ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ವರದಿ ಭಜಿಪೆ ನಮ್ಮ ಗುರುಪಾದಾಂಬುಜ ಕೆರಗುತಲನುದಿನ ಭಕುತಿಯಲಿ ಪ ನೆರೆನಂಬಿದವರ ಬಿಡದೆ ಪೊರೆವರೆಂಬ ಉರುತರ ಕೀರ್ತಿಯ ಸ್ಮರಿಸುತಲಿ ಅ.ಪ ಭವ ಬಂಧನದಿ ಬಳಲುವ ಮಂದಿಗಳನು ಉದ್ಧರಿಸುವರ ಮಂದಮತಿಗಳಾದರು ನಿಂದಿಸದಲೆ ಮುಂದಕೆ ಕರೆದಾದರಿಸುವರ ಬಂಧು ಬಳಗ ಸರ್ವಬಾಂಧವರಿವರೆಂದು ಒಂದೆ ಮನದಿ ಸ್ಮರಿಸುವ ಜನರ ಕುಂದುಗಳೆಣಿಸದೆ ಕಂದನ ತೆರದೊಳು ಮುಂದಕೆ ಕರೆದಾದರಿಸುವರ 1 ಗುಪ್ತದಿಂದ ಶ್ರೀಹರಿನಾಮಾಮೃತ ತೃಪ್ತಿಲಿ ಪಾನವ ಮಾಡಿಹರ ನೃತ್ಯಗಾಯನ ಕಲಾನರ್ತನದಿಂ ಪುರು- ಷೋತ್ತಮನನು ಮೆಚ್ಚಿಸುತಿಹರ ಸರ್ಪಶಯನ ಸರ್ವೋತ್ತಮನನು ಸರ್ವತ್ರದಲಿ ಧ್ಯಾನಿಸುತಿಹರ ಮತ್ತರಾದ ಮನುಜರ ಮನವರಿತು ಉ- ನ್ಮತ್ತತೆಯನು ಪರಿಹರಿಸುವರ2 ಕಮಲನಾಭ ವಿಠ್ಠಲನು ಪೂಜಿಸಿ ವಿಮಲಸುಕೀರ್ತಿಯ ಪಡೆದವರ ಶ್ರಮಜೀವಿಗಳಿಗೆ ದಣಿಸದೆ ಮುಂ- ದಣಘನ ಸನ್ಮಾರ್ಗವ ಬೋಧಿಪರ ನವನವ ಲೀಲೆಗಳಿಂದೊಪ್ಪುವ ಹರಿ ಗುಣಗಳನ್ನು ಕೊಂಡಾಡುವರ ನಮಿಸಿಬೇಡುವೆ ಉರುಗಾದ್ರಿವಾಸ ವಿ-ಠ್ಠಲದಾಸರು ಎಂದೆನಿಸುವರ 3
--------------
ನಿಡಗುರುಕಿ ಜೀವೂಬಾಯಿ
ಲೇಸಾಗಿ ಭಜಿಸುವೆ ಗೋಪಾಲದಾಸರ ರಾಶಿ ದುರಿತಂಗಳಾ ಪ ವಾಸವಾ ಪಿಡಿದ ವಜ್ರವೀಗಿರಿಯಂತೆ ನಿಶ್ಶೇಷದಿ ಭೇದಿಪರೊಇವರು ಅ.ಪ. ಸತಿ ಗಿರಿವಾಸ ನಾಮಕಳಾ ಸುರುಚಿರೋದರವೆಂಬೊ ಶರನಿಧಿಯಲ್ಲಿ ಚಂದಿರನಂತೆ ಉದಿಸಿಹರೋ ಇವರು 1 ಸದಮಲಮನದಲ್ಲಿ ಪದುಮನಾಭನ ನಾಮ ಪದೋಪದಿಯಲ್ಲಿ ಬಿಡದೇ ಪದರೂಪದಲ್ಲಿ ಪೊಗಳುವೊ ಸುಜನರಿಗೆ ಮೋಹವನುಣಿಸುತಿಹರೊ ಇವರು 2 ವಿಜಯದಾಸರೇ ತಮ್ಮ ನಿಜಗುರುಗಳೂ ಎಂದು ಭಜಿಪರೋ ಭಕುತಿಯಲ್ಲಿ ದ್ವಿಜವರ್ಯ ಜನಕಿಷ್ಟ ಸೃಜಿಸೋರು