ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಸುಖವಿದೂ | ಚಿತ್ತದಲ್ಲಿ ಮಾಯ ಮೋಹ ಕತ್ತಲೆಯ ಕಾಣದಿಹುದು ಪ ತನುವು ತಾನಲ್ಲವೆಂದು | ಮನದಿ ಉನ್ಮನಸಿನಿಂದ | ಬಿನುಗು ವಿಷಯಗಳನೆ ಕೊಂದು | ಚಿನುಮಯಾತ್ಮನಾದೆ ಎನಲು 1 ಆಶೆಮೂಲವನ್ನು ಅಳಿದು | ಕೋಶ ಪಂಚಕಗಳ ಕಳೆದು | ಪಾಶವೆಂದು ತುಳಿದು ಲಕ್ಷ ಈಶನಲ್ಲಿ ಬೆರೆದ ಮೇಲೆ 2 ತಂದೆ ಭವತಾರಕನ | ಹೊಂದಿ ಪೂರ್ಣ ಬ್ರಹ್ಮನಾಗಿ | ಮುಂದೆ ಮೂರು ದೇಹ ಬಿಟ್ಟು | ಒಂದು ಗೂಡಿ ಬ್ರಹ್ಮನಲ್ಲಿ 3
--------------
ಭಾವತರಕರು
ಬಯಲ ಜಾತ್ರೆಗೆ ನಡೆಹೋಗುವ ಬಾರದಲೆ ಅಲ್ಲಿರುವ ಪ ಶಾಂತಿ ಎಂದೆಂಬ ಕಂಟಲೆಗಳು ಶಮೆ ಹುರಿಗೆಜ್ಜೆ ಎತ್ತುಗಳುದಾಂತಿ ಎಂದೆಂಬ ಕಾವಡಿಗಳು ದಮೆ ಎಂಬ ಹೂಜೆಗಳು1 ಮಂಗಳವೆಂಬ ಬಾಲಕರು ಮುಕ್ತಿ ಎಂಬ ಮುತ್ತೈದೆಯರುಸಂಗ ಹರರಹ ವಿಟಗಾರರು ಸೈರಣೆ ಎಂಬ ಹಿರಿಯರು 2 ಸಂತೋಷವೆಂಬ ಅಂಗಡಿಗುಂಪು ಸಹಜದ ಹೂಕಂಪುಶಾಂತರೆನಿಪ ದೊರೆಗಳ ಗುಂಪು ಸುಖ ಛತ್ರಿಯ ತಂಪು 3 ಓಂಕಾರನಾದದ ನಗಾರಿ ವೀಣಾನಾದದ ತುತ್ತೂರಿಸಂಕಲ್ಪ ಸುಳ್ಳೆಂಬ ತಂಬೂರಿ ಸಾಮವೆನಿಸುವ ಭೇರಿ 4 ಅಮೃತ ಬಿಂದುವಿನ ಮೊಗೆಯುದಾರಿದಾರಿಗೆ ಸೋಹಂಸ್ಮರಣೆ ದೃಢ ಮನವದು ಚಡಿಯು 5 ಆನಂದ ವನಗಳ ಸಾರುತ ಆಯಾಸ ಕಳೆಯುತ್ತಸ್ವಾನಂದ ಗೋಪುರ ಕಾಣುತ ಸುಮ್ಮಾನವ ಪಡೆಯುತ6 ಮೃಢನಾಳ ದ್ವಾರವ ಪೋಗುತ ಮುಂದೆ ಚಂದ್ರನ ಕಾಣುತಅಡರಿದ್ವಿದಳ ಸದರೇರುತ ಅತ್ತತ್ತ ಸಾರುತ 7 ಕಮಲ ಪೀಠವನೇರುವರ ಮಹೇಶನೆನ್ನು ಅವರ8 ತುರೀಯವೆಂದೆಂಬ ಬಯಲಗೂಡಿ ತಾವು ಹೋಗುವ ನಾಡಿಹರ್ಷದ ಧೂಳ ದರ್ಶನ ಮಾಡಿ ಹಾಯಿಗುಡಾರ ಹೂಡಿ9 ಶಿಂಶುಮಾರವೇ ದೇವರ ಪೀಠ ಸಿದ್ಧವೆಂಬ ಕವಾಟಸಂಶಯವಿಲ್ಲದ ಎಡೆಯಾಟ ತತ್ಪುರುಷರ ಕೂಟ10 ಸೂರ್ಯ ಕೋಟಿಗೆ ಘನವುಒತ್ತೊತ್ತು ಪೂರ್ಣಾಭಿಷೇಕ ಓಂ ಎಂದೆಂಬ ಸ್ವರವು 11 ಸುವಾಸನೆ ಎಂದೆಂಬ ಧೂಪವು ಸುಂದರ ಪುಷ್ಪಗಂಧತಾವು ಮಾಡುವ ಭಾವದಲಿಂದ ತೃಪ್ತಿ ನೈವೇದ್ಯ ಚಂದ12 