ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕದವ ತೆಗೆಯಲ್ಹ್ಯಾಂಗ ಮಧ್ಯರಾತ್ರಿಯಲಿ ಚದುರ ನಿನ್ನ ಗುರ್ತು ಪೇಳು ಮೊದಲಿನಲಿ ಪ ನೀರ ಪೊಕ್ಕು ವೇದವನ್ನು ತಂದಿಹೇನೇ ಭಾರವನ್ನು ಬೆನ್ನಿನಲ್ಲಿ ಪೊತ್ತಿಹೇನೇ ಕೋರೆಯ ಮ್ಯಾಲಿಳೆಯನ್ನಿಟ್ಟಿಹೇನೇ ಕೋರೆದಾಡಿಯಿಂದ ದನುಜನಳ್ದಿಹೇನೇ 1 ದಾನಬೇಡಿ ಬಲಿಯನ್ನೊತ್ತಿಹೇನೇ ಮಾನ್ಯವೆಂದು ತಾಯಶಿರ ಛೇದಿಸಿಹೇನೇ ದಾನವನ ಪತ್ತುತಲೆಯರದಿಹೇನೇ ದಾನಮಾಡಿ ದೇಹವನ್ನು ಮೆರದಿಹೇನೇ 2 ಬತ್ತಲ್ಯಾಗೆ ಬೌದ್ಧನೆನಿಸುವೇನೇ ಕುದುರೆಯಾಗಿ ಧಕ ಧಕ ಕುಣಿಸುವೇನೇ ಅಧüರಪಾನವನ್ನು ನಾ ಬಯಸಿಹೇನೇ ಚದುರ ನರಸಿಂಹವಿಠಲನೆನಿಸುವೇನೇ 3
--------------
ನರಸಿಂಹವಿಠಲರು
ಕರುಣವ ಬೀರು ಚೆನ್ನ ಕಾಯಬೇಕೋ ಎನ್ನಮರೆತಿರೆ ಕಾವರ ಕಾಣೆಪ. ಸೊಪನ ಜಾಗರದಲ್ಲಿ ನಿನ್ನ ಧ್ಯಾನವೆ ಬಂದುತೃಪ್ತನಾಗಿ ನಾನು ಜೀವಿಸುವೆಕಪಟದ ನುಡಿಯಲ್ಲ ನೀನೆ ಬಲ್ಲೆವಿಪತ್ತುಗಳನೆ ಬಿಡಿಸಯ್ಯ 1 ಕಡಲಮಗಳ ಗಂಡ ಕಾಮಧೇನು ನೀ ಕಂಡ್ಯಾಬಡವ ನಿನ್ನಡಿಗೆ ಪೊಡಮಡುವೆಒಡಲ ಬಳಿಯ ನೆಳಲಂತೆ ಬಿಡದೆ ನಿನ್ನದೃಢವಾಗಿ ನಾನು ಕೂಡುವೆನು 2 ತಂಡ ತಂಡದ ವ್ಯಾಧಿಯ ಉಂಡು ಉಂಡು ಬಳಲಿದೆಕಂಡ ಕಂಡವರ ಬೇಡಿ ನೊಂದೆಹಿಂಡುಹಿಂಡುಗಟ್ಟಿ ಬಂದ ಚಂಡ ದಂಡಧರನವರುತುಂಡು ತುಂಡು ಮಾಡಿ ಕಾಡುವರು 3 ಘೋರತರ ವ್ಯಾಧಿಗಳ ತೋರಿ ತೋರಿ ನರಕದಿಮುರಹರನುಣಿಸದೆ ಬಿಡನುಮೀರಿ ಮೀರಿ ಬಹ ಮೃತ್ಯು ಆರನಂಜಿಸುವುದುಭಾರಿ ಭಾರಿ ಗಳಿಸಿದ ಪಾಪ 4 ಹರಿ ನಿನ್ನ ಚರಣದ ಸ್ಮರಣೆ ಒಂದಿರೆ ಸಾಕುಮರಣಗಿರಣಕಂಜೆನಯ್ಯಶರಣಜನರು ನಿನ್ನ ಪ್ರಾಣಕ್ಕೆ ಸರಿಯೆಂಬೆಸಿರಿರಮಣನೆ ಸಲಹೆನ್ನ 5 ಶರಧಿಯೊಳಾಡುವ ಮಂದರಧರ ವರಾಹನೆಹಿರಣ್ಯಾಕ್ಷವೈರಿ ವಾಮನನೆಪರಶುರಾಮನೆ ರಘುರಾಮ ಕೃಷ್ಣ ಬೌದ್ಧನೆಧುರದಿ ಕಲ್ಕಿಯಾಗಿ ಮೆರೆದೆ 6 ಕರಕರ ಮತತತ್ವವ ಒರದೊರೆದು ಪೇಳುವೆಥÀರಥರದ ಹಿರಿಯರನೆಲ್ಲಮಿರಿ ಮಿರಿ ಮಿಂಚುತಿಹ ಮುರಹರನ ಭಜಿಸದೆಹರಿಹರಿಯೆಂದು ಪೇಳೆನೊಮ್ಮೆ 7 ಮನೆಮನೆವಾರ್ತೆಗೆ ಧನಂಗಳ ಗಳಿಸಿದೆಚಿನಿಚಿನಿಯಂಬರಕೆ ಮರುಳಾಹೆಮನೆಮನೆ ಮಹಿಮೆಯ ಕಾಣೆ ಕಾಣೆ ಕೆರೆಗಳನೆನೆನೆನೆದಾಡುತ್ತ ನಾ ಭಜಿಸಿ 8 ತನು ಜೀರ್ಣವಾಯಿತು ಕರಣ ಎನ್ನಿಚ್ಛೆಯೊಳಿಲ್ಲಮನವೆನ್ನ ಮಾತು ಕೇಳದಯ್ಯಇನಿತು ಸಂಕಟದವ ಇನ್ನು ನಾನೆಂತರ್ಚಿಪೆವನಜನಾಭನೆ ಹಯವದನ9
--------------
ವಾದಿರಾಜ
ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ಪ. ನೀರೊಳು ಯಳವ ಮೋರೆಯ ನೆಳಲ ನೋಡುವಿ ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ದನಿಯನು ನಳಿನಮುಖಿಯರಿಗೆ ನಾಚಿಸುವದಿದೊಳಿತೆಯೇಳು ಹವಣಗಾರನೆ 1 ಆರುಬಲ್ಲರು ನಿನ್ನ ಶ್ರೀ ಲಕ್ಷ್ಮಿಯ ಮನಸಿಗೆ ತೋರದಿಹ ಪರಬ್ರಹ್ಮ ಉಳಿದವರು ಬಲ್ಲರೆ ನೀರಜಾಸನ ಬೊಮ್ಮಾ ಇದು ನಿಮ್ಮ ವರ್ತಿ ಭಾರ ಬೆನ್ನಲಿ 2 ಭೂರಿ ಮಾರ ಜನಕನೆ ಮೆರಿವೆ ಕೋಮಲಾಂಗನೆ 3 ಸಕಲ ಮಾಯವಿದೇನೊ ತ್ರಿವಿಕ್ರಮನ ಪಾಲಿಸಿ ಸಕಲನುಳಿಹಿದೆ ನೀನು ಭಕುತಿಯಿಂದಲಿ ಸ್ತುತಿಪರಿಗೆ ಸುರಧೇನು ಸುಮನಸರ ಭಾನೂ ಅಖಿಳವೇದೋದ್ಧಾರ ಗಿರಿಧರ 4 ನಿಖಿಳ ಭೂಮಿಯ ತಂದ ನರಹರಿ ಯುಕುತಿಯಲಿ ಆಳಿದೆ ಭಕ್ತವೃಂದಕೆ ಸುಖವ ತೋರುವ ವೇಣು ಗೋಪಾಲನೆ ರುಕುಮನನುಜೆಯ ರಮಣ ಬೌದ್ಧನೆ ಲಕ್ಷುಮಿಯರಸನೆ ಕಲ್ಕಿ ರೂಪನೆ 5 ನಿನ್ನ ರೂಪವಿದೆಲ್ಲಾ ನೋಡುವರಿಗೆ ಕಣ್ಣು ಸಾಸಿರವಿಲ್ಲಾ ಪಾಡಿ ಪೊಗಳಲು ರಂನ್ನಘಾತಿದೆನಲ್ಲಾ ಕಂಣಮುಚ್ಚದೆ ಬೆಂನ್ನ ತೋರುವೆ ಮಂಣ ಕೆÉದಿರದಿ 6 ಚಿಂಣಗೊಲಿದನೆ ಸಂಣವಾಮನ ಪುಣ್ಯಪುತ್ರನೆ ಹಂಣುಸವಿದನೆ ಬೆಂಣೆಗಳ್ಳನೆ ಹೆಂಣುಗಳ ವ್ರತಗಳೆವ ಹೆಳವನಂದು ಗೆಲಿಸಿದ ರಂಗ ದೇವೋತ್ತುಂಗನೆ 7