ಕಲ್ಪ ಭುಜದಂತೆ ನಿರುತದಲ್ಲಿ ಇಲ್ಲಿ 3 ತೊಂಡ ಪ್ರಹ್ಲಾದ ಪ್ರಿಯನ ಮಂಡಲ ಯತಿಗಳ ಬೆಳೆಪ ಯಾತ್ರೆಗಳ ಕೈಕೊಂಡು ಸೇವಿಸುತಿಹರೊ ಇವರು 4 ಭಕುತಿ ಪ್ರಾಚುರವಾಗೆ... ಹರಿನಾಮಪ್ರಕಟಿಸಿ ಕವನದಿಂದಾ ನಿಖಿಳಾಭೀಷ್ಟವನೀವ ಲಕುಮೀಪತಿಯೇ ಎಂದು ಭಕುತಗೆ ಬೋಧಿಪರೊ ಇವರು 5 ಆವಾವ ಕ್ರಿಯೆಗಳಲ್ಲಾವಾವ ಕಾಲದಿ ತಾವದಗಿನ್ನು ಹರಿಕಾವ ಸುಜೀವರ ಈ ವಿಧವೆಂದು ತನ್ನವರಿಗುಪದೇಶಿಪಾ6 ಭವ ತೋಯದಿ ಕಡೆಗೆತ್ತುವಾ . 7 ಸುಜನ ಜನರ ಕಾಯಕ್ಲೇಶವ ಕಳೆದು ಮಾಯಾರಮಣನ ವಲಿಸುವಂಥ ದಿವ್ಯ ಉಪಾಯವ ತೋರಿಪರೊ ಇವರು 8 ಮಂದ ಮನುಜ ನಾನು ಒಂದೊಂದಿವರ ಗುಣವೃಂದ ಪೊಗಳಲೊಶವೇ ತಂದೆ-ವರದಗೋಪಾಲವಿಠ್ಠಲನ ಹೊಂದಿ ಸೇವಿಪ ಗುರುವೇ 9
--------------
ತಂದೆವರದಗೋಪಾಲವಿಠಲರು
ಹೊಡೀ ನಗಾರಿ ಮೇಲೆ ಕೈಯಾ ಕಡ ಕಡ ಪ ದೃಢಮತಿಯಲಿ ಕಡು ವಾದಿರಾಜರು ರುಜುಗುಣಪರೆಂದ್ಹೊಡೇ ಅ.ಪ. ಕಾಮನಯ್ಯನ ನೇಮದಿ ಸ್ಮರಿಸುವ ಕಾಮರಹಿತ ನಿಷ್ಕಾಮ ಕರೆವರೆಂದ್ಹೊಡೀ 1 ಅವನಿಯೊಳಗೆ ತಾ ಬಂಧುರ ಕುಲೇಂದ್ರಿನಿ ಗೊಲಿದವ ನಿಂದ್ಯಂದ್ಯರೆಂದೊಡಿ2 ಮೋದ ಮುನಿಯ ಮತ ಮೋದದಿ ಸಾಧಿಪ ಸದ್ವಾದಿರಾಜ ಗುರು ಮೋದತೀರ್ಥರು ಸಮರೆಂದ್ಹೊಡಿ 3 ಶೋಣಿತ ಶೂನ್ಯರಿವತೆಂದ್ಹೊಡಿ4 ಕಾಮಿನಿಗೋಸುಗ ಪ್ರೇಮದಿ ಕುಸುಮವ ತಂದಿಟ್ಟತುಳ ಭೀಮನ ಸರಿಸಮರಿವತೆಂದ್ಹೊಡಿ 5 ಸೀತೆಯಗೋಸುಗ ಸೇತುವೆಗಟ್ಟಿದ ರಘುನಾಥನ ಪ್ರೀತಿಯ ಘನವಾತನಪದ ಪೊಂದುವರೆಂದ್ಹೊಡಿ 6 ಇಂದಿರೇಶನ ಪದಮಂದಿರದಲಿ ಭಜಿಸುವ ನಂದಿವಾಹ ಮುಖವೃಂದ ವಂದ್ಯರೆಂದ್ಹೊಡಿ 7 ವೃಂದಾವನದೊಳು ಕೂತುಚ್ಛಂದದಿ ದ್ವಿಜರಿಗೆ ಬೋಧಿಪರಿವರೆಂದ್ಹೊಡಿ 8 ಕಂತುವಿನಲಿ ತಾನಿಂತು ಜಪಿಸುವ ತಂದೆವರದಗೋಪಾಲವಿಠಲನ ಪ್ರೀತಿಮಂತ್ರಿಯೆನಿಪವರೆಂದೊಡಿ 9
