ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ ನಿರ್ತವಾಗಿ ಪೂರ್ಣಬೆರ್ತು ಕೂಡುವಾ ಬನ್ನಿ ಗುರ್ತದಿಂದ ಧ್ರುವ ಸೂರ್ಯನಿಲ್ಲದ ಸೂಪ್ರಕಾಶ ತುಂಬೇದ ಹೇಳಲೇನ ತೂರ್ಯಾವಸ್ಥೆಯೊಳು ಬೆರೆದು ಕೂಡಿದ ಜ್ಞಾನಿಬಲ್ಲ ಖೂನ ಬರಿಯ ಮಾತನಾಡಿ ಹೊರಿಯ ಹೇಳುವದಲ್ಲ ಅರುವ್ಹೆಸ್ಥಾನ ಪರಿಯಾಯದಿಂದ ಪರಿಣಿಮಿಸಿ ನೋಡಿ ಪರಮ ಪ್ರಾಣ 1 ಚಂದ್ರನಿಲ್ಲದೆ ಬೆಳದಿಂಗಲು ಬಿದ್ದದ ಬಲು ಬಹಳ ಇಂದ್ರಾದಿಕರೆಲ್ಲ ಹರುಷದಿ ನೋಡುವರು ಸರ್ವಕಾಲ ಸುಂದ್ರವಾದ ಸುವಸ್ತುವಳಗೊಂದದೆ ಅಚಲ ಸಾಂದ್ರವಾದ ಸುಖತುಂಬಿ ತುಳುಕತದೆ ಥಳ ಥಳ 2 ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬ್ಯಾಗ ಸ್ವಾನುಭವದಲನುಭವಿಸುವದು ಬ್ರಹ್ಮಭೋಗ ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ ದೀನ ಮಹಿಪತಿಗೆ ತಾನೆತಾನಾದ ಸದ್ಗುರುವೀಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಜ್ಞಾನವೊ ಇದೇ ಮಾನವೊ ಧ್ರುವ ಕೇಳಿ ಕೇಳಿ ಕೇಳಿ ಕೇಳುವ ಮಾತಿದು ಕೇಳಿದಂತೆ ನೀವು ಬಾಳಿ ಬಾಳಿದ ಮ್ಯಾಲಿನ್ನು ಹೇಳ್ಯಾಡುವ ಮಾತಿನ ಮೊಳೆ ಅಂಕುರನೆ ಸೀಳಿ ಒಳಿತಾಗಿದೆ ಪೂರ್ಣ ಕೇಳಿ ಕಳೆದ ದುಸ್ಸಂಗವು ಕೇಳುವನಾದರೆ ತಿಳಿಸಿಕೊಡುವನು ಗುರು ಹೇಳಿ 1 ಸೂಟಿ ತಿಳಿದು ನಿಜಧಾಟಿಗೆ ಬಂದರೆ ಕೋಟಿಗವನೇ ಒಬ್ಬ ಙÁ್ಞನಿ ನೀಟಾಗಿಹ್ಯ ಘನಕೂಟವು ತಿಳಿದರೆ ನೋಟದಲ್ಲವ ಬಲು ತ್ರಾಣಿ ನೋಟದಲ್ಲಿಹುದು ತ್ರಾಟಿವ ಬಲ್ಲನೆ ಬೂಟಕ ದೇಹಾಭಿಮಾನಿ ನಾಟಿ ಮನದೊಳು ಮಾಟಿಸಿಕೊಂಬುದು ಘಟಿಸಿತಿದೆ ಸಾಧನ 2 ನೆನೆಯಲಿಕ್ಕೆ ಮನ ಘನಬೆರದಾಡುವ ಖೂನಾಗುವದಿದೆ ರಾಜಯೋಗ ಅನುಭವಿಗಳಿಗೆ ಅನುಕೂಲವಾಗಿನ್ನು ಅನುವಾಗಿದೋರುದು ಬ್ಯಾಗ ಭಾನುಕೋಟಿತೇಜ ತಾನೆತಾನಾದನು ಎನ್ನ ಮನದೊಳು ಈಗ ದೀನ ಮಹಿಪತಿಗೆ ಸನಾಥಮಾಡುವ ಸ್ವಾನುಭವದ ಬ್ರಹ್ಮಭೋಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿ ನೋಡಿ ನೋಡುದರೊಳಗೆ ನೋಡಿದ ನೋಟ ಸದ್ಭನವಾಗುವ್ಹಾಂಗ ಧ್ರುವ ಮನದಿಂದಲಿ ಮನನೋಡುವ ಯೋಗ ಘನಸುಖ ತೋರುವದಿದೆ ಬ್ರಹ್ಮಭೋಗ 1 ಕಣ್ಣಿನಿಂದಲಿ ಕಣ್ಣುದೆರುವ್ಹಾಂಗ ಮಾಡಿ ಚನ್ನಾಗಿ ಉದಯವಾಗುದು ಘನ ಮೂಡಿ 2 ಭಾವ ಬಲಿದು ನೋಡುವುದು ಬಲುಚೆಂದ ಆವಾಗ ಮಹಿಪತಿಗಿದೆ ಬ್ರಹ್ಮಾನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಫುಗಡಿ ಹಾಕಿ ಹೀಂಗ ಸುಗಮದಿಂದ ಬ್ಯಾಗ ತ್ರಿಗುಣ ತಿಗಡತನ ಬಿಟ್ಟು ಮಿಗಿಲಮಿರುವ್ಹಾಂಗ ಧ್ರುವ ಬಿಗಿದ ಗಚ್ಚಿಕಟ್ಟಿ ಜಗದೊಳ್ಹಾಕಿ ಫುಗಡಿ ಬಗೆದು ಸಾಧುಸಂಗದೊಳಾಡಿದಾಕಿ ಸುಗಡಿ ಇಗಡತನ ಬಿಟ್ಟು ನೀಗಿ ನಿಜಗೂಡಿ ದುಗುಡ ಭಾವೆಲ್ಲ ಬಿಟ್ಟು ಫುಗಡಿ ಫೂಯೆಂದಾಡಿ 1 ದೇಹ ಭಾವಮರೆದು ಫುಗಡಿ ಹಾಕಿ ಬ್ಯಾಗೆ ಗುಹ್ಯಗೂಢವಿದೆ ನೋಡಿ ರಾಜಯೋಗ ಸೋಹ್ಯದೋರಿಗೊಡುವ ಸದ್ಗುರು ನಿನ್ನೊಳೀಗ ಬಾಹ್ಯಾಂತ್ರದೊಳು ಭಾಸುತಿಹ್ಯ ಬ್ರಹ್ಮಭೋಗ 2 ಫುಗಡಿ ಇದೇ ನೋಡಿ ಯೋಗಸಾಧನ ಮಾಡಿ ಹುಗುವರಿಯನೇ ಹೋಕು ಜಗದ್ಗುರುವಿನ ಕೂಡಿ ಜಗದೀಶನ ಮಹಿಮೆ ಬಗೆಬಗೆಯ ಕೊಂಡಾಡಿ ಸುಗಮಸಾಧನವೆಂದು ಮಹಿಪತಿ ಬೆರೆದ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಡಿ ಸಾಧುಸಂಗ ನೋಡಿ ಅಂತರಂಗ ಧ್ರುವ ಕೇಳಿ ಎನ್ನಮಾತ ಹೇಳುವೆ ನಾ ಹಿತ ಅಳಿಯದಾರ್ಜಿತ ತ್ವರಿತ 1 ಪಥ ಬ್ಯಾಗ ಗೂಢ ರಾಜಯೋಗ ಮಡಬ್ಯಾಡಿ ಸೋಂಗ ನೋಡಿ ಬ್ರಹ್ಮಭೋಗ2 ಠಕ್ಕಠವಳಿ ಅಲ್ಲ ಸುಖಸಾಧು ಬಲ್ಲ ಮಿಕ್ಕವರಿಗೆಲ್ಲ ಸಿಕ್ಕುದು ತಾನಲ್ಲ 3 ಒಮ್ಮನ ಮಾಡಿ ನಿಮ್ಮೊಳಗ ನೋಡಿ ಬ್ರಹ್ಮರಸ ಕೂಡಿ ಸುಮ್ಮನೆ ಸೂರ್ಯಾಡಿ 4 ಇಹ್ಯಪರ ಪೂರ್ಣದಯಾಳು ನಿಧಾನ ಮಹಿಪತಿ ಪ್ರಾಣ ಗುರು ಶ್ರೀಚರಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು