ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಡಲಿಯನ್ನ ಮನಸಿನಟ್ಟುಳಿ ಘನ | ನೀನೆ ನಿಲಿಸೋ ಹರಿಯೇ ದೊರೆಯೆ ಪ ಪರಮ ಪಾವನ ನಿನ್ನ ಚರಿತವ ಕೇಳದು | ಬರಡ ಮಾತಿಗೆ ಪ್ರೇಮಾ ನೇಮಾ 1 ಸಿರಿವರ ಮೂರ್ತಿಯನು ನೋಡಲೊಲ್ಲದು | ಸತಿಯರ ರೂಪಕೆಳಸುವದು ಹರಿದು 2 ಸಂತರ ಚರಣಕೆರಗಿ ಬಿಗಿದಪ್ಪದು | ಭ್ರಾಂತ ಜನರೊಳಗೆ ಸಂಗಾ 3 ಹರಿಯಂದೊದರಲು ನಾಲಿಗೆ ಬಾರದು | ಪರನಿಂದೆ ಜಪಿಸುವದು ಸರಿದು 4 ಸಿರಿ ಚರಣಾರ್ಪಿತ ತುಲಸಿಯ ಸೇರದು | ಪರಿಮಳದಲಿ ಬೋಗಿಲಿ ಸಾಗಿ 5 ಗುರು ಮಹಿಪತಿ ಪ್ರಭು ನಿನ್ನೆಚ್ಚರಿದಿ ಮನ | ವಿರಿಸಿಯನ್ನನುಳಹೋ ಸಲಹೋ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡು ಗರ್ವ ಹಿಡಿಯ ಬ್ಯಾಡಾ ಪ ಜಗದೊಳಗ ಹಿತ ಮಾಡಿಕೊ | ಸಂತರೊಳು ಕೂಡಿ ನೀ ಪ್ರಾಣಿ ಅ.ಪ ಸುರಪದ ಮದ-ಗಜವೇರಿ ಸುರಸೈನ್ಯದಿಂಬರಲು | ಕರುಣದಿಂ ದೂರ್ವಾಸ ಸರ್ವ ಕುಡಲು | ಕೊರಳಿಗಿಕ್ಕದೆ ಬಿಡಲು ಧರೆಗೆರಗುವದ ಕಂಡು | ಮೊರೆದು ಕೋಪಿಸಲು ಸಿರಿಹರದ್ಹೋಯಿತು ಪ್ರಾಣಿ 1 ನೃಪತಿ ನಹುಷನನು ಯಜ್ಞ ಅಪರಿಮಿತ ಮಾಡಿ ನಿಜ | ಉಪಬೋಗಿಸದೆ ತಾ ಸುರಪ ಪದವಿಯಾ | ವಿಪುಲ ಋಷಿಯರ ಕೂಡ ಅಪಹಾಸ ಮಾಡಲಿಕೆ | ಶಪಿಸಲಾಕ್ಷಣ ಉರಗಾಧಿಪನಾದ ಪ್ರಾಣಿ 2 ವೈರಿ ಗರ್ವ ವಿದ್ಯಕ ಹಾನಿ | ಗರ್ವದಿಂ ಕೆಡಬಹುದುರ್ವಿಯೊಳಗ | ಸರ್ವಥಾ ಬ್ಯಾಡೆಂದು ಹೊರೆಯೊ ಗುರು ಮಹಿಪತಿ | ಅರ್ವವನು ಕೊಟ್ಟೆನಗ ಸರ್ವರೊಳು ಪ್ರಾಣಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊನ್ನು ಹೆಣ್ಣು ಮಣ್ಣು ಮೂರನು ಬಿಟ್ಟು ಚರಿಸುವವ ಯೋಗಿ ಬಣ್ಣ ಸಣ್ಣ ಸರ್ವಾಭರಣವಿಟ್ಟು ಮೆರೆವನು ಬೋಗಿ ಪ ನಾರಿಯರದನು ಕಂಡು ಥೂ ಎಂದುಗುಳಿ ತೊಲಗುವಯೋಗಿ ಭೋಗಿ ಘೋರ ತಪವ ಚರಿಸಿ ಅಡವಿಸೇರಿ ಕೊಂಬನು ಯೋಗಿ ಭೋಗಿ 1 ಮಾಯೆಯಳಿದು ವಸ್ತುವರಿತು ಚರಿಸುತಿಹನು ಯೋಗಿ ಜಾಯೆ ಸುತರ ಸಿರಿಯ ನೆಚ್ಚಿ ಹಿಗ್ಗುತಿಹನು ಭೋಗಿ ಬಾಯ ಬಿಡದೆ ಮೌನಿಯಾಗಿ ಜಪಿಸುತಿಹನು ಯೋಗಿ ಭೋಗಿ 2 ಕುಲದಲಾವನೆಂದು ಜನಕೆ ತಿಳಿಯ ಬಾರದವನು ಯೋಗಿ ಹೊಳಲಿನೊಳಗೆ ಸುಳಿದು ಸುಳಿದು ನಲಿಯುತಿಹನು ಭೋಗಿ ಚಲನ ಭವನ ಕೋಣೆ ಲಕ್ಷ್ಮೀರಮಣನು ತಾನೆಯಾಗಿ ಒಳಗು ಹೊರಗು ಬೆಳಗುತಿಹನು ಯೋಗಾನಂದನಾಗಿ 3
--------------
ಕವಿ ಪರಮದೇವದಾಸರು