ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ಯೋಗ್ಯ ನೋಡಿರೈ ಭಕುತಿಗೆ | ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ | ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ | ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ ಆವಗಿರುವ ಕೂಡಿಕೊಂಡು ಹರಿಯ ದಾಸರಾ 1 ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ | ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು | ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ | ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2 ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ | ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು | ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ | ದೊಳನವನ ನಲುವ ಗುರುಮಹಿಪತಿ ಪ್ರೀಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾಸನಾಗು ಹರಿಯ ದಾಸನಾಗು ಮೋಸಹೋಗದೆ ಭವಕೆ ಬ್ಯಾಸರಾಗು ಪ ಭಾನುಮಂಡಲ ಕಂಡು ಶ್ವಾನನುಬ್ಬರಿಪಂತೆ ಭೂನಾಥನಡಿವಿಡಿದು ಬಾಳ್ವೆ ನಿನಗೆ ಹೀನಮಾನವ ಕಂಡಣಕೆ ನುಡಿದರು ಸರಿಯೆ ಜ್ಞಾನನಿಧಿ ಹರಿಭಕುತಿಯ ಲೆಕ್ಕಿಸದೆ ಮಾಡು1 ಕಾಳುವೆಗ್ಗಳವಾಗೆ ಸುಮತಿ ಸಂಗ್ರಹಿಪಂತೆ ಬಾಳುವೆಯೊಳ್ಹರಿಸೇವೆ ಬಲು ಅಗ್ಗವಂತೆ ಕೀಳು ಜನರಲ್ಲಿ ಲೌಕಿಕತೆ ಮರುಳಾಗಿ ಸಂತೆ ಕೇಳುವವರಾರು ಹರಿಭಕುತಿ ಮಾಡುವವರು2 ಮಾರಿಗಾಹುತಿಯಾಗ್ವ ಕುರಿಮೇಕೆ ತೆರನಂತೆ ಘೊರ ಜವನನು ಮರೆತು ಕೊಬ್ಬುವವರಂತೆ ಶೇರು ನರಸಿಂಹವಿಠ್ಠಲನಂಘ್ರಿಕಮಲವಾ ಆರಾರು ಬಾಧೆಯಿಲ್ಲದೆ ಗತಿಯ ಕೊಡುವಾ 3
--------------
ನರಸಿಂಹವಿಠಲರು
ಶುಕ್ರವಾರ ಕೇಶವನ ಭಜನೆ ಮಾಡಬೇಕೊ ನಮ್ಮ ಚಕ್ರಧಾರಿಯನ್ನು ಬಿಡದೆ ನೋಡಬೇಕೊ ಪ ಚಕ್ರಧಾರಿಯಾಗಿ ಸಕಲ ಚಕ್ರವರ್ತಿಗಳನು ಗೆದ್ದ ಆ ಕ್ರುರಗೆ ತಾ ವರನಿತ್ತು ನಿತ್ಯಾನಂದ ತ್ರಿವಿಕ್ರಮನನ್ನು ಅ.ಪ ಅಪ್ರಾಕೃತಮಾದ ವೈಕುಂಠನಾಥ ರಂಗಾ ಜಯ ಜಯ ಕ್ಷಿಪ್ರದಿಂದಾ ಭಕ್ತರಿಗೊಲಿಯುವಡೋಪಪತ್ರಂಗಾ ಅಪ್ರಮೇಯ ಅಚಲನಾನು ಆರೂಢರಿಗಾಧೀನವಿದಹುದೊ ನಿತ್ಯಾನಂದನೆ ಮುರಳೀಧರ ಗೋಪಾಲ ಜನಾರ್ದನ ಸತ್ಯಬ್ರಹ್ಮವೋ 1 ದಾಸದಾಸರಿಗೆ ದಾಸನಾಗಬೇಕೊ ಕೆಟ್ಟ ವೇಷ ಭಾಷೆ ದುರ್ದೋಷಗಳು ವೋಗಬೇಕೊ ಬ್ಯಾಸರಾಂತಕಮಾದ ಶ್ರೀಮದ್ದೇಶಿಕಾ ಶ್ರೀತುಲಸಿರಾಮಾ ನಾಸಿಕಾಗ್ರನಿವಾಸನೆಂದು ನಂಬಿ ನಾರಾಯಣನಂ ಬಿಡದೆ 2
--------------
ಚನ್ನಪಟ್ಟಣದ ಅಹೋಬಲದಾಸರು