--------------
ಹೆಳವನಕಟ್ಟೆ ಗಿರಿಯಮ್ಮ
ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ ಪ ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿ |ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ಧ್ವನಿಗೆ ||ನಳಿನಮುಖಿಯರ ನಾಚಿಸುವ ಬಲು ಹಯದಳದ ಬಹು ಹವಣಿಗಾರನೆ ಅ .ಪ. ಬೊಮ್ಮ ಭಾರ ಬೆನ್ನಿಲಿಕೋರೆ ದಾಡೆಯ ನಾರಸಿಂಹನೆ |ಧರೆಯ ಬೇಡಿದ ಧೀರ ಪುರುಷನೆವಾರಿ ಬಂಧನ ಮಾರಜನಕನೆ ||ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ 1 ಅಖಿಳ ಭೂಮಿಯ ತಂದ ನರಹರಿ |ಯುಕುತಿಯಲಿ ನೆಲನಳೆದ ಭಾರ್ಗವಮುಕುತಿಗೋಸುಗ ಫಲವ ಸವಿದನೆ ||ರುಕುಮನನುಜೆಯ ರಮಣ ಬೌದ್ಧನೆಲಕುಮಿ ರಮಣನೆ ಕಲ್ಕಿರೂಪಿಯೆ 2 ಬನ್ನ ಬಡುಕನೆ ||ಹೆಣ್ಣುಗಳ ವ್ರತ ಕೆಡಿಸಿ ತೇಜಿಯಬೆನ್ನನೇರಿದ ವ್ಯಾಸ ವಿಠ್ಠಲ* 3
--------------
ವ್ಯಾಸವಿಠ್ಠಲರು
ಲಕ್ಷುಮೀನಾರಾಯಣ ಜಯಲಕ್ಷುಮೀ ನಾರಾಯಣ ಲಕ್ಷುಮೀನಾರಾಯಣ ಜಯ ಲಕ್ಷುಮೀ ನಾರಾಯಣ ಪ. ಪಾದ ದಾನವ ಗರ್ವಹರಣ ಗದಾದಿ ಧಾರಣ ಪರ್ವತಾರಿ ವರ ಪ್ರದ 1 ನಂಬಿಕೊಂಡಿಹೆ ನಿನ್ನ ದಿವ್ಯ ಪದಾಂಬುಜಗಳನು ಸರ್ವಕಾಲದಿ ಮನದೊಳಗಿಂಬುಗೊಳು ಕಮಲಾಂಬಕ 2 ಆರು ಸಂಖ್ಯೆಯ ಕಳ್ಳರೆನ್ನನು ಗಾರುಮಾಡುವರಾದರಿಂದತಿ ಧೀರ ನಿನ್ನ ಪದಾರವಿಂದಕೆ ದೂರುವೆನು ರಘುವೀರನೆ 3 ದುರ್ಮತಿಗಳಾದಸುರಹರಣಕೆ ಭರ್ಮಗರ್ಭನು ಬಂದು ಸ್ತುತಿಸಲು ಧರ್ಮಸಂಸ್ಥಾಪಿಸುತ ಬಹು ಶುಭಕರ್ಮ ತೋರುವ ಕರುಣಿಯೆ 4 ಸಪ್ತ ಋಷಿಗಳ ಕೂಡಿಕೊಂಡತಿ ಭಕ್ತಿಯಿಂದಲಿ ನಿನ್ನ ಭಜಿಸಿದ ಸತ್ಯವ್ರತನಿಗೆ ಸಕಲ ಶ್ರುತಿಗಳ ತತ್ವ ತಿಳಿಸಿದ ಮತ್ಸ್ಯನೆ 5 ಮುಳುಗಿಕೊಂಡಿಹ ಅಮಿತಗುರು ಮಂದರವ ಧರಿಸುತ ಅಮೃತರಸ ತೆಗೆದಿತ್ತನೆ 6 ದೈತ್ಯನ ತರಿದು ಬಿಸುಟು ವಿ- ಜನಿತ ಪವಿತ್ರ ಯಜ್ಞ ವರಾಹನೆ 7 ಘಡುಘಡಿಸಿ ಕಂಬದೊಳು ಬಂದ ಸಿಡಿಲಿನಂತಿಹ ನಖದಿ ದೈತ್ಯನ ಒಡಲ ಬಗೆದನು ಕೋಪದಿಂದ 8 ದಾನಕೊಂಡನಾನೆವನದಿ ದಾನವಾಹೃತ ಧರೆಯ ಕಸ್ಯಪಸೂನುಗಳಿಗೊಲಿದಿತ್ತನೆ 9 ದುಷ್ಟಭೂಭುಜಭಾರದಿಂದತಿ ಕಷ್ಟಪಡುತಿಹ ಧರೆಯ ಕರುಣಾ ನೃಪರ ಕಡಿದ 10 ನೀರಜಾವದನಾರವಿಂದ ಮಹಾ ರಸಾಸ್ವಾದನ ಪದ ಕಪಿವೀರನಿಗೆ ಸ್ವಾರಾಜ್ಯ ನೀಡಿದ ಮಾರುತಿಗೆ ದಯ ಮಾಡಿದ 11 ಬಾಲ ಲೀಲೆಯ ತೋರಿ ಗೋಪಕ ಬಾಲೆಯರ ಕೂಡಾಡಿದೆ ಖೂಳಕಂಸನ ಕೆಡಹಿ ದಾನವಮೂಲ ಕಿತ್ತು ಬಿಸಾಡಿದೆ 12 ಜೈನರನು ಮೋಹಿಸುವೆನೆಂದನುಮಾನವಿಲ್ಲದೆ ನಗ್ನನಾಗಿ ಹೀನ ಬುದ್ಧಿಯ ತಿಳಿಸಿ ತ್ರಿಪುರವ ಹಾನಿಗೈಸಿದ ಬೌದ್ಧನೆ 13 ಸುಧೆಯನು ಕರೆದು ಶಿರದಲಿ ತುಂಗ ವಿಷಯ ತರಂಗ ತಪ್ಪಿಸು ಅಂಗಭಂಗವ ಶಿಂಗನೆ 14 ಮಿಂಚಿನೊಡ್ಡಿದ ಮೇಷನಂದದಿ ಪಂಚವರ್ಣದ ತುರಗವೇರಿ ಸಂಚರಿಸಿ ಮ್ಲೇಂಛರನು ಕೊಲ್ಲಿಸಿ ಲಾಂಛಜೀವನ ವರದನೆ 15 ಮಂದಿರದಿ ನೀ ಬಂದು ರಕ್ಷಿಪೆ ಎಂದು ಸಕಲಾನಂದಗೊಂಡಿಹೆ ಇಂದಿರೇಶನೆ ಎಂದಿಗೂ ಈ ಅಂದದಿಂದಲಿನಿಂದ ಸಲಹು 16 ಕೇಶವಾದಿ ದ್ವಿದಶರೂಪವು ಮಾಸಗಳಿಧಿಷ್ಠಾನನಿಗೆ ಪ- ರೇಶ ಕಡೆಯಲಿರುವ ಕಾರ್ತಿಕವಾಸ ದಾಮೋದರ ಹರನೆ 17 ಬಳಲಿ ಕರ್ಮವ ಮಾಡಲಾರೆ ನಳಿನಜಾರ್ಜಿತ ನಿನ್ನ ಪಾದದ ನೆಳಲನಂಬಿ ಸುಮ್ಮನಿರುವೆ 18 ಅಖಿಳದೋಷ ನಿವಾರಣಾದ್ಭುತ ಸಕಲಸದ್ಗುಣಧಾರಣಾ ಕುಂಡಲ ಧಾರಿ ವೆಂಕಟಶಿಖರ ವರ ಸುಖಕಾರಣಾ 19
--------------
ತುಪಾಕಿ ವೆಂಕಟರಮಣಾಚಾರ್ಯ