ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿರಶಾಂತಿಯ ಪಡೆವುದಕೆ ಮನ ತ್ಯಾಗಮಾಡು ಜೀವಾ ಮನವೇ ಭವಬಂಧನಕೆ ಘನಕಾರಣವೈ ಜೀವಾ ಪ ತಿಳಿ ಈ ಮನದಾ ನಾಶಾ ಆದಾಗಲೆ ನಿಜಮುಕುತಿ ಮನ ಮೋಕ್ಷದ ಸಾಧನವೈ ಅನುಮಾನಿಸದಿರು ಜೀವಾ 1 ಮನವಿಲ್ಲದ ಆ ಸ್ವರೂಪ ಅದು ತಾನೆ ನಿರ್ವಿಕಲ್ಪ ಅದೆ ನಾನಿಹೆನೆಂದರಿಯೈ ಇದೆ ಮನದ ತ್ಯಾಗ ಜೀವಾ 2 ಪರಮ ಪದ ಆನಂದ ವೇದಾಂತದ ಘನಬೋಧಾ ಗುರುಪುಂಗವ ಶಂಕರನಾ ಪರಮಾರ್ಥ ಬೋಧಸಾರ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಮಾತ್ಮನ ನೆನೆಯಲು ಬೇಕು ಪರತರಸುಖವನು ಪಡೆಯುವನಿದರಿಂ ದುರಿತಗಳೆಲ್ಲವ ನೀಗಲು ತಾ ಪ ಮೊದಲನೆ ಕಾರ್ಯವು ಜೀವರೆಲ್ಲರಿಗೆ ಇದು ಬಲು ಸುಲಭವು ಸಾಧನಗಳಲೀ ಪದುಮನಾಭನನು ನೆನೆಯದಿರುವವ ಅಧಮನು ಜಗದಿ ವ್ಯರ್ಥ ಜೀವಿಸುವ 1 ಎಲ್ಲ ವೇದಗಳು ಎಲ್ಲ ಶಾಸ್ತ್ರಗಳು ಎಲ್ಲ ಸಾಧನೆಗಳು ಆತನ ಪ್ರಾಪ್ತಿಗೆ ಬಲ್ಲವರಿಂದಲಿ ತಿಳಿದು ವಿಚಾರಿಸಿ ನಿಲ್ಲದೆ ಸಾಧನೆ ಕೈಕೊಳ್ಳುವುದು 2 ಕೇಳುವದೈ ಪರಮಾತ್ಮನ ತತ್ವವ ತಿಳಿವುದು ತನ್ನೊಳು ತಾನೇ ನಿರುತಾ ಪೇಳಲೇನು ಧ್ಯಾನಿಸುವುದಾತನ ಮೇಳವಿಸುವದೈ ಜೀವನ್ಮುಕುತಿ 3 ನಾರಾಯಣನೇ ಪರಮಗತಿಯು ಈ ನರಜನ್ಮಕೆ ಬಂದಿರೆ ಲಾಭವಿದೇ ಅರಿತು ಇದನು ತಾ ಸಾಧನೆ ಮಾಳ್ಪುದು ಗುರುಶಂಕರನಾ ಬೋಧಸಾರವಿದು 4
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಸುಖಕರಾ ಗುರುಬೋಧಸಾರಾ ಮರಣಾ ಜರಾ ದುರಿತಾದಿ ದೂರಾ ಪ ಜೀವಭಾವವಾ ಸಟೆಯಾಗಿ ಗೈವ ದೇವಭಾವನಾ ಬಗೆಸಿನಿಲಿಸುವಾ ಸಾವಿನಂಜಿಕೆ ದೂರಾಗಿ ಮಾಳ್ಪ ಜೀವಂತಮುಕುತಿ ಕರದೀಯುವಾ 1 ದೃಶ್ಯವೆಂದು ತೋರ್ಪ ವಿಶ್ವತ್ಯಾಗ ಮಾಡಿ ದೃಶ್ಯವಸ್ತುವಿಂದ ಬೇರೆನಿಸುವಾ ಶಾಶ್ವತಾದ ಆ ಪದ ತೋರಿ ಮನದ ಕಶ್ಮಲವನು ಕಳೆವ ಭವತಾರಕಾ 2 ಭೇದಭಾವವಾ ಛೇದಿಸುತ ಮನದಿ ಬೋಧನಾರಾಯಣನ ಕೃಪೆ ಪೊಂದಿದಾ ಬೋಧರೂಪ ಗುರುವು ಪೇಳಿರ್ದ ಬೋಧ ಸಾಧು ಶಂಕರಾರ್ಯ ತಾನೆನ್ನುವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