ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿರೈ ಜನಾ ರಂಜನೆಯಲ್ಲಿ | ನೋಡಿರೈ ಜನಾ | ಮಾಡದೆ ಹಿರಿಗುರು ಭಕ್ತಿಯ ಶೀಲದಿ | ರೂಢಿಯ ಡಂಭಕ ಹರಿದಾಡುವದು ಪ ಸಾಧು ಸಂತರ ಮನೆಯಲ್ಲಿ | ಆದರವಿಲ್ಲಾ ಮನದಲ್ಲಿ | ಮೇದಿನಿಯಲಿ ನುಡಿಸಿದ್ಧಿಯ ಹೇಳಲು | ಸಾಧಿಸಿ ಹೋಗುತ ಬಾಗುತಲಿಹುದು 1 ಚಂದನವಿಡಿದು ತೆಯ್ವಲ್ಲಿ | ಒಂದು ಬಾರದು ನೊಣವಲ್ಲಿ | ಕುಂದದೆ ಎಂಜಲ ತೊಳೆವಾಸ್ಥಳದಲ್ಲಿ | ಸಂದಿಸಿ ಮುಕುರುವ ಸಂದಲಿ ಯಂದದಿ 2 ಪರಗತಿ ಸಾಧನ ವರಿಯರು | ಬರಿದೆ ಭ್ರಾಂತಿಗೆ ಬೆರೆವರು | ಗುರುಮಹಿಪತಿಸುತ ಪ್ರಭು ಕಲ್ಪತರು | ಸೇರದೆ ಬೊಬ್ಬುಲಿ ಮರಕೆಳಗಾಡುವ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಗಿಯಲಿ ಬ್ಯಾಡಣ್ಣಾ | ಮದದಲಿ ಪ ಒಳ್ಳೆವರಾ ನುಡಿಯಳ್ಹಲಿ ಮಾಡಿ | ಖುಳ್ಳತನದಲೆ ದಿನ ಹೋಗಾಡಿ 1 ಮಾನವ ಸರಿ ಬಗಿಬ್ಯಾಡ | ಹವಣಿಸಿ ಚರಣಕ ನಮಿಸೆಲೋ ಮೂಢಾ 2 ಶಿಷ್ಟಗೆರಗನು ದಾವನು ಬಾಗಿ | ಹುಟ್ಟುವ ಕಾಡ ಬೊಬ್ಬುಲಿ ಮರವಾಗಿ 3 ಸಣ್ಣ ದೊಡ್ಡವರೆನಬಾರದು ಕೇಳು | ಮನ್ನಣೆ ಗೆಲ್ಲಗವರೇ ಮೇಲು 4 ಗುರುವರ ಮಹಿಪತಿ ಸಾರಿದ ನಿಜವಚನಾ | ಧರೆಯೊಳಗಿದೆ ಪರಗತಿ ಸೋಪಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು