ಹಿತ ನೋಡೀ ಮಾಡಿ ಸುಜನರ | ಪಥವನೆಕೂಡಿ ಪ
ಗುರುವಿಗೆ ಬಾಗಿ ಶರಣವ ಹೋಗಿ |
ತರಳತೆ ನೀಗಿ ಅರಹುತರಾಗಿ 1
ಭ್ರಾಂತರಕೂಡಿ ಮತಿಗಳ ಬ್ಯಾಡೀ |
ಸಂತರೊಳಾಡಿ ಅನಂತನ ಪಾಡಿ 2
ಸಂಧಿಸಿ ತಂದ ಸುಕೃತಗಳಿಂದ |
ಹೊಂದುವವೆಂದೇ ನರದೇಹ ಮುಂದೆ 3
ವಿವೇಕದಿಂದಾ ವಿಡಿರಿದೆ ಛಂದಾ |
ಅವನಿಲಿ ಬಂದಾ ಜನುಮಕ ಛಂದಾ 4
ಗುರುಮಹಿಪತಿಯಾ ಚರಣದ್ವಿತಿಯಾ |
ವರಿಸಿ ಮುಕುತಿಯಾ ಪಡೆವದು ಗತಿಯಾಜ್ಞ 5