ಕರುಣಾಕರನೀತ ಕರಿಭಯ ಹರಿದಾತ
ಹರಿಪರಂದೈವೀತ ಗುರುನಾಥ ಧ್ರುವ
ಮೂರುಗುಣರಹಿತ ಮೂರುಲೋಕ ವಂದಿತ
ಮುರಹರನಹುದೀತ ಗುರುನಾಥ 1
ಸುರಜನ ಪೂಜಿತ ಪರಮಾನಂದಭರಿತ
ತಾರಕನಹುದೀತ ಗುರುನಾಥ 2
ಪತಿತಪಾವನೀತ ಪಿತಾಮಹನ ಪಿತ
ದಾತನಹುದೀತ ಗುರುನಾಥ 3
ಅನುದಿನ ಸಾಕ್ಷಾತ
ದೀನದಯಾಳುನೀತ ಗುರುನಾಥ 4
ಭಕ್ತವತ್ಸಲನೀತ ಶಕ್ತಸದ್ಗುರುನಾಥ
ಮುಕ್ತಿದಾಯಕನೀತ ಗುರುನಾಥ 5
ಜನವನದೊಳಗೀತ ಮನೋಭಾವಪೂರಿತ
ಆನಂದೋ ಬ್ರಹ್ಮನೀತ ಗುರುನಾಥ6
ಗುಹ್ಯಕೆ ಗುಹ್ಯನೀತ ಬಾಹ್ಯಂತ್ರ ಸದೋದಿತ
ಮಹಾಮಹಿಮನೀತ ಗುರುನಾಥ 7
ಇಹಪರ ನಮಗೀತ ಮಹಿಪತಿ ಪ್ರಾಣನಾಥ
ಸಹಾಕರನಹುದೀತ ಗುರುನಾಥ 8