ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯನಿರ್ಮಲನಿಗೆ ಜಯಮಂಗಳಂ ಶುಭ ಮಂಗಳಂ ಪ ಸತ್ಯಪರಾಕ್ರಮ ಸತ್ಯಚರಿತ್ರಗೆ ಸತ್ಯಕಾಮ ಪುರುಷೋತ್ತಮ ಹರಿಗೆ ಅ.ಪ ಮೂರುರೂಪದಲಿ ವಾರಿಯೊಳಿದ್ದಗೆ ಘೋರವದನ ಬ್ರಹ್ಮಚಾರಿಯಾದವಗೆ ವೀರರ ಕೊಂದಗೆ ಹನುಮವಿನುತಗೆ ಮಾರಜನಕ ಸುಕುಮಾರ ಹಯೇಶಗೆ 1 ವೇದಾಚಲ ಭೂಧರ ನರಹರಿಗೆ ಮೇದಿನಿಯಳೆದಗೆ ಮುನಿಸುತಗೆ ಕೋದಂಡೋತ್ಸುಕ ನಾದಪ್ರಿಯನಿಗೆ ಭೇದವ ಕಲ್ಪಿಸಿದಶ್ವವಾಹನಗೆ 2 ಮಂಗಳರೂಪಗೆ ಈರೈದವತಾರಗೆ ಅಂಗಜತಾತ ಶುಭಾಂಗನಿಗೆ ಮಾಂಗಿರಿಶೃಂಗನಿವಾಸ ರಥಾಂಗಗೆ ಗಂಗೆಯಪೆತ್ತ ಪನ್ನಂಗಶಯನಗೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗಬಾರನ್ಯಾತಕೆ ಸಖಿಯೆ ಮುದ್ದು ಪ ಶರಧಿಯ ಪೊಕ್ಕನೇನೆ ಸುರರೆಲ್ಲರು ಕೂಡಿ ಗಿರಿಯ ಬೆನ್ನಾಲಿ ಅವರು ಪೊರಿಸಿದರೇನೆ 1 ಧರೆಯನೆತ್ತಲು ಪೋಗಿ ನರಹರಿಯಾದನೇನೇ ಗರುವರಹಿತ ಬ್ರಹ್ಮಚಾರಿಯಾದನೇನು 2 ಪರಶುಪಿಡಿದು ಕ್ಷತ್ರಿಯರ ಸವರುವೆನೆಂದು ಗಿರಿವನಗಳಲಿ ತಾನು ಚರಿಸುತಲಿಹನೇನೇ 3 ಸ್ಮರನ ಪಿತನು ತಾನು ನಾರಿ ಪಾಂಚಾಲೆಯ ಮೊರೆಯ ಕೇಳುತ ಭರದಿ ಸಾರಿದನೇನೆ 4 ಮಾನವ ತಾ ಸೂರೆಗೊಳ್ಳಲು ತೇಜಿ ಏರಿ ಪೋದನೇನೆ ಶ್ರೀ ರಂಗೇಶವಿಠಲ 5
--------------
ರಂಗೇಶವಿಠಲದಾಸರು
ಲಾಲಿ ಪಾಡಿರೆ ಮುದ್ದು ಬಾಲಕಂದನಿಗೆ ಬಾಲಬ್ರಹ್ಮಚಾರಿಯಾದ ಕಪಿವರಗೆ ಪ. ಅಂಜನೆಯ ಸುತನಾಗಿ ಅಂಬರಕೆ ಹಾರಿ ಕಂಜಸಖನಿಗೆ ತುಡುಕಿ ವಜ್ರತನುವಾಗಿ ಸಂಜೀವ ತಂದು ಕಪಿಪುಂಜಗಳ ಸಲಹಿ ಮಂಜುಭಾಷಣ ರಾಮಪಾದ ದಾಸನಿಗೆ 1 ಪುಟ್ಟಿ ಕುಂತಿಯ ಉದರದಲಿ ಗಿರಿ ಒಡೆದು ದುಷ್ಟ ಕೀಚಕ ಬಕಾದಿಗಳ ಸಂಹರಿಸಿ ಕುಟ್ಟಿ ಕೌರವರ ಕುಲ ದ್ರೌಪದಿಯ ಕೂಡಿ ಪಟ್ಟವಾಳಿದ ಕೃಷ್ಣ ಪಾದಸೇವಕಗೆ 2 ಶ್ರೀಪತಿಯ ಆಜ್ಞೆಯಲಿ ವಿಪ್ರಸುತನಾಗಿ ಪಾಪಿ ದುರ್ಮತಗಳನು ತರಿದು ಮುರಿದೊಟ್ಟಿ ಸ್ಥಾಪಿಸುತ ಸಚ್ಛಾಸ್ತ್ರ ಯತಿಯಾಗಿ ಚರಿಸಿ ಗೋಪಾಲಕೃಷ್ಣವಿಠ್ಠಲನ ಮೆರೆಸಿದಗೆ 3
--------------
ಅಂಬಾಬಾಯಿ
204ಏನು ಮರುಳಾದೆಯೇ ಎಲೆ ಭಾರತೀ ಪವಾನರಕುಲದೊಳಗೆ ಶ್ರೇಷ್ಠನಾದವಗೆಅ.ಪಕಣ್ಣಿಲ್ಲದವಳ ಗರ್ಭದಲಿ ಜನಿಸಿ ಬಂದುನಿನ್ನ ತೊರೆದು ಬ್ರಹ್ಮಚಾರಿಯಾದ ||ಹೆಣ್ಣಿಗಾಗಿ ಪೋಗಿ ವನವ ಕಿತ್ತಾಡಿ |ಉಣ್ಣ ಕರೆದರೆ ಎಂಜಲೆಡೆಯನೊಯ್ದವಗೆ 1ಹುಟ್ಟಿದನು ಗುರುತಲ್ವಗಾಮಿಯಾ ವಂಶದಲಿ |ನಟ್ಟಿರುಳೊಳೊಬ್ಬ ಅಸುರಿಯಕೂಡಿದ||ಹೊಟ್ಟೆಗೆಂತಲೆ ಹೋಗಿ ಭಿಕ್ಷದನ್ನವನುಂಡು |ಅಟ್ಟ ಹಾಕುವನಾಗಿ ದಿನವ ಕಳೆದವಗೆ 2ಮಂಡೆಬೋಳಾಗಿ ಭೂಮಂಡಲವ ತಿರುಗಿದ |ಕಂಡವರು ಯಾರು ಈತನ ಗುಣಗಳ ||ಪುಂಡರೀಕಾಕ್ಷಶ್ರೀ ಪುರಂದರವಿಠಲನ |ಕೊಂಡಾಡುತಲಿ ಬೋರೆ ಮರದ ಕೆಳಗಿದ್ದವಗೆ 3
--------------
ಪುರಂದರದಾಸರು