ಶ್ರೀರಂಗನಾಥಾ ಶ್ರಿತ ಸೌಖ್ಯದಾತ ಪ
ದಾತ ಅ.ಪ
ಬ್ರಹ್ಮಕರಾರ್ಚಿತ ಪಾದಾರವಿಂದ
ಬ್ರಹ್ಮಜನಕ ಪೂರ್ಣಾನಂದ ಮುಕುಂದಾ 1
ರಾವಾಣಾನುಜಗೆ ಒಲಿದು ನೀ ಬಂದೆ 2
ಕಾವೇರಿ ತಪಗೈಯೆ ಕರುಣದಿ ನೀ ನೋಡಿ
ದೇವ ತನ್ಮಧ್ಯದಿ ನೆಲೆಸಿದೆ ಹೂಡಿ 3
ಏಳು ಪ್ರಾಕಾರ ಮಧ್ಯದಲ್ಲಿರುವವನೆ
ಫಾಲನಯನ ಸಖ ಪತಿತ ಪಾವನನೆ 4
ನಿನ್ನ ಸಂದರುಶನ ಮಾಡಿದ ಜನರು
ಧನ್ಯರಾಗುತಯಿಹಪರ ಪಡೆಯುವರು 5
ಚಂದ್ರ ಪುಷ್ಕರಣಿಯೋಳ್ಮಿಂದ ತಕ್ಷಣದಿ
ಬೆಂದು ಪೋಗುವುದಘವೃಂದವು ಭರದಿ 6
ಗುರುರಾಮ ವಿಠ್ಠಲ ವರಮುನಿ ಪಾಲ
ಶರಣಜನಾಧಾರ ಶ್ರೀ ತುಲಸೀ ಮಾಲಾ 7