ಎರಡಿಲ್ಲದೇಕಾರ್ತಿ ಬೆಳಗುತ ಎಲ್ಲೆಡೆ ತಾ ಹೊಳೆಯುತಹೊರ ವೊಳಗೆಂಬುದ ಮರೆಯುತ ಹೇಮದ ತಗಡಾಗಿ ಇರುತ13 ಬೆಳಕ ಕಂಡಾರತಿ ಎತ್ತುತ ಬೆಳಗನು ಬೆಳಗುತ್ತತಿಳಿದು ಪ್ರದಕ್ಷಿಣೆ ಮಾಡುತ ತೋರುವುದು ಬ್ರಹ್ಮವದೆನ್ನುತ 14 ಭಯದ ವಿಸರ್ಜನೆ ಮಾಡುತ ಬಯಲಾಗಿಯೆ ತೋರುತಬಯಲ ಚಿದಾನಂದನಿಗೆರಗುತ್ತ ಬ್ರಹ್ಮನಾಗಿ ತಾನಿರುತ 15
--------------
ಚಿದಾನಂದ ಅವಧೂತರು
ಮುಕ್ಕ ನಿನ್ನ ನಡತೆ ನೋಡೋಮುಕ್ಕ ನಿನ್ನ ನಡತೆ ನೋಡೋತಕ್ಕ ಯಮನ ಶಿಕ್ಷೆಯಿಹುದುಸೊಕ್ಕ ಬೇಡವೋ ಮುಂದೆ ದುಃಖಗಳಿಸಿಹರೊಕ್ಕ ಕಕ್ಕಸಬಡುವೆಯೋ ಕಾಸದು ಹೋದರೆದಕ್ಕಿಸಿಕೊಂಬೆಯಾ ಎಲೆ ಹುಚ್ಚು ಮೂಳಪಗುರುಹಿರಿಯರ ನಿಂದೆ ಮಾಡಿಅವರಚರಣಸ್ಥಳವ ಜರೆದಾಡಿ ದುಷ್ಟದುರುಳರ ಜೋಡುಗೂಡಿ ನೀನುಬರಿದೆ ಆಯುಷ್ಯ ಕಳೆದೆ ಓಡಾಡಿ ಎಲೆಖೋಡಿಭರಭರದಿಂದಿಳಿವರು ಕಾಲನ ದೂತರುಕೊರಳನೆ ಕಡಿವರು ಎಲೆ ಹುಚ್ಚು ಮೂಳ1ನಿನ್ನನು ನೀನೇ ನೋಡಿಕೊಂಬೆ ನಾನುಚೆನ್ನಾಗಿ ಇಹೆನು ಎಂದೆಂಬೆ ಹುಚ್ಚುಕುನ್ನಿಯಂತೆ ಓಡಾಡಿ ಒದರಿಕೊಂಬೆಜಾರಕನ್ನೆಯರ ಜೋಡುಗೊಂಬೆ ನಾಕಾಣೆನೆಂಬೆಇನ್ನೇನು ಹೇಳಲಿ ಕಾಲನ ದೂತರುಬೆನ್ನಲಿ ಸುಳಿವರು ಎಲೆ ಹುಚ್ಚು ಮೂಳ2ಹೆಂಡತಿ ನೋಡಿ ಹಲ್ಲು ತೆರೆವೆ ಆಕೆಯಗೊಂಡೆ ಚವುರಿ ನೋಡಿ ಬೆರೆವೆಕಂಡ ಕಂಡ ವಿಷಯಕ್ಕೆ ಮನವೊಲಿದೆ ಅಂಟಿಕೊಂಡಿವೆ ಅಜ್ಞಾನ ಮರೆವೆಚಂಡ ಯಮದೂತರುಚಂಡಿಕೆಹಿಡಿದುಮಂಡೆಗೆ ಒದೆವರು ಎಲೆ ಹುಚ್ಚು ಮೂಳ3ಬಾಲೆಯ ಸುತರ ನಂಬುವೆಯೋ ಕೊಪ್ಪವಾಲೆಗಳ ಮಾಡಿಸಿ ಇಡುವ ಯಮನಾಳುಗಳು ಕೈ ಬಿಡುವರೇನೋ ನಿನ್ನಬಾಳು ವ್ಯರ್ಥವಾಯಿತು ಬಿಡಿಪರಿಲ್ಲವೋಸೀಳುವೆನೆನುತಲಿಕಾಲದೂತರುಕಾಲ್ಹಿಡಿದೆಳೆವರೋ ಎಲೆ ಹುಚ್ಚು ಮೂಳ4ಇನ್ನಾದರೂ ಜ್ಞಾನವ ತಿಳಿಯೋಚೆನ್ನಾಗಿ ಧ್ಯಾನದಿ ಬಲಿಯೋ ಕಂಡುನಿನ್ನೊಳು ಥಳಥಳ ಹೊಳೆಯೋನಿನ್ನ ಜನ್ಮ ಜನ್ಮವೆಲ್ಲ ಕಳೆಯೋಬ್ರಹ್ಮನಾಗಿ ಬೆಳೆಯೋರತ್ನದೊಳಗೆ ರತ್ನ ಬೆಳಗಿದಂತೆಚೆನ್ನ ಚಿದಾನಂದ ನೀ ನಿತ್ಯನಾಗೋ5
--------------
ಚಿದಾನಂದ ಅವಧೂತರು