ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯತಿಗಳು (ಶ್ರೀ ಬ್ರಹ್ಮಣ್ಯತೀರ್ಥರು) ಕೈಪಿಡಿದು ಪಾಲಿಸೈ ಬ್ರಹ್ಮಣ್ಯಗುರುವೇ ಪ ಅಯ್ಯನೀನೆಂದು ನಿನ್ನಡಿಗೆ ವಂದಿಸುವೇ ಅ.ಪ ಮೂಢವiತಿಗಳು ಬಂದು ಬೇಡಿ ಕೊಳ್ಳಲು ಕರುಣ ನೀಡಿ ನಿನ್ನವರನ್ನು ಕಾಯ್ದರೀತಿ ಗಾಢದಿಂದಲಿ ಬಂದು ಮೂಢನಾದೆನ್ನನು ಗೂಢದಿಂದಲಿ ಕಾಯೊ ಗುಣನಿಧಿಯೆ ಗುರುವೇ . . 1 ಪುರುಷೋತ್ತಮಾರ್ಯರ ವರಪುತ್ರನೆಂದೆನಿಸಿ ಹರುಷದಿಂದಲಿ ಬಂದ ಭಕ್ತಜನರ ಮೊರೆಯಲಾಲಿಸಿ ಸ್ವಾಮಿ ಸ್ಮರಣೆಯ ಕೊಟ್ಟೆನ್ನ ಹರುಷಪಡಿಸುವ ಗುರುವು ನೀನೆಂದು ನಾ ಬಂದೆ 2 ವರಕಣ್ವನದಿ ಕೂಲದಲಿ ಕಲ್ಮಷ ತೊಳೆದು ಸಾರ್ವಭೌಮನ ಗುಣವ ಸರ್ವದಾ ಪಾಡುತಲಿ ಸರ್ವಜನರನು ಕಾವೆ ಸರ್ವಕಾಲದಲಿ 3 ಸರ್ವಗುಣ ಪೂರ್ಣ ಬ್ರಹ್ಮಣ್ಯಪುರ ವಾಸ ನರಹರಿಯ ಪಾದವನು ಸ್ಮರಿಸಿನಿತ್ಯ ಸರಸದಲಿ ಅಬ್ಬೂರು ಪುರವಾಸಿಗಳನೆಲ್ಲ ಅರ್ಭಕರ ತೆರನಂತೆ ರಕ್ಷಿಸುವ ಗುರುವರ್ಯ 4 ಮಣಿದು ಬೇಡುವೆ ನಿನ್ನ ಚರಣದಾಶ್ರಯವಿತ್ತು ಅಣುಗನೆಂದೆನಿಸೆನ್ನ ಸಲಹಬೇಕೊ ಗುಣನಿಧಿ ಶ್ರೀ ಪ್ರಾಣನಾಥ ವಿಠ್ಠಲನ ಘನ ಚರಣ ಸ್ಮರಣೆಯ ನೀಯೊ ಗುರುವೆ 5
--------------
ಬಾಗೇಪಲ್ಲಿ ಶೇಷದಾಸರು