ದೇವನಾ ದರುಶನಾ ಜೀವನಾ ಪಾವನಾ
ಗುರುವಿನಾ ಪ್ರವಚನಾ ಸಾವಿನಾ ನಾಶನಾ ಪ
ಸ್ವಾತ್ಮದ ಜ್ಞಾನೋದಯ ಜಗದಿ ಪೂರ್ಣ ನಿರ್ಭಯ
ಬ್ರಹ್ಮಪದದ ತನುಮಯ ತಾನೇ ಶುದ್ಧ ಚಿನುಮಯ 1
ಜ್ಞಾನದ ಪೂರ್ಣಾನುಭವ ನಿರ್ವಿಕಲ್ಪ ಸ್ಥಿತಿಯೆ ಶಿವಾ
ದುರುಳ ಭವ ಗುರುವಿತ್ತಾತ್ಮಾನುಭವ 2
ಜೀವನ್ಮುಕುತಿ ಆನಂದ ತಿಳಿಯೆ ನೀನೆ ಮುಕುಂದ
ಅರಿತು ನೋಡು ಇದನೆಂದ ಗುರುಶಂಕರನಾ ಕಂದಾ 3