--------------
ತಂದೆವರದಗೋಪಾಲವಿಠಲರು
ಕ್ಷುಲ್ಲರಿಗೊದಗದು ಫುಲ್ಲನಾಭನ ಪದಅಲ್ಲ್ಲ್ಯವಧಾರಣ ಬುದ್ಧಿಗಳುಬಲ್ಲಿದಸುಖತೀರ್ಥರುಲ್ಲಾಸದಪಥದಲ್ಲಿಹರಿಗೆ ಪರಸಿದ್ಧಿಗಳು ಪ.ಆಡುವುದಮಿತವು ಮಾಡುವುದಹಿತೀಶಾಡುವದಾಶೆಗಳಬ್ಧಿನಾಡವಚನ ಉಪಗೂಡಿಸಿ ಠಾಳಿಪಮೂಢರ್ಗೆ ವಿಷಯದ ಲುಬ್ಧಿರೂಢಿಯೊಳಿವ ತನುಗೂಡಿದ ಬಯಕೆಯ ನೀಡಾಡಿದರೆ ಸುಖ ಲಬ್ಧಿಹಾಡಿ ಹರಿಯ ಕೊಂಡಾಡ್ಯನುದಿನಕೋಲ್ಯಾಡಲು ಒಲಿವ ದಯಾಬ್ಧಿ 1ಹೀನ ಶ್ರದ್ಧದಿಘನಸ್ನಾನ ಸುರಾರ್ಚನೆನಾನಾಡಂಬರಕುದಿಸುವ ಗಳಿಕೆಮೌನವೆ ವಧು ಹಣ ಧ್ಯಾನದಾರೋಹಣಜ್ಞಾನದೊಳಜ್ಞಾನದ ಬಳಕೆಏನೊಂದರಿಯರು ಮಾನುಭವಾರ್ಯರುಮಾನಪಮಾನ್ಗಳ ವೆಗ್ಗಳಿಕೆಶ್ರೀನಾಥಪದಕೊಪ್ಪು ಪ್ರಾಣವನೊಪ್ಪಿಪಜಾಣರ್ಗೆ ಮುಕುತಿಯ ಕಳವಳಿಕೆ 2ತರ್ಕಕೆ ನಿಶಿದಿನಕರ್ಕಶಭಾವದವರ್ಕಡು ಪಾತಕರ್ಬಾಧಕರುಮರ್ಕಟ ಮುಷ್ಟಿಯೊಳು ಮೂರ್ಖ ಪ್ರತಿಷ್ಠೆಯೊಳುನರ್ಕಪದೇ ಪದೇ ಸಾಧಕರುಆರ್ಕೂಡ ಮುಕ್ತರು ಶರ್ಕರ ಸೂಕ್ತರುಅರ್ಕಸುತೇಜ ಮುಖಾಧೀಶರುತರ್ಕೈಪರು ಸಂತರ್ಕಳಖಳಸಂಪರ್ಕಕೆ ಹೆದರುವ ಭೇದಕರು 3ಶಾಸ್ತ್ರ ವಿಚಾರಿಸಿ ಪ್ರಸ್ತಾರದೋರಿ ಸ್ಮರಾಸ್ತ್ರಕೆ ಮಗ್ಗುತ ಸೋಲುವರುಸ್ವಸ್ಥ ಮನಿಲ್ಲದೆ ದುಸ್ತರಬೋಧಸಮಸ್ತರೊಳಗೆ ಬೋಧಿಪರವರುವಿಸ್ತರ ತತ್ವ ಪ್ರಶಸ್ತ ಬೀರುತ್ತ ಪರಸ್ತ್ರೀ ಜನನಿಸಮನೆಂಬುವರುಅಸ್ತಮಯೋದಯದಿ ವ್ಯಸ್ತವಿದೂರ ಹೃದಯಸ್ಥ ಹರಿಯನೆ ಚರಿಸುವರು 4ಒಂದರಿದವರು ನೂರೊಂದನರಿತವರಾರೆಂದತಿಶಯಮದ ವಿಹ್ವಲರುಕುಂದುಕುಚೇಷ್ಟೆ ವಿನಿಂದೆಯ ಧೃಷ್ಟ ಮುನೀಂದ್ರ ದ್ರೋಹದಗುಣಸಂಕುಲರುಮಂದರಧರನವರಂದನುಭವದಿವನೊಂದನರಿಯರತಿ ನಿರ್ಮಳರುತಂದೆ ಪ್ರಸನ್ವೆಂಕಟೇಂದ್ರನಕಿಂಕರರೆಂದೆಂದಿಗಪವಾದಕೊಳಗೊಳರು 5
--------------
ಪ್ರಸನ್ನವೆಂಕಟದಾಸರು