ಬಾರಮ್ಮ ಭಾಗ್ಯನಿಧಿಯೆ | ಸಿರಿಯೆ ಪ
ಬಾರಮ್ಮ ನಿನ್ನ ಪಾದಾರವಿಂದ ತೋರಲು ಅ.ಪ
ಸರಸಿಜಾಕ್ಷನ ವಕ್ಷ ಮಂದಿರೆ
ಇಂದಿರೆ ಸರಸಿಮುದವೆರಸಿ ನಿನ್ನರಸನೊಡನೆನೀ 1
ಸೀತಾರುಕ್ಮಿಣ್ಯಾದ್ಯವತಾರಿಣಿ ಬುಧ-
ವ್ರಾತ ಮನಃ ಪದ್ಮ ವಿಹಾರಿಣಿ
ಚೇತೋದ್ಭವ ಜನನೀ ಶ್ರೀತರುಣೀಮಣಿ 2
ಬ್ರಹ್ಮರುದ್ರೇಂದ್ರಾದಿ ಸುರಸೇವಿತೆ
ಬ್ರಹ್ಮಾಣಿ ಗಿರಿಜಾ ಶಚೀವಂದಿತೆ ಪರ-
ಬ್ರಹ್ಮ ಗುರುರಾಮವಿಠಲನ ದಯಿತೆ 3