ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು ಆಶೆಯಿಂದಲಿ ಗತಿ ಬೇಡಲಿಲ್ಲ ದಾಸತನ ಎನಗೆಲ್ಲಿಹುದು ಶ್ರೀನಿ- ವಾಸನೆ ಅನಂತ ಕಲ್ಪದಲ್ಲಿ ನಾಶನ ಮಾಡಿಕೊಂಬ ದಾಸ ನಾನು ದಾಸನೆನಿಸಿಕೊಂಡು ತಿರುಗುವ ಜನಕ್ಕೆ ಲೇಸಾಗಿ ದಂಡಿಸಿ ಮೆದಿಯ ಬೇಕು ಕೇಶವ ವಿಜಯವಿಠ್ಠಲನೆ ನಿನ್ನ ಮರೆದು ಗ್ರಾಸಕ್ಕೆ ತಿರುಗುವ ಭಾಸಮಾನ ದಾಸ 1 ಮಟ್ಟತಾಳ ತಿರಕದಾಸ ನಾನು ಹರಕ ದಾಸ ನಾನು ಕರಕರಿಯನು ಮಾಡಿ ಪರರ ಪೀಡಿಸಿ, ಉ- ದರ ಪೊರೆವ ದಾಸನು ನಾನು, ಬರಿಯ ದಾಸ ನಾನು ಅರಿಮರ್ದನ ಹರಿ ವಿಜಯವಿಠ್ಠಲ ನಿನ್ನ ಪರಮ ಭಕ್ತನೆಂದು ತಿರಿದುಣ್ಣ ಮೆಚ್ಚಿದೆನು 2 ತ್ರಿವಿಡಿ ತಾಳ ಕೊಟ್ಟರೆ ಹರಸುವೆನು, ಕೊಡದಿದ್ದರೆ, ಬೆರ ಳಿಟ್ಟು ಬಗಳುವಂಥ ಭ್ರಷ್ಟ ದಾಸನು ನಾನು ಸೃಷ್ಟಿಯೊಳಗೆ ಬಹು ಧನವಂತರ ಮನೆಯ ಮೆಟ್ಟು ಕಂಡರೆ ಬಿಡದಿಪ್ಪ ದಾಸ ನಾನು ನಷ್ಟ ವಾಗಿದ್ದ ಉಚ್ಛಿಷ್ಟ ದಾಸನು ನಾನು ದೃಷ್ಟಿಯಿಂದಲಿ ನೋಡೊ, ವಿಜಯವಿಠ್ಠಲ ಕೇಳೊ ಎಷ್ಟೊ ಕಾಲದ ಪಾಪಿಷ್ಠ ದಾಸನು ನಾನು 3 ಅಟ್ಟತಾಳ ಕುರುಡ ದಾಸನು ನಾನು ಕುಂಟ ದಾಸನು ನಾನು ಹುರಡಿಗೆ ಮಾಡುವ ಹುರಳಿಲ್ಲದ ದಾಸ ಸರಿಯವರನು ಕಂಡು ಮರಗುವ ದಾಸನು ಎರಡು ಕಡೆ ಕೆಟ್ಟ ಭರಡಿ ದಾಸನು ನಾನು ಗರಕೆ ಕರದಾರೆ ಹಿಗ್ಗುವ ದಾಸನು ನಾನು 4 ಆದಿತಾಳ ಹೀನ ದಾಸನು ನಾನು, ನೀಚ ದಾಸನು ನಾನು ಹಾನಿವೃದ್ಧಿಗಳೆಲ್ಲ ತಿಳಿಯದ ದಾಸನು ನಾನಾ ದುಷ್ಕರ್ಮ ಮಾಳ್ಪ ದಾಸನೊ ನಾನು ಮಾನವಿಲ್ಲದೆ ಅಪಮಾನ ದಾಸ ನಾನು ದಾನ ಧರ್ಮವಿಲ್ಲದ ಹೀನ ದಾಸನು ನಾನು ಅನಂತ ಜನನಕ್ಕೆ ಹೊಲೆದಾಸನು ನಾನು ಶ್ರೀನಿವಾಸ ತಿರುಮಲೇಶ ವಿಜಯವಿಠ್ಠಲ ಬ್ಯಾನೆ ಇದ್ದಲ್ಲಿ ಬಿಡುವ ಬಕ್ಕದಾಸನು ನಾನು 5 ಜತೆ ಹೊಟ್ಟೆಕಿಚ್ಚಿನ ದಾಸ-ಹಲುಬಿ ಪೋಗುವ ದಾಸ ದಟ್ಟದಾರಿದ್ರ ದಾಸನು ವಿಜಯವಿಠ್ಠಲರೇಯ 6
