ಒಟ್ಟು 4 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಡಮತಿಗಡ ಕಡಿದೀಡ್ಯಾಡಿ ಪಡಿರೋ ಸನ್ಮಾರ್ಗವ ಹುಡುಕ್ಯಾಡಿ ಪ ಗಡಗಡಸದೃಢದಯಿಡುತೋಡೋಡಿ ಪಡಿರೋ ಕಡು ಅನಂದ್ವೊಯ್ಕುಂಠ ನೋಡಿ ಅ.ಪ ಚಿಂತೆ ಭ್ರಾಂತಿಗಳ ದೂರಮಾಡಿ ನಿ ಶ್ಚಿಂತರಾಗಿರೋ ಮನ ಮಡಿಮಾಡಿ ಶಾಂತಿತೈಲ್ಹೊಯ್ದು ಜ್ಞಾನಜ್ಯೋತಿಕುಡಿ ಚಾಚಿ ನಿಂತು ನೋಡಿರೋ ಹರಿಪುರದಕಡೆ ಅಂತ್ಯ ಪಾರಿಲ್ಲದಾತ್ಯಂತ ಪ್ರಕಾಶದಿಂ ನಿಂತು ಬೆಳಗುತಾರೋ ಆನಂತಸೂರ್ಯರು ಕೂಡಿ 1 ಬೋಧಾದಿಮಯ ಮಹದ್ವಾರಗಳು ಮತ್ತು ವೇದ ನಿರ್ಮಯ ಪುರಬೀದಿಗಳು ಆದಿಅಂತಿಲ್ಲದಷ್ಟ ಭೋಗಗಳು ವಿ ನೋದ ಮುಕ್ತಿ ಕಾಂತೇರಾಟಗಳು ವೇದವೇದಾಂತ ಅಹ್ಲಾದದಿಂ ಪೊಗಳುವ ಸುಜನ ಮಹದಾದಿಪದವಿಗಳು2 ಸೇವಿಪ ಸುರಮುನಿಗಣಗಳು ಕೋವಿದ ನಾರದಾದಿ ಗಾನಗಳು ರಂಭೆ ನಾಯಕಿಯರ ಮಹನರ್ತನಗಳು ಸಾವಿರಮುಖಪೀಠದ್ಹೊಳೆವ ಶ್ರೀರಾಮನ ಪಾವನಪಾದಕಂಡು ಸಾವ್ಹುಟ್ಟು ಗೆಲಿರೆಲೋ 3
--------------
ರಾಮದಾಸರು
ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ರಾಮಾಯನ್ನಮ:ರಾಮ ಸದಾ ಓಂ ರಾಮಾಯನ್ನಮ:ರಾಮ ಪ ವೇದಾದಿ ರಾಮ ವೇದಾಂತರಾಮ ವೇದಾಂತ ವೇದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 1 ವೇದಮಯ ರಾಮ ವೇದ ನಿರ್ಮಯ ರಾಮ ವೇದ ವೇದಾತೀತಕಾದಿ ರಾಮ ಮಹ ದಾದಿಗಾದಿರಾಮ ( ಸದಾ) ಓಂ ಮಹ ದಾದಿಗಾದಿ ರಾಮ 2 ನಾದಯುತಾದಿ ರಾಮ ನಾದರಹಿತಾದಿ ರಾಮ ನಾದಾತೀತಾದ್ಯನಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 3 ಆದಿಗಾದಿರಾಮ ಅ ನಾದಿಗಾದಿರಾಮ ಆದಿ ಅನಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 4 ಸತ್ಪಥದಾದಿರಾಮ ¸ À ಚ್ಚಿತ್ತದಾದಿರಾಮ ಉತ್ಪತ್ತಿ ಸ್ಥಿತಿಲಯಕಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 5 ಸ್ವರ್ಗ ಭೋಗಾದಿ ರಾಮ ಧೀರ್ಘಕ್ಕೆ ದೀರ್ಘಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 6 ಜಪತಪದಾದಿ ರಾಮ ಗುಪಿತ ಗುಪ್ತಾದಿ ರಾಮ ಅಪರೋಕ್ಷ ಪರೋಕ್ಷಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 7 ಮಂತ್ರಮಯಾದಿ ರಾಮ ಮಂತ್ರ ತಂತ್ರಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 8 ಮಾಯಮಯಾದಿ ರಾಮ ಮಾಯ ನಿರ್ಮಯ ರಾಮ ಮಾಯ ಮಾಯಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 9 ಕಾಲಕಾಲದಿ ರಾಮ ಕಾಲಮೂಲಾದಿ ರಾಮ ಕಾಲಕಾಲನಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 10 ದಶರಥರಾಮ ದಶರಥಗಾದಿ ರಾಮ ದಶವಿಧೌತಾರದಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 11 ದಿವ್ಯಮಹಿಮಾದಿ ರಾಮ ಭವ್ಯಚರಿತಾದಿ ರಾಮ ದಿವ್ಯ ದೇವರ ದೇವರಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 12 ಬ್ರಹ್ಮನೆಯಾದಿ ರಾಮ ನಿರ್ಮಲಾತ್ಮಾದಿ ರಾಮ ಬ್ರಹ್ಮ ಬ್ರಹ್ಮಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 13 ಸತ್ಯ ಸತ್ಯಾದಿ ರಾಮ ನಿತ್ಯ ನಿತ್ಯಾದಿ ರಾಮ ತತ್ವ ಪಂಚದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 14 ಭುವಿತ್ರಯದಾದಿ ರಾಮ ಭವಭವದಾದಿ ರಾಮ ದಿವನಿಶಿಗಳಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 15 ಬೋಧಾದಿಮಯ ರಾಮ ಬೋಧಾದಿಗಾದಿ ರಾಮ ಸ ಸಾಧನ ಸಿದ್ಧಿಯಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 16 ನಿರ್ನಾಮ ರಾಮ ನಿರ್ಗುಣ ನಿರಂಜನಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 17 ಭಕ್ತಭಿರಾಮ ಮುಕ್ತೀಶ ರಾಮ ನಿತ್ಯ ನಿರ್ಮಲ ಜಗದಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 18 ಚಿನುಮಯ ರಾಮ ಚಿದ್ರೂಪ ರಾಮ ಜನನಮರಣ ಹರಣಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 19 ರಮಾಧವ ರಾಮ ಕ್ಷಮೆಯುತ ರಾಮ ಸುಮನಸ ಭಕ್ತಾಧೀನ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 20 ಜಯ ಜಯ ರಾಮ ಜಯ ಶ್ರೀರಾಮ ಜಯವೆಂದು ನೂರೆಂಟು ಪೊಗಳಲೀ ನಾಮ ದಯದೀಯ್ವಮುಕ್ತಿ ರಾಮ ಸದಾ ಓಂ ಮಹ ದಾದಿಗಾದಿ ರಾಮ21
--------------
ರಾಮದಾಸರು