃಶ್ಯ ಸಾಧನವಹುದುನಾದವೆ ಬ್ರಹ್ಮವಹುದುಚಿದಾನಂದನಾದವನ ತೋರಲು ಬಹುದು ಅವನಲಿಭೇದವಿಲ್ಲದೆ ಕೂಡಲುಬಹುದು ಯೋಗೀಶ 3
--------------
ಚಿದಾನಂದ ಅವಧೂತರು