--------------
ವಿಜಯದಾಸ
ಇಕ್ಕೊ ಇಲ್ಲೆಹಾನೆ ಅಖಂಡ ಗುರುತಾನೆ ಬೇಕಯೆಂದವರಿಗೆ ಪೂರ್ಣ ಸಿಕ್ಕುತಾನೆ ಧ್ರುವ ಅರವ್ಹಿನ ಮುಂಧಾನೆ ಮರವ್ಹಿನ ಹಿಂಧಾನೆ ಕುರಹು ತಿಳಿದರೆ ತಾನೆ ಸ್ಥಿರವಾಗ್ಯಾನೆ 1 ಗುರುತ ಕಂಡವಘಾನೆ ಗುರುಸ್ವರೂಪಧ್ಯಾನೆ ಗುರುಕೃಪ್ಯಾದವಘಾನೆ ಗುರುತಾನೆ 2 ಅಣುರೇಣುದೊಳಘಾನೆ ಜನವನ ತುಂಬ್ಯಾನೆ ಅನುಭವಕ ತಾನೆ ಖೂನಾಘ್ಯಾನೆ 3 ಮನದ ಕೊನಿಲಿಹಾನೆ ಘನವೆ ಘನವಾಘ್ಯಾನೆ ದೀನ ಮಹಿಪತಿ ಸ್ವಾಮಿ ತಾನೆ ತಾನೆ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳು ಕಿವಿಗೊಟ್ಟು ನಿನ್ನ ನಿಜಗುಹ್ಯದ ಸುಮಾತ | ಹೇಳುತಿಹ್ಯಾ ನಂದಬೋಧ ತಿಳಿಯಾ ವಿಶ್ವನಾಥ ಧ್ರುವ ನೋಡಿ ನಿನ್ನ ಗೂಡಿನೊಳು ಮಾಡಿಕೊ ಸ್ವಹಿತ ಚಾಡುವಿಡಿದು ನಡೆದು ಹೋಗಿ ಕೂಡಿರೊ ಸುಪಥ ಹಿಡಿಯದೆ ಆಲೇಶದ ಮನೆಯ ನೀ ಪಡಕೊ ಘನ ಅಮೃತ ಬೇಡಿ ಬಯಸಿದರಾಗದು ವಸ್ತು ಹಿಡಕೊಡುವ ಗುರುನಾಥ 1 ಖೂನ ಕಂಡು ಗುರುಪಾದದಲಿ ತನುಮನದಲಿ ನೀಜಡಿಯೊ | ಮೌನಮುಗ್ದದಲಿ ನೀನೆಂದು ಅನುಭವದ ನೀಹಿಡಿಯೊ ನಾನು ನೀನೆಂಬುದು ತಾ ಬಿಟ್ಟರೆ ಸನ್ಮತ ಸುಖನಿಲುಕಡಿಯೊ ಜ್ಞಾನ ದೈವತೆಯಂಬು ಮಾರ್ಗದಲಿ ಅನುಸರಿಸಿ ನೀ ನಡಿಯೋ 2 ಒಂದೆ ಮನದಲಿ ಹೊಂದಿ ನಿಜವುಸಂದಿಸಿಕೊಸ್ವಾನಂದ ಬಂದ ಜನ್ಮವು ಸಾರ್ಥಕ ಮಾಡುದು ಇದು ನಿನಗೆ ಬಲುಚಂದ ಹಿಂದೆ ಮುಂದೆ ತಾ ತುಂಬ್ಯಾನೆ ಮಹಿಪತಿಸ್ವಾಮಿ ಸಚ್ಚಿದಾನಂದ ಹೊಂದಿದವರನುಮಾನವ ಬಿಡಿಸಿ ಛೇದಿಸುವ ಭವಬಂಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುರಾಯ ನೀ ಎನ್ನ ತವರ ಮನಿ | ಶರಣರಿಗೆ ಕೈವಲ್ಯದಾನಿ ಪ ಗುರುವೆ ಎನ್ನ ಬಂಧು | ಬಂದು ಪೇಳಿರಿ ವಾಕ್ಯ ಎನಗೊಂದು | ಬಿಡಿಸೀದಿ ಈ ಜೀವಶಿವ ಸಂದು | ನಿಜರೂಪ ತೋರಿದಿ ಕೃಪಾಸಿಂಧು 1 ಶಮ ದಮವು ಕೊಡುತಾನೆ |ಅಂತರ ಬಾಹ್ಯದಲಿ ತಾ ತುಂಬ್ಯಾನೆ 2 ಇರಲಾರೆನು ಬಿಟ್ಟು ಅರಕ್ಷಣಾ | ಗುರುರಾಯ ಎನ್ನಜೀವದ ಪ್ರಾಣ | ದೊರಕಿದಿ ಪರಮವೇ ದಾನಸಾರಿ ಪೇಳುವ ಜ್ಞಾನಬೋಧ ಪೂರ್ಣ 3
--------------
ಜ್ಞಾನಬೋದಕರು
ನಮಗೊಬ್ಹಾನೆ ತಾ ಜೀವಜೀವದ ಗೆಳೆಯ ಧ್ರುವ ಸುತ್ತಿ ಸೂಸ್ಯಾಡುತ್ಹಾನೆ ನೆತ್ತಿಯೊಳಗೆ ತುಂಬ್ಯಾನೆ ತುತ್ತುಮಾಡಿ ಉಣಿಸುತ್ಹಾನೆ ಹತ್ತಿಲೆ ತಾ ಹಾನೆ 1 ಹೊಟ್ಟೆಲೆನ್ನ ಹಿಡಿದಾನೆ ಘಟ್ಯಾಗಿ ರಕ್ಷಿಸುತಾನೆ ದೃಷ್ಟಿಸಿ ನೋಡುತ್ಹಾನೆ ಗುಟ್ಟಿನೊಳ್ಹಾನೆ 2 ತಾನೆ ಸೋತು ಬರುತ್ಹಾನೆ ಎನಗುಳ್ಳ ಸದ್ಗುರು ನಾಥ್ಹಾನೆ ಕನಗರಸಿದಾಗೊಮ್ಹಾನೆ ಮನದೊಳು ನಿಂದ್ಹಾನೆ 3 ಮಾಯದ ಸುಖ ಮರಿಸ್ಯಾನೆ ತಾಯಿ ತಂದೆ ತಾನಗ್ಹ್ಯಾನೆ ಸಾಹ್ಯ ಬಲು ಮಾಡುತ್ಹಾನೆ ಭವಭಯ ಬಿಡಿಸ್ಹ್ಯಾನೆ 4 ಮನ್ನಿಸಿ ದಯ ಬೀರುತ್ಹಾನೆ ಧನ್ಯ ಪ್ರಾಣಗೈಸುತ್ಹಾನೆ ಚಿಣ್ಣ ಮಹಿಪತಿಯ ಗುರು ತಾನೆ ಕಣ್ಣಿನೊಳ್ಹಾನೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರುದ್ರಕುಮಾರನ ಚರಣಕ್ವಂದನೆ ಮಾಡಿ ವಿದ್ಯಾಭಿಮಾನಿ ವಾಣಿಯ ಸು - ಪದ್ಮ ಪಾದಗಳಿಗೆ ಎರಗಿ ನಾ ಪೇಳುವೆ ಶುದ್ಧವಾಗಿ ಕೊಡು ಮತಿಯ 1 ಶ್ರಾವಣಮಾಸ ಶುಕ್ಕುರುವಾರ ಶುಭಮೂರ್ತೆ (ಮುಹೂರ್ತೆ?) ಕಾಲದಿ ಕಮಲಾಕ್ಷಿಯನು ಆಲಯದೊಳಗಿಟ್ಟಾದರದಿಂದ ಪೂಜಿಸೆ ಬೇಡಿದಭೀಷ್ಟ ನೀಡುವಳು 2 ಇರುತಿರಲೊಂದು ಪಟ್ಟಣದಲ್ಲಿ ರಾಜನು ತನಯರಿಲ್ಲದ ಕಾರಣವು ವಿವಹದುತ್ಸವಕೆಂದು ತೆರಳೋ ಪತಿಯ ಕಂಡು ತೆಗೆದಿಟ್ಟಳಾತನಾಯುಧವ 3 ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದು ಅಟ್ಟಿಹ ತನ್ನ ದೂತರನು ನೆಟ್ಟನೆರಡು ಕಾಲು ಚಾಚಿ ಕುಳ್ಳಿರಲಾಗ ತಟ್ಟನೆ ದಾಟಿ ನಡೆದನು 4 ಮೂರು ತಿಂಗಳು ಗರ್ಭಸಾಕ್ಯಾ (ವಾಸಕ್ಕಾ?)ಗಿ ಬಂದಿತು ನೀನೀಗ ದಾಟಿ ಪೋಗುವರೆ ಕೇಳಿ ಸಂಭ್ರಮದಿಂದ ಹೇಳೆ ರಾಜಗೆ ಬಂದು ತಾಳಿದ ಪರಮ ಹರುಷವನು 5 ಸದ್ದು ಮಾಡದೆ ಸೂಲಗಿತ್ತಿ ಕರೆಸಿ ತಾ- ನಿದ್ದ ವಾರ್ತೆಗಳ ಹೇಳಿದಳು ಮುತ್ತಿಲು ತುಂಬ್ಹೊನ್ನು ಕೊಡುವೆ 6 ಹುಡುಕುತ ಬಂದಳು ಕಡೆಯ ಬಜಾರಕ್ಕೆ ಬಡವ ಬ್ರಾಹ್ಮಣನ ಮಂದಿರದಿ ಮಡದಿಗೆ ಮೂರು ತಿಂಗಳು ಗರ್ಭವಾಗಿದೆ ಕÀಡೆಹಾಯ್ಸಲೆನ್ನ ಕರೆಸೆಂದ್ಲು 7 ಮೂರು ತಿಂಗಳ ರಾಜನರಸಿಗೆ ಮೊಗ್ಗೆಯು ಏಳು ತಿಂಗಳು ಹೂವ ಮುಡಿಸಿ ಎಂಟು ತಿಂಗಳಿಗೆ ಶ್ರೀಮಂತದುತ್ಸವ ಮಾಡಿ ಬಂತಾಗ ನವಮಾಸಗಳು 8 ವಿಪ್ರನ ಮಡದಿಗೆ ಒತ್ತಿ ಬಂದವು ಬ್ಯಾನೆ ಕಟ್ಟಿ ಕಣ್ಣುಗಳ ನಿಚ್ಚಣಿಕೆ ಹತ್ತಿ ಇಳಿದು ಹಡೆದಳ ಗಂಡುಕುಮಾರನ ಎತ್ತಿಕೊಂಡೊಯ್ದಳಾಕ್ಷಣವೆ 9 ಕಲ್ಲು ಗುಂಡನೆ ಹಡೆದಿಯೆ ನೀನೆಂಬಂಥ ಸೊಲ್ಲು ಕೇಳುತಲೆ ತಲ್ಲಣಿಸಿ ಎಲ್ಲಿದ್ದರೆನ್ನ ಕುಮಾರನು ಸುಖಬಾಳಲೆಂ- ದಲ್ಲಿ ನೇಮವ ನಡೆಸಿದಳು 10 ಜಾತಕ ಬರೆಸಿ ಸಕ್ಕರೆ ಸಗಟದಿಂದ್ಹಂಚಿ ದಕ್ಷಿಣೆ ತಾಂಬೂಲ ಸಹಿತ ಬ್ರಾಂಬರಿಗೆಲ್ಲ ಇಟ್ಟು ಭೋಜನವ ಮಾಡಿಸಿದ 11 ನಾಮಕರಣ ಜಾವಳ ಜುಟ್ಟು ಉಪÀನಯನ ಪ್ರೇಮದಿಂದ್ವಿದ್ಯವ ಕಲಿಸಿ ಸೋಮನಂದದಿ ಹೊರಗ್ಹೊರಟು ತ- ಮ್ಮಮ್ಮನ ನೋಡಿ ಮೋಹಿಸಿದÀನಾಕ್ಷಣದಿ 12 ಕತ್ತಲೊಳಗೆ ಬರುತಿರಲು ಬಾಗಿಲ ಮುಂದೆ ಕಟ್ಟಿದ ಗೋವು ಕಾಣದಲೆ ವತ್ಸದ ಕಾಲು ತುಳಿಯಲಾಗ ಅದು ಬಾಯಿ ಬಿಟ್ಟೊದರಿತು ಭಯದಿಂದ 13 ಅಮ್ಮ ನೀ ಬಾರೆ ತಮ್ಮಮ್ಮನರಿಯದವ ನಮ್ಮನು ಬಲ್ಲನೆ ಒಮ್ಮ್ಯಲ್ಲದೆರಡುಬಾರ್ಯಾಲಿಸ್ಯದರ ಮಾತು ತಮ್ಮಿ ್ಹರಿಯರನು ಕೇಳಿದನು 14 ಮಂದಾಕಿನಿಯ ಸ್ನಾನವ ಮಾಡಿ ಬಂದರೆ ಸಂದೇಹ ಪರಿಹಾರವಾಗುವುದು ಹಾ- ಗೆಂದು ಹೇಳಿದ ಹಿರಿಯರ ವಾಕ್ಯವ ಕೇಳಿ ಗಂಗಾಯಾತ್ರೆಗೆ ತೆರಳಿದನು 15 ನಡೆದು ಬಂದನು ನಡುಮಾರ್ಗದಿ ಪಟ್ಟಣ ಹಡೆದ ಮನೆಯ ಬಾಗಿಲಲ್ಲಿ ಕೊಡಬೇಕು ನಮಗಿಷ್ಟು ಸ್ಥಳಗಳೆಂದೆನುತಲಿ ನುಡಿದು ಪವಡಿಸಿದ ತಾನಲ್ಲಿ 16 ಹೊರಗಿಂದ ಶೆಟವಿ ಬಂದಳು ಮಹಾಲಕ್ಷುಮಿ ಒಳಗಿಂದ ಬಂದಳು ಎನ್ನ ವರಪುತ್ರ ಇವನ ದಾಟಲು ನಿನ್ನ ಶಿರವು ಸಿಡಿದು ಸಾ(ಸಹ?)ಸ್ರೊ ್ಹೀಳಾಗೋದೆನಲು17 ಅದು ಕೇಳಿ ಶೆಟವಿ ತಾ ತಿರುಗಿ ಪೋಗುತಲಿರೆ ಬದಿಯಲ್ಲಿ ಬದುಕಿದ್ದ ಶಿಶುವು ಇದು ನಿನ್ನ ಪುಣ್ಯದಿಂದುಳಿದಿತೆಂದೆನುತಿರೆ ಅಧಿಕ ಸಂತೋಷವಾಗಿ ಹೊರಟು 18 ಭಾಗೀರಥಿಯ ಸ್ನಾನವಮಾಡಿ ತಾನು ಪ್ರ- ಯಾಗಕೆ ನಡೆತರಲು ಬ್ಯಾಗ ಮಾಡಿದ ದಾನಧರ್ಮಕಾರ್ಯಗಳ ತಾ- ನಾಗ ಕಂಡನು ಚತುರ್ಹಸ್ತ 19 ನಾಲ್ಕು ಹಸ್ತಗಳ ಕಂಡಕಾರಣೇನೆಂದು ವ್ಯಾ- ಕುಲದಿಂದ ಕೇಳಿದನು ಸಾಕಿದವರು ಹಡೆದವರುಂಟು ನಿನಗೆಂದ್ವಿ- ವೇಕಬುದ್ಧಿ ಅವರು ಹೇಳಿದರು 20 ಗೊತ್ತಿಲೆ ಬಂದನು ಪಟ್ಟಣದೊಳಗೊಂಡು ಹೆತ್ತರಂದಿನದ (?) ಮಂದಿರದಿ ಹೊಸ್ತಿಲೊಳಗೆ ಅಡ್ಡಮಲಗಿದ್ದ ಕಾಲಕ್ಕೆ ಮತ್ತಾಗ ಬಂದಳು ಶೆಟವಿ 21 ಚೊಚ್ಚಿಲ ಮಗನ ದಾಟಲು ನಿನ್ನ ಶಿರವು ಬಿಚ್ಚಿ ಸಾಸ್ರೊ ್ಹೀಳಾಗೋದೆನಲು ಲಕ್ಷ್ಮಿ ಮಾತಿಗೆ ತಿರುಗಿದಳೆನ್ನ ತುತ್ತಿಗೆ ಮಿತ್ರ್ಯಾದ ಪಾಪಿ ಎಂದೆನುತ 22 ಸತ್ಯವಂತನೆ ನಿನ್ನ ಪುಣ್ಯದಿಂದಿಬ್ಬರು ಪುತ್ರರು ಉಳುದÀರಂತಿಹರು
--------------
ಹರಪನಹಳ್ಳಿಭೀಮವ್ವ
ಸಾವಧಾನವಾಗಿ ನೋಡಿ ಶ್ರೀ ವಾಸುದೇವನ ದ್ರುವ ಆವಾಗ ನೋಡಿ ಚರಣ ಸೇವಿಸಿ ನಿಧಾನ 1 ಕಣ್ಣಮುಂದೆ ಕಟ್ಯಾನೆ ಭಿನ್ನವಿಲ್ಲದೆ ತುಂಬ್ಯಾನೆ ಸಣ್ಣ ದೊಡ್ಡರೊಳಗ್ಹಾನೆ ಕಾಣಿಸುತಲ್ಹ್ಯಾನೆ 2 ಚಿತ್ತಮನೊಂದು ಮಾಡಿ ಹತ್ತಿಲಿ ಸಾಭ್ಯಸ್ತ ನೋಡಿ ನಿತ್ಯ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು