ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಲಕ್ಷ್ಮೀದೇವಿ ಏನೆಂದು ವರಿಸಿದೆಯೆ ಹರಿಯ ಲಕುಮಿ ತಾಯೇ ಪ ಆನಂದಪ್ರದನೆಂದು ಭ್ರಮಿಸಿದೆಯಾ ಶ್ರೀಯೇ ಅ.ಪ. ಮಕ್ಕಳನು ಹೆರುವ ಮನದಭಿಲಾಷೆಯಿಂದೇನೆಹೊಕ್ಕುಳಲಿ ಬ್ರಹ್ಮನನು ಪಡೆದು ಕುಳಿತನು ತಾನೆರಕ್ಕಸರ ಕಂಡೊಡನೆ ಹೆಣ್ಣಾಗಿ ನಿಲ್ಲುವನೆ ಅಕ್ಕ ಇಂಥವನೊಡನೆ ಸರಸವೆಂತಾಡುವೆಯಾ 1 ತಾನು ಸೇವೆಯಕೊಂಡು ಮಾನವನು ಪಡೆಯದೇದೀನನಂದದಿ ಭಕ್ತಜನ ಸೇವೆಗೆಳಿಸುವನೂಆನೆ ಕರೆದೊಡೆ ನಿನ್ನ ಬಿಟ್ಟೋಡಲಿಲ್ಲೇನೆಜ್ಞಾನಿಗಿಂತ ನೀನವಗೆ ಹೆಚ್ಚಿನವಳೇನೆ 2 ಮುದಿಋಷಿಯ ಕರೆತಂದು ಒದೆಸಿಕೊಂಡವನೆಹದನ ಬಂದೊಡನೆ ಬಹುರೂಪ ಧಾರಕನಮದುವೆಯಾದರು ತನ್ನ ಗುಟ್ಟನ್ನು ಕೊಡದವನಗದುಗಿನೊಡೆಯ ಶ್ರೀ ವೀರನಾರಾಯಣನ 3
--------------
ವೀರನಾರಾಯಣ
ಏನೆಂದ್ಹೇಳಲಿ ಕಂಡದನುಭವನಾ ಅನುಭವನಾ ಸ್ವಾನಂದ ಸುಖಸದೋದಿತ ಸುಸಾಧನ ಧ್ರುವ ಘಮಿಘಮಿಸುವ ರವಿಕೋಟಿತೇಜನ ಠವಿಠವಿಸುದ ಕಂಡೆ ದಿವ್ಯಸ್ವರೂಪನ ಸವಿಸವಿ ಸುರುವ ಸುಖಸಂಬ್ರಹ್ಮನನು ಸೇವಿಸುವದು ಕಂಡೆ ಶುಕಮುನಿಜನ 1 ಥಳಥಳಿಸುವ ತೇಜೋಮಯ ನಿಧಾನ ಝಳಝಳಿಸುದು ಕಂಡೆ ಹೊಳೆವ ಪ್ರಕಾಶನ ಒಳಹೊರಗೊಂದೇಪರಿ ಭಾಸುವ ಗುಣ ಹೇಳಲಿನ್ನೇನದ ಸುಳವ್ಹು ಸೂಕ್ಷ್ಮನ 2 ಸಣ್ಣದೊಡ್ಡಾರೊಳಿಹ್ಯ ವಸ್ತುನಿರ್ಗುಣ ಬಣ್ಣಬಣ್ಣದಿ ಕಂಡ ಗುರುಸ್ವರೂಪನ ಕಣ್ಣಾರೆ ಕಂಡೆ ಸದ್ಗುರು ಚರಣ ಧನ್ಯಧನ್ಯವಾಯಿತು ಮಹಿಪತಿ ಜೀವನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು