ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಜ್ಞಾನದ ಕೀಲು ಬ್ಯಾರ್ಯಾದ ನೋಡಿ ಬಲು ಮೇಲು ಧ್ರುವ ಮೇಲಾಗಿ ಸ್ವಸುಖ ಸಾಧನ ಚಾಲ್ವರುತದ್ಯಾತಕ ತಾ ಜನ ತಿಳಕೋಬಾರದ ಈ ನಿಜಖೂನ ಸುಲಲಿತ ನಿಜಧನ 1 ಮೂಲೊಕದಲ್ಯವ ಪೂರ್ಣಪವಿತ್ರ ನೆಲೆಗೊಂಡಿ ಹ್ಯ ಘನ ಚರಿತ್ರ ಬಲದಿಹ್ಯ ಬಾಹ್ಯಾಂತ್ರ 2 ದೀನಮಹಿಪತಿ ಗುರುದೇವದೇವೇಶ ಖೂನವಿಡವದು ಬಲುಸಾಯಾಸ ಮುನಿಜನರುಲ್ಹಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನವೇನೆಂಬುದನರಿಯೋ ಮನುಜ ಮನ ವೇನೆಂಬುದನು ಧ್ರುವ ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜ1 ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ ಪ್ರತ್ಯೇಕರವನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ 2 ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕುವೇದವ ಬಲ್ಲವನೆಂದೆನಿಸಿ ವಿಕಳಿಸುತಿಹ್ಯದು ದಾವುದೊ ಮನುಜ 3 ಉತ್ತಮೊತ್ತಮರ ಕಂಡಾಕ್ಷಣ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿ ಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ 4 ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಿಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಡೆ ಅಪಹರಿಸುವದು ದಾವುದೊ ಮನುಜ 5 ಪ್ರಾಚೀನವೆ ತಾಂ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚ ಹೊಡೆದಾಡಿಸುತ ನಾಚಿಸುತಿಹುದು ದಾವೊದೊ ಮನುಜ 6 ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆ ಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ 7 ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹÀ ಅನುಭವ ಸುಖದಾಟದ ಖೂನ ದೋರಿಸುದು ದಾವುದೊ ಮನುಜ 8 ಮರವಿಗೆ ತಾನೆ ಅರಿವೇ ಕೊಟ್ಟು ತಿರಿವು ಮರವಿನಂಕುರದ ಕುರ್ಹುವಿನ ಇರಹು ತೋರಿಸುದು ದಾವುದೊ ಮನುಜ 9 ಮನವಿನ ಮೂಲವು ತಿಳಿವದು ಭಾನುಕೋಟಿ ಪ್ರಕಾಶನ ಕರುಣದಲಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ 10 ಹರಿಯೆ ಗುರುವೆಂದರುಹಿಸಿ ಆತ್ಮಲಿ ಶರಣಹೋಗುವ ಭಾವನೆದೋರಿ ತರಳಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುಖ್ಯಬೇಕು ಗುರುಭಕ್ತಿಗೆ ತಾ ಸದ್ಭಾವನೆ ಸಪ್ರೇಮ ಸಿಕ್ಕಿ ಬಾಹ್ವ ಸಾಧಿಸಿ ತನ್ನೊಳು ಶ್ರೀಗುರುಸರ್ವೋತ್ತಮ ಧ್ರುವ ಸೋಹ್ಯ ತಿಳಿದರೆ ಸಾಧಿಸಿಬಾಹುದು ಶ್ರೀಗುರುವಿನ ಶ್ರೀಪಾದ ದೇಹ ನಾನಲ್ಲೆಂಬು ಭಾವನಿ ಬಲಿವುದು ತಾ ಸರ್ವದಾ ಗುಹ್ಯಮಾತು ಗುರುತಕೆ ಬಾಹುದು ಸದ್ಗುರು ಸುಪ್ರಸಾದ ಬೋಧ 1 ಕೀಲು ತಿಳಿದರೆ ಕಿವಿ ಸಂದಿಲ್ಯಾದೆ ಮೂಲಮಂತರದ ಖೂನ ಕೂಲವಾದರೆ ಗುರುದಯದಿಂದಲಿ ಕೇಳಿಸುವದು ಪೂರ್ಣ ಮ್ಯಾಲೆ ಮಂದಿರದೊಳು ತಾ ತುಂಬೇದ ಥಳಥಳಿಸುವ ವಿಧಾನ ಶೀಲ ಸುಪಥ ಸಾಧಿಸಿ ಸದ್ಗತಿ ಸಾಧನ 2 ಟೂಕಿ ಬ್ಯಾರ್ಯಾದೆ ಏಕೋಭಾವದಿ ಕೇಳಿರೊ ನೀವೆಲ್ಲ ಹೋಕು ಹೋಗಿ ಹುಡುಕಿದರೆ ತಾ ಎಂದಿಗೆ ತೋರುವದಲ್ಲ ಶೂನ್ಯ ಜೋಕೆಯಿಂದ ಜಾಗಿಸಿಕೊಡುವಾ ಮಹಿಪತಿಗುರು ಮಹಾಮಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು