ಪಾಲಿಸಯ್ಯ ಪದುಮವದನ
ಪಾಲಸಾಗರಶಾಯಿ ನಂಬಿದೆ ಪ
ಪಾಲ ಸುಜನಶೀಲ ಸುಗುಣ
ಕಾಲಕಾಲದಿ ತವ ಭಜನ ಅ.ಪ
ನಾದಬ್ರಹ್ಮನಾದಿಕಾಲದ
ಆದಿವಸ್ತು ಭಜಿಪೆ ಸದಾ
ಮೋದದೀಯೋ ಎನಗೆ ಮುದ
ಭೇದವಾದ ಗೆಲಿದ ವಿಮಲ
ಸಾಧುಸುಜನರಮಿತವರ್ತನ
ವೇದವೇದಾಂತದೊಳು ಗೌಪ್ಯ
ವಾದ ನಿಜ ಬೀಜಮಂತ್ರ 1
ಮಾಲತುಲಸಿ ಕೌಸ್ತುಭಾಂಬರ
ಮೇಲುನಿಲಯ ಕುಜನಕುಠಾರ
ಶೀಲ ಸುಗುಣ ಕರುಣಾಮಂದಿರ
ಕೀಳುತನದಿ ಮಾಡಿದ ಎನ್ನ
ಹಾಳು ಪಾಪಗಳನು ಸುಟ್ಟು
ಬಾಲನೆಂದು ಕರುಣವಿಟ್ಟು
ಮೂಲತತ್ತ್ವಕಿಳಿಸು ದಯದಿ 2
ಭಾಸುರಕೋಟಿವರಪ್ರಕಾಶ
ಸಾಸಿರನಾಮ ಜಗಜೀವೇಶ
ದೋಷಹರಣ ಭವವಿನಾಶ
ದಾಸಜನರ ಪ್ರಾಣಪ್ರಿಯ
ಪೋಷಿಸೆನ್ನನುಮೇಷÀ ನಿಮ್ಮ
ದಾಸರ ದಾಸನೆನಿಸಿ
ಶೇಷಶಯನ ಶ್ರೀಶ ಶ್ರೀರಾಮ 3