ಒಟ್ಟು 16 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜಬ್ಯಾಡಂಜಬ್ಯಾಡವೋ ಭೂನಂದಸೂನು ಪ ಅಂಜಬ್ಯಾಡಂಜಬ್ಯಾಡ ಕರುಣನಿಧಿಯೆಸಂಜೆ ಮುಂಜಾನಿಲ್ಲೆ ಬಾರೋ ಮಂಜುಳಾದ ಕಥೆಯ ಪೇಳ್ವೆ ಅ.ಪ. ಪಾಂಡುತನಯನಂತೆ ನಿನ್ನ ಭಂಡಿ ಬಾಹು ಕನ್ನೆಮಾಡಿಕಂಡ ಕಂಡ ಕಾರ್ಯದಲ್ಲೆ ದಂಡಿಸುವುದು ಎನ್ನೊಳಿಲ್ಲ 1 ಗೋಪಿಯಂತೆ ಸೊಂಟದಲ್ಲೆ ತ್ಯಾಪಿ ಹಗ್ಗಗಳನೆ ಕಟ್ಟಿಶ್ರೀಪತಿಯ ಒರಳಿಗ್ಹಾಕಿ ಆಪರಿಂದ ಕಟ್ಟೋಣಿಲ್ಲ2 ಜಾರ ಚೋರನಂತೆ ನಿನ್ನ ನಾರೇರಂತೆ ವ್ಯಾಸಮುನಿಯಮಾರಿಗ್ಹಾಕಿ ವಾರ್ತೆಯನ್ನು ದೂರೋಣಿಲ್ಲ ಜಗದಿ ಸ್ವಾಮಿ 3 ಮಂದಗಮನೆ ಮೋಹಕಾಗಿ ಚಂದ್ರಮೌಳಿಯಂತೆ ಬೆಣ್ಣೆಹಿಂದೆ ಮುಂದೆ ಓಡಿಸಿಂದು ದಣಿಸೋಣಿಲ್ಲ ಶ್ರೀಶಕೃಷ್ಣ 4 ಇಂದಿರೇಶ ಎನ್ನ ಹೃದಯ ಮಂದಿರದೊಳಿಟ್ಟುಕೊಂಡುಚಂದ ಚಂದ ಕಥೆಯ ಪೇಳ್ವೆ ನಂದತನಯ ನೊಂದಿಸುವೆನು 5
--------------
ಇಂದಿರೇಶರು
ಎನ್ನಾಣೆ ಬ್ಯಾಡ ಬ್ಯಾಡವೋ ರಂಗ ನಿನಗಿದುಚೆನ್ನಗಿತ್ತೇರ ಮನೆ ಗೋವಿಂದ ಪ. ಗೋಪೇರ ಮನೆಗಳ ಪೊಕ್ಕು ಬಹುಪರಿ-ತಾಪವ ಮಾಡುವರೇ ಕಂದ ಗೋವಿಂದಕಾಪಟ್ಯಸತಿಯರ ಮಾತ ನೀನಾಲಿಸಿಕೋಪಿಸಬೇಡವಮ್ಮಾ ಗೋಪೆಮ್ಮ 1 ಎನ್ನಪ್ಪ ಕಂದನೆ ಚಿಣ್ಣ ಗೋಪೇರು ಬಂದುನಿನ್ನ ದೂರುತಲೈದಾರೋ ಗೋವಿಂದಕನ್ನೇರು ಕೊಬ್ಬಿಂದ ಅನ್ಯಾಯ ನುಡಿತಾರೆÀಇನ್ನೇನು ಮಾಡಲಮ್ಮ ಗೋಪೆಮ್ಮ 2 ದಧಿ ದುಗ್ಧ ಭಾಂಡ ಒಡೆದು ಗೋಪಿಯರನ್ನುಸದರ ಮಾಡುವರೇ ಕಂದ ಗೋವಿಂದಉದಯದಿ ಗುದ್ದ್ಯಾಡಿ ಮಾರ್ಜಾಲಂಗಳು ಬೀಳೆದÀಧಿಭಾಂಡ ಜಾರಿತಮ್ಮ ಗೋಪೆಮ್ಮ 3 ಬಸವನ ಆಟದಿ ಶಿಶುಗಳೆಲ್ಲರ ಕೂಡಿಮಸಿಮಣ್ಣು ಮೈಯ್ಯಾದವೊ ಗೊವಿಂದಬಿಸಜಾಕ್ಷಿಯರು ತಮ್ಮ ಮನೆಕೆಲಸದ ಕೈಯ್ಯಮಸಿಮಣ್ಣು ಒರೆಸಿದರೆ ಗೋಪೆಮ್ಮ 4 ಒರಗಿದ್ದ ಹಸುಗಳೆಬ್ಬಿಸಿ ಕರುಗಳ ಬಿಟ್ಟುದುರುಳತನವ ಮಾಡೋರೆ ಗೋವಿಂದನೆರೆದಿದ್ದ ಶಿಶುಗಳಾಡುವ ಗುಲ್ಲ ತಾವ್ ಕೇಳಿತುರುಶಿಶು ಬೆದರಿತಮ್ಮಾ ಗೋಪೆಮ್ಮ 5 ಅಣ್ಣ ಬಲರಾಮ ನಿನ್ನ ಬನ್ನಣೆ ಸುದ್ದಿಯಚೆನ್ನಾಗಿ ಪೇಳಿದನೊ ಗೋವಿಂದಉನ್ನಂತ ದಾಯಾದಿಯ ಮಾತುಗಳ ನೀನುಮನ್ನಿಸ ಬೇಡವಮ್ಮ ಗೋಪೆಮ್ಮ 6 ಬಾಯೆನ್ನ ರನ್ನವೆ ಬಾಯೆನ್ನ ಚಿನ್ನವೆಬಾಯೆನ್ನ ಮೋಹದ ಗಿಣಿಯೆ ಗೋವಿಂದಬಾಯೆಂದು ಯಶೋದೆ ಕರೆದಳು ಬಿಗಿದಪ್ಪಿಬಾಯೆನ್ನ ಹಯವದನ ಗೋವಿಂದ7
--------------
ವಾದಿರಾಜ
ಕಳೆಯ ಬ್ಯಾಡವೋ ಕಾಲವ | ತಿಳಿ ನೀ ಮಾನವಾ | ವೃಥಾ | ಪ ಹರಿಚರಿತಾಮೃತ ವರಸುಗ್ರಂಥವನು ಪರಮತತ್ವವೆಂದರಿಯದೆ ಜಗದೊಳು 1 ಹದ್ದುಗಳಂದದಿ ಕಳೆಯಬ್ಯಾಡವೋ ಕಾಲವ 2 ದೋಷಿಗಳಮದದಿ ಕಳೆಯಬ್ಯಾಡವೋ ಕಾಲವ 3 ತನುಮನಧನ ಸತಿಯರನು ವಿಧಿಜಕಗರ್ಪಿಸದೆ ಶುನಕನಂದದಿ ಕಳೆಯ ಬ್ಯಾಡವೋ ಕಾಲವ 4 ಪ್ರೇಮದಿಂದಲಿ ಶಾಮಸುಂದರನ ನಾಮವು ಪಾಡದೆ ಪಾಮರನಂದದಿ ಕಳೆಯಬ್ಯಾಡವೋ ಕಾಲವ 5
--------------
ಶಾಮಸುಂದರ ವಿಠಲ
ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ಪ ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿದುಟ್ಟು ಮೇಗಿಲ್ಲದ ಬೆಲೆಯಾದ ಪಟ್ಟದುಡುದಾರವಿಟ್ಟು 1 ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿಪರಿಪರಿ ಪದಕ ಮುತ್ತು ಸರ ವೈಜಯಂತಿಕೊರಳ ಕೌಸ್ತುಭದ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತಿನ ಜಲ್ಲೆ 2 ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳುಬಗೆಬಗೆ ರತುನಂಗಳ ನಗಗಳನಿಟ್ಟುನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪುನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲಭಾನುವ 