ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಒ) ಭಾರತೀ ದೇವಿ ಏನು ಮರುಳಾದೆಮ್ಮ ಯೆಲ ಭಾರತೀ | ನಿಕರ ಶ್ರೇಷ್ಠನಾದವಗೆ ಪ ನಿನ್ನ ತೊರೆದು ಬ್ರಹ್ಮಚಾರಿಯಾಗಿ || ಹಣ್ಣಿಗಾಗಿ ಹೋಗಿ ವನವ ಕಿತ್ತೀಡ್ಯಾಡಿ | ಉಣ್ಣ ಕರದರೆ ಎಂಜಲೆಡೆವೈದ ಕಪಿಗೆ 1 ಪುಟ್ಟಿದನು ಗುರುತಲ್ಪಕನ ವಂಶದಲಿ | ನಟ್ಟಿರುಳೆ ಒಬ್ಬ ಅಸುರಿಯ ಕೂಡಿದಾ || ಹೊಟ್ಟೆಗಾಗಿ ಪೋಗಿ ಭಿಕ್ಷದನ್ನವನುಂಡ | ಅಟ್ಟು ಹಾಕುವನಾದ ಕುಲವ ಕೊಂದವಗೆ 2 ಮಂಡೆ ಬೋಳನಾಗಿ ಭೂಮಂಡಲ ಚರಿಸುವ | ಕಂಡವರಾರು ಈತನ ಗುಣಗಳಾ || ಪುಂಡರೀಕಾಕ್ಷ ವಿಜಯವಿಠ್ಠಲನ್ನ | ಕೊಂಡಾಡುತ ತಾ ಬೋರೆ ಗಿಡದ ಕೆಳಗಿಪ್ಪ 3
--------------
ವಿಜಯದಾಸ
ಆರುತೀಯ ಬೆಳಗಿರೀಗ ನಾರಿಯೇರು ಶ್ರೀನಿವಾಸಗಾರುತೀಯ ಪ. ಆರುತೀಯ ಬೆಳಗಿರೀಗ ಸಾರಸಾಕ್ಷ ಪದ್ಮಿನೀಯ ಸೇರಿ ಲಕುನಿಯಿಂದ ಮೆರೆವೊ ಮೂರುಲೋಕದೊಡೆಯ ಕೃಷ್ಣಾ ಅ.ಪ. ಮೀನನಾಗಿ ವೇದ ತಂದು ದಾನವರ ವಂಚಿಸುತ್ತ ಯಾನದಲ್ಲಿ ಭೂಮಿ ತಂದ ದೀನರಕ್ಷಕ ನಾರಸಿಂಹಗೆ 1 ಚಲುವ ಬ್ರಹ್ಮಚಾರಿಯಾಗಿ ಛಲದಿ ಕ್ಷತ್ರಿಯೇರ ಕೊಂದು ಒಲಿವ ಶಿವನ ಬಿಲ್ಲ ಮುರಿದು ನಲಿದು ಬಂದ ಗೋಪಿಕಂದಗಾ 2 ನಾರಿಯೇರ ವ್ರತವನಳಿದು ತೆÉೀಜಿಯೇರಿ ಮೆರೆವ ಧೀರ ವಾರವಾರ ಪೂಜೆಗೆಂದು ಶೂರ ಶ್ರೀ ಶ್ರೀನಿವಾಸಗಾರುತೀಯ 3
--------------
ಸರಸ್ವತಿ ಬಾಯಿ
ಉರುಟಣೆ ಹಾಡು ಪದ್ಮಾವತಿ ನಿಂತು ಮುದ್ದು ಪದ್ಮನಾಭನಿಗೆ ಪದ್ಧತಿಯಲಿ ಉರುಟಾಣಿಯನು ಮಾಡಿದಳೊ ಪ. ಪದ್ಮಾಕ್ಷ ನಿನ್ನಯ ಪಾದಪದ್ಮವನೆ ತೋರೀಗ ಪದ್ಮರೇಖೆಯ ಪಾದಕರಿಶಿಣವ ಹಚ್ಚುವೆನು ಪದ್ಮ ಸಂಭವನ ಪಿತ ವೆಂಕಟೇಶ ಶ್ರೀಶ ಅ.ಪ. ಪಣೆ ತೋರು ವರ ಕುಂಕುಮದ ತಿಲಕ ತಿದ್ದುವೇನು ಕೃಷ್ಣ ಕೊರಳ ತೋರೆಲೊ ದೇವ ಶ್ರೀ ವತ್ಸದಾಮೇಲೆ ಮೆರೆವ ತೆರ ಹಾರಹಾಕುವೆನೀಗ ಶ್ರೀಶಾ ಸುರವಂದ್ಯನೆ ದೇವ ಶ್ರೀನಿವಾಸ 1 ವೇದಾಭಿಮಾನಿಯೆ ವೇದದಿಂದಮುತ್ರವನು ಆದರದಿ ಭಕ್ತರಿಗೆ ಕೊಟ್ಟಿ ಕರಕೆ ಮೋದದಿಂದ ಗಂಧವನು ಹಚ್ಚುವೆನು ಎಲೊ ದೇವ ಸಾಧಿಸಿ ಭೂಮಿಯ ತಂದ ವರಹ ಕಂಠವ ತೋರೋ ಆದರದಿ ಹಚ್ಚುವೆನು ದೇವ ದೇವ 2 ಕಂದನಾ ನುಡಿಕೇಳಿ ಕಂಬದಿಂ ಬಂದವನೆ ಅಂದದಿಂ ಬ್ರಹ್ಮಚಾರಿಯಾಗಿ ಮೆರೆವ ದೇವ ಸುಂದರ ಪರಶುರಾಮ ಅಂದದ ದಶರಥಸುತನೆ ಮಂದರೋದ್ಧರ ಕೃಷ್ಣ ಸುಂದರ ಬೌದ್ಧ ಕಲ್ಕಿ ನಿನ್ನ ಮಂದಗಮನೆಯ ವೀಳ್ಯ ಸ್ವೀಕರಿಸೊ ಶ್ರೀ ಶ್ರೀನಿವಾಸಾ 3
--------------
ಸರಸ್ವತಿ ಬಾಯಿ