ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಪಿಡಿಯೋ ಬ್ರಹ್ಮಣ್ಯಾ ಗುರುವೇ ದುರಿತ ನೋಡದಲೆನ್ನ ಪರಮ ನಿರ್ಮಲ ಜ್ಞಾನ ತ್ವರಿತದಿಂದಿತ್ತೆನ್ನ ಪ ದೂರದೂರದಲಿದ್ದ ನರರು ನಿಮ್ಮಯ ಚರಣ ಸೇರಿ ಸೇವೆಯ ಮಾಡೆ ಕರುಣದಿ ಕಾಯ್ವೆ ನೀ 1 ದಿಟ್ಟತನದಿ ಭಕ್ತಿ ಇಟ್ಟು ಸೇವಿಸಲಾಗ ಕುಷ್ಟಾದಿ ರೋಗಗಳಟ್ಟುವೀ ಬೇಗನೆ 2 ಪರಿ ಭವದೊಳು ತಿರುಗಿಸದೆ ಎನ್ನ ನರಹರಿ ಚರಣದ ಸ್ಮರಣೆಯನ್ನೆ ಇತ್ತು 3
--------------
ಪ್ರದ್ಯುಮ್ನತೀರ್ಥರು
ರಾಘವೇಂದ್ರಯತಿಗಳು ಗುರುರಾಯರ ನಂಬಿರೋ ರಾಘವೇಂದ್ರ ಗುರುರಾಯರ ನಂಬಿರೋ ಜಗದೊಳು ಪ. ಗುರುರಾಯರ ನಂಬಿ ವರಗಳ ಬೇಡಿರೊ ನರಹರಿ ಪದ ಧ್ಯಾನಿಪ ಕರುಣವ ಬೀರುವಂಥ 1 ಆದಿ ಪ್ರಹ್ಲಾದರು ಮೋದದಿ ಹರಿಪದ ಆದರದಿಂದ ಜಗಕೆ ಸಾಧಿಸಿ ಬೀರಿದರೊ 2 ದ್ವಿತೀಯ ವ್ಯಾಸರಾಜ ಸ್ತುತ ಬ್ರಹ್ಮಣ್ಯಾರ್ಯ ಕರ ಗತಪುರುಷೋತ್ತಮ ಗುಹ ಪಥದೊಳಗಿಪ್ಪರ 3 ತೃತೀಯ ರಾಘವೇಂದ್ರ ಪತಿತ ಪಾವನ ನಾಮ ರತ್ನ ಖಚಿತವಾಗಿದೆ ಭಕ್ತ ಸುಚರಿತರೆಲ್ಲ ಬೇಗ 4 ಭೂತ ಪ್ರೇತಗಳ ಪ್ರೀತಿಯೊಳಳಿದು ಶ್ವೇತ ಕುಷ್ಠಗಳ ದೂರ ಮಾಳ್ಪವರ 5 ಪಾದ ಪಂಕಜ ದುರಿತ ದೂರ ಶ್ರೀ ಶ್ರೀನಿವಾಸನ ಭಜಿಪ ಗುರು 6
--------------
ಸರಸ್ವತಿ ಬಾಯಿ