3 ನಾಸಿಕ ಲಲಾಟಚೆಲುವ ಪುಬ್ಬು ಕಸ್ತೂರಿಯ ತಿಲಕ ಒಪ್ಪುವ ಮುಖದಿ 4 ಕೋಟಿ ಹೊನ್ನು ಬಾಳುವ ಕಿರೀಟವಿಟ್ಟು ಕಡೆಗಣ್ಣನೋಟದಿಂದ ತರುಣೇರ ಪೋಟಿ ಮಾಡುತಚಾಟು ಮಾತುಗಳಾಡುತ ಪೊಟ್ಟನಂತೆ ತಿರುಗಿದರೆನೀಟಲ್ಲವೋ ನಿನಗದು ಪಾಟಲಾಧರನೆ ಕೇಳು 5 ಬಿಂಕದಿಂದ ಎರಡು ಕರದಿ ಶಂಖ ಚಕ್ರವ ಪಿಡಿದುಅಂಕಿತ ವೇಣುನೂದುತ ಶಂಕೆ ಇಲ್ಲದೆ ಮಂಕು ಮಾಡುತ ಬಾಲೇರ ಪಂಕಜಾಕ್ಷ ಸುಳಿದರೆÉಮಂಕುಗಾರನೆಂದು ನಿನ್ನ ಅಂಕಿತ ಮಾಡುವರಲ್ಲೋ 6 ಮಂಗಳಮೂರುತಿ ಮುಂಚೆ ಶೃಂಗಾರಗಳನೆ ಮಾಡಿಪೊಂಗೊಳಲನೂದುತ ಶ್ರೀರಂಗ ಸುಳಿದರೆಹೆಂಗಳ ರಂಭೇರೊಂದಾಗಿ ಕಂಗಳಿಡಲು ಉನ್ನಂತರಂಗವಿಠಲಗಲದಿರೋ ಹಿಂಗದೆ ನರಸಿಂಗನೇ 7
--------------
ಶ್ರೀಪಾದರಾಜರು
ಮೈಹೋಳು ನೀ ಬಂದು ಮೈಯ ಮರಿಯ ಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ಧ್ರುವ ಮಾಯಾ ಮೋಹದೊಳು ಸಿಲ್ಕಿ ದೇಹ್ಯ ಭ್ರಮೆಯಗೊಂಡು ಕಾಯ ಸೌಖ್ಯಕೆ ಬಾಯಿದೆರಿಯಬ್ಯಾಡವೋ 1 ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಪರಿಯಲಿನ್ನು ಕಣ್ಣು ಗೆಟ್ಟು ಕರುಡನಂತೆ ದಣಿಯಬ್ಯಾಡವೋ 2 ನಾನು ನೀನು ಎಂಬ ಭಾವ ಮಹಿಪತಿಗಳೆದು ಭಾನುಕೋಟಿತೇಜನಂಘ್ರಿ ಬೆರೆದು ಮನಕೂಡವೂ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಾಮನಾಮ ಸ್ಮರಣೆಯ ಮಾಡದೆ ನೀ ಪಾಮರನಾಗದಿರೊ ಮನುಜ ಪಾಮರನಾಗದಿರೊ ಪ ತಾಮಸಗುಣಬಿಟ್ಟು ಪ್ರೇಮದಿಂದಲಿ ನಮ್ಮ ಸ್ವಾಮಿಯ ನೆರೆ ನಂಬಿರೋ ಅ.ಪ ದೇಹವನಿತ್ಯವೋ ಮೋಹಪಡಬ್ಯಾಡವೋ ಲೇಶ ಸುಖ ಕಾಣೆನು 1 ಹಗರಣವಹ ವ್ಯಕ್ತಿಗಳನು ನಂಬುತಾ ನಗೆಗೀಡಾಗದಿರೊ 2 ಹೊರಗೊಳಗಿದ್ದು ನಮ್ಮ ಗುರುರಾಮವಿಠ್ಠಲ ಕರತಳವಾಗುವುದು3
