ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೋ ಎನ್ನ ನೀ ಘನಕರುಣದಲಿ ಗೋ| ಜಾತಕ ಮುದಿರಾ ಪ ಅಚ್ಯುತಾನಂತ ಮಹಿಮ ಸರ್ವಾಧಾರಾ| ಇಚ್ಚಾಪೂರಿತ ಮಾಡುವೆ ಸುರಜನರಾ| ನಿಚ್ಚಟ ಹೃತಯರಿಗೊಲಿವೆ ಸತ್ಪರಾ| ಸಚ್ಚಿದಾನಂದನೆ ಮಾ ಮನೋಹರಾ 1 ಸುರನದಿ ಪಿತ ವಸುದೇವ ಕುಮಾರಾ| ಸರಸಿಜ ಪಾಣಿ ಗೋವರ್ಧನೋದ್ದಾರಾ| ದುರಿತ ನಿವಾರಾ| ವರ ಚತುರ್ಭುಜ ನರಕಾಸುರ ಹರಾ 2 ವಿಷ್ಣು ನಾರಾಯಣಾಂಬುಜ ನಯನಾ| ವಾಷ್ರ್ಣೇಯಾ ಪರಮಪಾವನ ಮೂರ್ತಿದೇವಾ| ಜಿಷ್ಣುನಾತನು ಸಂಭವನ ರಥಬೋವಾ| ಕೃಷ್ಣ ಗುರು ಮಹಿಪತಿ ನಂದನ ಜೀವನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ರಂಗಾ ಬಾರೋ ಬಾರೋ ಪ ಮಾವನ ಮರ್ದನ ಬಾರೋ ಮಾವನ ಮಾವನೆ ಬಾರೋ | ಮಾವನೋಳು ಕಾದಿ ಮಾವನಿತ್ತ ಮಣಿಯ ನೀನು 1 ಮಗನ ಅತ್ಮನಲಿ ಬಂದ ಮಗನ ಮಾವನ ತರಿದೆ 2 ಮೈದುನನಾ ಧರಿಸಿದನಾ ಮೈದುನಾರಿಯಣ್ಣ ಬಾರೋ | ಮೈದುನ ಬೋವಾ ಮಹಿಪತಿ ಪದ ಭಜಿಪರೊಡಿಯಾ ಕೃಷ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭವ ಭಾವಿಸುವೊದು ಸೂಚನಾ | ಪಾವನರಂಗಾ | ಜೀವಾಂತರಂಗ | ಜೀವ ತುರಂಗಾ | ಹೃದ್ದಾವರೆಯಲಿ ನಿಲ್ಲು | ಆವಾವ ಬಗೆ ಸು | ರೂಹ | ಆವಾಗ ತೋರುತ ಪ ನಂದನಂದನಾ ಆನಂದಾ | ನಾಗನಾ | ಬಂಧಾ | ಬೀಡಾದೆಕ್ಕೆಂದಾ | ದಾ ಖಳನ ಕೊಂದೆ | ನಂದವ್ರಜದ ಗೋವಿಂದಾ | ಯಶೋದೆ ಕಂದಾ | ಮಂದನು ನಾನು | ಇಂದೀಗ ನೀನು | ಬಂದು ಸುರಧೇನು | ಪೊಂದು | ಇನ್ನೇನು | ಮುಂದಣ ಇಹಸುಖ | ಒಂದು ವಲ್ಲೆನು ಸಖ | ಕಂದ ನಂದದಿ ನೋಡು | ಕುಂದದ ವರವ ಕೊಡು | ಎಂದೆಂದಿಗೆ ಪದದ್ವಂದಾರವಿಂದಕೆ | ವಂದಿಸುವೆನು ಬಾ | ಲೇಂದು ವದನ ಪೊರಿಯೋದೆ ಲೋಕದ ತಂದೆ 1 ಮಂದರಧರ ಮಾಧವಾ | ಮಹದಾದಿ ದೇವಾ | ಬೋವಾ | ಇಚ್ಛೈಸಿದರೆ ಕಾವಾ | ವಾಸುದೇವ | ನಿಂದು ಕರೆವೆನು ಒಂದೆ ಮನಸನು | ತಂದು ವೇಗಾನು | ಸಂಧಿಸೆಂಬೆನು | ಚಂದ ಚಂದದಿ ನಿನ್ನನಂದಕೆ ಹಿಗ್ಗುವೆ | ಪತಿ | ಬಂಧು | ಅತಿ ದಯಾಸಿಂಧು || 2 ಶ್ರೀಲತಾಂಗೀಯ ರಮಣಾ ಶೃಂಗಾರ ಚರಣಾ | ಮಾಲಾ ಕೌಸ್ತುಭಾ ಭರಣಾ | ಶೀಲಾ ಸದ್ಗುಣಗಣ ಸಿದ್ಧಸವ್ಯಾಕಾರಣ | ನೀಲಲೋಹಿತ ಪಾಲಿಪನೆ ಪ್ರೀತ | ಮೂಲೋಕದ ದಾತಾ | ಲಾಲೀಸಿ ಮಾತಾ | ಪಾಲ ಸಾಗರಶಾಯಿ ಪತಿತ ನರನ ಕಾಯಿ | ಮೇಲುಗಿರಿಯಲಿಪ್ಪಾ | ಮೇಲಾದ ತಿಮ್ಮಪ್ಪಾ ವಾಲಗ ವೆಂಕಟ | ಶೈಲಾ ವಿಜಯವಿಠ್ಠಲಾ | ನೀಯೋ ಗೋಪಾಲಾ 3
--------------
ವಿಜಯದಾಸ
ಯಾದವಾ ಮಾಧವಾ ಕರುಣಿಸು ಪ ಮೋದವನೀವ ದೇವ ಅ.ಪ . ತುಂಬಿದ ಸಭೆಯೊಳಾ ತರುಣಿಯಾ ಪೊರೆದೆಯಾ ನಂಬಿದ ಶರಣರ ಕಾವಾ 1 ಕರೆಯದೆ ವಿದುರನಾ ಮನೆಗೆ ನೀ ಬಂದೆಯಾನಿರುತದಿ ಭಕುತರ ಜೀವಾ 2 ಪ್ರಾರ್ಥಿಸೆ ಗದುಗಿನ ವೀರನಾರಾಯಣಾಪಾರ್ಥನ ಬಂಡಿಯ ಬೋವಾ 3
--------------
ವೀರನಾರಾಯಣ