ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜಿಸಿ ಧನ್ಯನಾದೆ ನಾನು ಭುಜಗಶಯನನಂಘ್ರಿಯನ್ನು ಪ ಕುಸುಮ ತರಲು ಸರಸಿಧುಮುಕಿ ಮೊಸಳೆಬಾಯಿಗೆ ಸಿಲುಕಿ ಕರಿಯು ಕಂಟಕ ಗೆಲಿದು ಅಸಮಸೌಖ್ಯ ಪೊಂದಿದ್ದು ಕೇಳಿ 1 ಪಾಪಿ ಕುರುಪನೋಲಗದಲ್ಲಿ ದ್ರೌಪದಿಗೊದಗಿಬರಲು ಭಂಗ ಆಪತ್ತು ಗೆಲಿದಳೆಂಬುದ ಕೇಳಿ 2 ಇಳೆಯೊಳ್ಪತಿಯ ಶಾಪದಿಂದ ಶಿಲೆಯ ರೂಪದಿ ಬಿದ್ದ ಯುವತಿ ಗೊಲಿದು ಪಾವನಾಂಗಿಯೆನಿಸಿ ಕುಲಕೆ ತಂದ ಸುದ್ದಿ ಕೇಳಿ 3 ತ್ಯಜಿಸಿ ತನ್ನ ಬ್ರಹ್ಮಕುಲವ ಕುಜಕುಲದ ನಾರಿಗೆ ಕೆಟ್ಟ ಅಜಮಿಳನ ಅಂತ್ಯಕ್ಕೆ ಒದಗಿ ನಿಜಪದವಿ ನೀಡಿದ್ದು ಕೇಳಿ 4 ಅಂಬುಧಿನಿಲಯ ಅಸಮ ಮಹಿಮ ಕಂಬುಕಂಧರಮಿತ್ರ ಭಕುತ ಬೆಂಬಲ ಶ್ರೀರಾಮ ಪ್ರಭುವೆ ನಿನ್ನ ನಂಬಿದವರ ಸಂಭ್ರಮ ಕೇಳಿ 5
--------------
ರಾಮದಾಸರು