ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಯತಿವರ್ಯರು ಶ್ರೀ ವ್ಯಾಸರಾಯರ ಸ್ತುತಿ ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ ದುರುಳ ವಾದಿಗಳನ್ನು ಮರುಳು ಮಾಡೋರನ್ನ ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ ಧರಣಿ ಸುರರ ಪರಿವೃಢರ ಸುನಿಕರಕೆ ಪರಿಪರಿಯಲಿ ಉಪದೇಶಿಸುತಿಪ್ಪಗೆ 1 ಕನಕ ಕಶಿಪುತನಯನ ಘನ ಅಂಶದಿ ಫಣಿಗಣ ರಮಣನಾವೇಶದಿ ಪೊಳೆಯುತ ದಿನದಿನದಲಿ ಹರಿಮನ ತಣಿಸುತಲಿಹ ಘನ ಮಹಿಮನೆ ಶ್ರೀ ಯತಿಕುಲತಿಲಕಾ 2 ಉದ್ದಂಡ ವಿತಂಡಕೆ ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ ಷಂಡಗಳನೆ ಖಂಡಿಸುತಿಹ ಯತಿಯೆ 3 ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ ಬ್ರಹ್ಮಜನಕ ನರಸಿಂಹ ಮೂರುತಿಯ ಹೃ- ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ ಹೃದಯಾಂಬುಧಿಯೊಳು ಮೆರೆವಗೆ 4 ದಶದಿಶೆಯಲಿ ದಶರಥಸುತ ಮಹಿಮೆಯ ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ ವಸುಧಿಯೊಳಗೆ ಸುಕರ ಸುಚರಿತೆಗೆ 5 ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು ನಲಿಯುತ ಕುಣಿಕುಣಿದಾಡುತಲಿಪ್ಪನು ಥಳಥಳಿಸುವ ರಾಮ ವೇದವ್ಯಾಸರು ನಿಮ- ಗಿಳೆಯೊಳಮೂಲ್ಯ ಪ್ರಸಾದವನೀವರು 6 ಅಡಿಗಡಿಗತಿ ದೃಢತರ ಯುಕ್ತಿಗಳಿಂದ ಸಡಗರದಿಂದಲಿ ಬಿಡದೆ ನುಡಿಯುತ ನಡದದ್ವೈತದಡವಿಯೊಳಗೆ ಪೊಕ್ಕು ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ 7 ಶ್ರೀದವಿಠಲಗತಿ ಪ್ರೀಯರಾದ ಶ್ರೀ- ಪಾದರಾಯರಲಿ ಓದಿ ಗ್ರಂಥಗಳ ವಾದಿರಾಜ ವಿಜಯೀಂದ್ರ ಪ್ರಮುಖರಿಗೆ ಆದರದಲಿ ಪಾಠ ಹೇಳುತಲಿಪ್ಪಗೆ 8
--------------
ಶ್ರೀದವಿಠಲರು
ಕೃಪೆಯಿಲ್ಲ ವ್ಯಾಕೊ ಎನ್ನ ಮ್ಯಾಲೆ ಕೃಷ್ಣಮೂರುತೀ ಅಪರಾಧವೆಲ್ಲ ಕ್ಷಮಿಸಿ ಸಲಹೊ ಪಾರ್ಥಸಾರಥಿ ಪ ನೀನಲ್ಲದನ್ಯರಿಲ್ಲವೆಂದು ನಿಖಿಲ ನಿಗಮವು ನಾನಾ ಪರಿಯಲಿ ಸಾರುವದು ಸಕಲಶಾಸ್ತ್ರವು 1 ಮನಾದಿಗಳಿಗಗೋಚರನೆಂದೆಲ್ಲ ಪೇಳ್ವರು 2 ಅನಾಥ ರಕ್ಷಕಾಪ್ರಮೇಯ ಆದಿಪುರುಷನೇ ಸನಂದನಾದಿ ಸಕಲಯೋಗಿ ವಂದ್ಯ ಚರಣನೇ 3 ನಿರಪರಾಧಿಗಳನು ಪೊರೆಯಲೇಕೆ ಸಂಶಯ ಸುರೇಶರುದ್ರ ಬ್ರಹ್ಮಜನಕ ನೀನೆ ನಿಶ್ಚಯ 4 ಕರುಣದಿ ನೀನೆ ಕಾಯಬೇಕು ಮರೆಯದೆನ್ನನು ಗುರುರಾಮ ವಿಠಲ ಬಿಡದಿರುಕೈದಾಸದಾಸನು 5
--------------
ಗುರುರಾಮವಿಠಲ
ಶುಭ ಪ ಬ್ರಹ್ಮರೂಪದಿ ಜಗವನು ಪುಟ್ಟಿಸಿ ಬ್ರಹ್ಮಜನಕನ ನೆತ್ತಿಲಿ ರಕ್ಷಿಸಿ ಬ್ರಹ್ಮ ಮೂರುತಿ ಬಾಲಬ್ರಹ್ಮದಿ ಚರಿಸಿದಾತಂಗೆ ಮಹಾ | ಬ್ರಹ್ಮಾಂಡಕೋಟಿ ಉದರದೊಳಿರಿಸಿ | ಬ್ರಹ್ಮನ ಸ್ತುತಿಗೆ ನಿಲುಕದ ಅವಿನಾಶಿ ಬ್ರಹ್ಮಾದಿ ಸುರವಂದಿತ ರುದ್ರನಾಗಿ ಸಂಹರಿಸಿ 1 ಜಗವನುದ್ಧರಿಸಲು ದೇಹವನು ಜಗದೀಶ್ವರನು ಅವತರಿಸಿ ಬಂದಿಹನು | ಜಗ ಮೃಗಜಲವೆಂದು ತಿಳಿದಿರೆ ಜಗದೊಳಾಡುವಗೆ || ಬಗೆ ಬಗೆಯಲಾಡುತ ಗಗನ ಗಟ್ಟಿಹನು | ನಿಗಮಕೆ ನಿಲ್ಕದೆ ನಿತ್ಯನೆನಿಸುವನು ಝಗಝಗಿಸುವ ಆರತಿಯ ಬೆಳಗಿರೆ ಜಗದ ಜನಕನಿಗೆ 2 ಛಪ್ಪನ್ನ ದೇಶಕೆ ಶೋಭಿಸುವ ಒಪ್ಪುವ ಕೋಳಕೂರೆಂದೆನಿಸುವ ದಿಕ್ಕು ದಕ್ಷಿಣಾ ಭೀಮಾತೀರದಿ ಥಳಥಳದಿ ಹೊಳೆವ |ಶ್ರೀ ಮಹಾಗುರು ಇಪ್ಪತ್ತೊಂದು ಸಮಾಧಿಯೊಳಿರುವತಪ್ಪದೆ ರಾಮಾತ್ಮಜನಾಗಿರುವ | ಸೊಪ್ಪೆರಾಯನು ಸಹಜಾನಂದ ತಾ ಯೋಗಿಯಾಗಿ ಮೆರೆವ 3
--------------
ಭೀಮಾಶಂಕರ
ಶ್ರೀರಂಗನಾಥಾ ಶ್ರಿತ ಸೌಖ್ಯದಾತ ಪ ದಾತ ಅ.ಪ ಬ್ರಹ್ಮಕರಾರ್ಚಿತ ಪಾದಾರವಿಂದ ಬ್ರಹ್ಮಜನಕ ಪೂರ್ಣಾನಂದ ಮುಕುಂದಾ 1 ರಾವಾಣಾನುಜಗೆ ಒಲಿದು ನೀ ಬಂದೆ 2 ಕಾವೇರಿ ತಪಗೈಯೆ ಕರುಣದಿ ನೀ ನೋಡಿ ದೇವ ತನ್ಮಧ್ಯದಿ ನೆಲೆಸಿದೆ ಹೂಡಿ 3 ಏಳು ಪ್ರಾಕಾರ ಮಧ್ಯದಲ್ಲಿರುವವನೆ ಫಾಲನಯನ ಸಖ ಪತಿತ ಪಾವನನೆ 4 ನಿನ್ನ ಸಂದರುಶನ ಮಾಡಿದ ಜನರು ಧನ್ಯರಾಗುತಯಿಹಪರ ಪಡೆಯುವರು 5 ಚಂದ್ರ ಪುಷ್ಕರಣಿಯೋಳ್ಮಿಂದ ತಕ್ಷಣದಿ ಬೆಂದು ಪೋಗುವುದಘವೃಂದವು ಭರದಿ 6 ಗುರುರಾಮ ವಿಠ್ಠಲ ವರಮುನಿ ಪಾಲ ಶರಣಜನಾಧಾರ ಶ್ರೀ ತುಲಸೀ ಮಾಲಾ 7
--------------
ಗುರುರಾಮವಿಠಲ