ಕರ್ಮ ಬೇರೆ | ಬ್ರಹ್ಮದೊಳಗೆ ಕ್ರಿಯಾಕರ್ಮವಿಲ್ಲ |ಕರ್ಮ ಬ್ರಹ್ಮವಲ್ಲ ಪ
ಶಿವನೊಳು ನೋಡಲು ಜಗವೇ ಇಲ್ಲ | ಜಗ ಶಿವನಲ್ಲ. ಶಿವನೂ ಜಗವೂಎಂಬೊ ಮಾತು ಸಲ್ಲ | ಅರಿದಾತನೆ ಬಲ್ಲ 1
ಬೀಜದಿ ನೋಡಲು ವೃಕ್ಷವೆ ಇಲ್ಲ | ವೃಕ್ಷಬೀಜವಲ್ಲ | ವೃಕ್ಷ ಬೀಜದಿ ಫಲಸ್ವಾದವಿಲ್ಲ |ತಿಂದಾತನು ಬಲ್ಲ 2
ಪಾಮರ ನರರೆಲ್ಲ ಭವತಾರಕನ ಭಕ್ತರಲ್ಲ | ಭವತಾರಕನ ಭಕ್ತನು ನರನಲ್ಲ | ಗುರುನಾಥನೆ ಬಲ್ಲ 3