--------------
ಗುರುರಾಮವಿಠಲ
ಸಾರವೆಂದು ನಂಬಬ್ಯಾಡವೋ ಸಂಸಾರ ಸಾರವೆಂದು ನಂಬಬ್ಯಾಡವೋ ಪ ಸಾರವೆಂದು ನಂಬದೇ ಸಂಸಾರ ಸುಖವೆಲ್ಲ ಅ ಕಂಸಾರಿ ಚರಣ ಸಾರಿರೋ ಅ.ಪ ಇಂದ್ರಜಾಲ ದೊಡ್ಡವಣ ಗಂಧರ್ವ ಪುರದ ಮಾಟಾ ಸಾಂದ್ರಜಲ ಪೂರಾ ಛಂದವಿದು ನೋಡಿರ್ಯೋ ಕನಸಿನಲಿ ಕೆಂಯ್ಯಾ ಬೆಳೆಯ ಘನವಕಂಡು ನೆಚ್ಚಿ ತನ್ನ ಮನಿಯೊಳಿಹ ಧಾನ್ಯವೆಲ್ಲಾ ಜಿನುಗು ಮಾಡಿದಂದದಿ 1 ತನುವುತನ್ನನಳಿದರೆ ತನು ಸಂಬಂಧಿಗಳಾರು ಕ್ಷಣಿಕವಾದಾ ಸತಿಸುತ ಧನದ್ರವ್ಯ ಕಾಣಿರ್ಯೋ ಮರ್ಕಟವು ಕೀಲುದೆಗೆದು ಪುಕ್ಕಟೆವೆಸಿಕ್ಕಿದಂತೆ ಅಕ್ಕರದ ಸುಖವೆಲ್ಲಾ ದುಃಖ ರೂಪ ಕಾಣಿರ್ಯೋ 2 ಕುತ್ತಿನ ಮಡಹು ತಾಪತ್ರಯ ತಾರುಮನೆ ಮೃತ್ಯುಬಾಯ ತುತ್ತುರೋಗ ಹುತ್ತವಿದು ಕಾಣಿರ್ಯೋ ಮರಹು ನೀಗಿ ಹರಿಯಭಕ್ತಿ ಬೆರೆದು ನಿತ್ಯರಾಗಿರೆಂದು ಗುರು ಮಹಿಪತಿ ಭೋದಗರೆದ ವಾಕ್ಯನೋಡಿರ್ಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ಮರಿಸು ಸ್ಮರಿಸು ಮನವೇ ಗುರುರಾಯರ ಪ ಸ್ಮರಿಸು ಸ್ಮರಿಸು ಬಿಡದೆ ಸ್ಮರಿಸು ನೀ ಗುರು ಸತ್ಯ ಜ್ಞಾನತೀರ್ಥರ ಪದವ ಸಾರುವೆ ಬೇಡಿದ್ದು ಕೊಡುವೆನೆಂಬುವರನು ಅ.ಪ ಸಂಶಯ ಪಡಬ್ಯಾಡವೋ ಇದಕೆ ನಾ ನಿ ಸ್ಸಂಶಯದಿಂದ ಪೇಳುವೆ ಸಂಶಯಾತಕೆ ಋಷಿ ವಂಶೀಕ ರಾವಣನ ಧ್ವಂಸ ಮಾಡಿದ ರಾಮನ ಸಂಸೇವಿಪರÀ ನೀ 1 ಶಾಪಾನುಗ್ರಹ ಶಕ್ತರೂ ಇವರು ಕಾಮಕ್ರೋಧವ ಬಿಟ್ಟವರೂ ತಾಪತ್ರಯಗಳಳಿದು ಪಾಪಗಳೋಡಿಸಿ ಕಾಪಾಡುವೆನೆಂದು ಜಗದಿ ಮೆರೆದವರ 2 ಗುರುಕರುಣಾಬಲದಿ ಶ್ರೀಹರಿನಪರೋಕ್ಷಿಗೈಸಿದ ಧೀರರ ದುರ್ವಾದಿಗಳ ಮುರಿದು ಗುರು ಮಧ್ವರಾಯರ ಪರಮ ಪ್ರೀತಿಯ ಪಡೆದ ನರಹರಿ ಪ್ರಿಯರ 3
--------------
ಪ್ರದ್ಯುಮ್ನತೀರ್ಥರು