ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಮೃತ್ಯುವು ಸ್ತ್ರೀಯಲ್ಲದಲೆ ಕಾಯುವವಳು ತಾನಲ್ಲಣ್ಣ ಕಾಳಕವೀಶ್ವರ ಬಲ್ಲನು ತಾನೇನ ಕಾಳ ಕಿಚ್ಚಿನ ಕುಂಡವಣ್ಣ ಪ ಮಲ ಮೂತ್ರವು ಮಜ್ಜೆಯು ಮೇದಸ್ಸು ಮೇಲೆ ಚರ್ಮ ಹೊದ್ದಿಹೆವಣ್ಣಎಲುಬುಗಳಡಕಲಿ ನರಗಳ ಬಿಗಿವು ಎಡದೆರ ಅಪಿಲ್ಲದೆ ಇಹುದಣ್ಣ ಬಲು ಹೊಲಸಿನ ಮಡುವದು ಮತ್ತೆ ಬಗೆಬಗೆಯ ಕ್ರಿಮಿಗಳು ಮನೆಯೊಳಣ್ಣ ಹೊಲೆಮಯವಿರುವ ಸ್ತ್ರೀಯ ವರ್ಣಿಪೆನು ಹೇವ ಮಾರಿಯು ಕಾಣಣ್ಣ 1 ಕಳಸ ಕುಚವು ಎದೆಎಂಬನ ಬಾಯಲಿ ಕರಿಯ ಮಣ್ಣನೆ ಹಾಕಣ್ಣ ಹೊಳೆವ ಕಂಗಳು ಎಂಬನ ಮೋರೆಗೆ ಹುಡಿಯನೀಗಲೆ ಚೆಲ್ಲಣ್ಣಬಳಕು ನಡೆಯಂತೆಂದು ಬೊಗಳುವನ ನಿಲಿಸದೆ ಅಲ್ಲಿಂದಟ್ಟಣ್ಣಚೆಲುವಿನ ಸುಂದರ ಚೇಷ್ಟೆಗೆ ನಲಿವನ ಚಪ್ಪಲಿಯಿಂದಲಿ ಕುಟ್ಟಣ್ಣ 2 ಬ್ರಹ್ಮಧ್ಯಾನವ ಮಾಡುವುದಕ್ಕೆ ಬ್ರಹ್ಮರಾಕ್ಷಸವು ಇದು ಅಣ್ಣಹಮ್ಮಳಿದು ಯೋಗಾಭ್ಯಾಸದಲಿರೆ ಹೃದಯದಲಿ ಹರಿದಾಡುವುದಣ್ಣಬ್ರಹ್ಮೇತಿಯು ತಾನಿವನ ಸಂಗದಿ ಭವಭವತಿರುಗುವುದ ಬಿಡದಣ್ಣಸಮ್ಮತದಲಿ ಚಿದಾನಂದ ಹೊಂದಿಯೆ ಸೀಮಂತಿನಿಯ ಬಿಡಬೇಕಣ್ಣ 3
--------------
ಚಿದಾನಂದ ಅವಧೂತರು
ಮೊಚ್ಚೆ ಮೊಚ್ಚೆಲಿ ಹೊಡೆಯಿರಿ ಇವನ | ನೆಚ್ಚಿದೆತನುವಿದನೆಂಬುವನ || ಹುಚ್ಚ ನಾಯಿಯೋಲ್‍ಎಚ್ಚರವಿಲ್ಲದೆ | ಅರ್ಚಕ ಜನರನು ಬೊಗಳುವನ ಪ ಪರ ಉಪಕಾರಿಲ್ಲದ | ಮಾನುಷನಾಗಿಬಾಳುವನ || ತಾ ಅಜ್ಞಾನ ಮಾರ್ಗದಿ ನಡೆದು |ಜ್ಞಾನವ ಪರರಿಗೆ ಹೇಳುವನ 1 ಸತಿಸುತರತಿಶಯ ಹಿತವರು ಎನುತಲಿ | ಸತತವು ಅವರೊಳುಮರಗುವನ | ಮಿತಿಯಿಲ್ಲದೆ ಧನಧಾನ್ಯವ ಬೇಡುತ |ಕ್ಷಿತಿಯ ಮೇಲೆ ತಿರುಗುವನ2 ಕರುಣವ ಪಡೆಯದೆ ಭವತಾರಕನ | ನರ ತನುಗಳನುಸ್ತುತಿಸುವನ | ಪರಿಪರಿ ಸಂಸಾರದ ವಿಷಯದಲಿ |ನಿರುತದಿ ಮನವನು ಮಥಿಸುವನ 3
--------------
ಭಾವತರಕರು
ಹೆಡಗುಡಿ ಕಟ್ಟಿ ಹೊಡೆಯಿರಿ ಇವನ | ಬಡತನ ಸಂತರಿಗ್ಹೇಳುವನ ಪ ಸೆಡಗರದಲಿ ಸಂಸಾರವ ಮಾಡುತ ಬಿಡದಾಶೆಯಲೀ ಮರಗುವನ ಅ. ಪ ಅನ್ನವ ಬೇಡುವ ಅತಿಥಿಯು ಬಂದರೆ | ನಿನ್ನೆ ನಾ ಉಪವಾಸೆಂಬುವನ | ಅನ್ಯಾಯದಲಿ ಪಾಪವ ಗಳಿಸಿ |ನಾಯ್ ಕುನ್ನಿಯಂತೆ ಎಲ್ಲರ ಬೊಗಳುವನ 1 ವಸ್ತ್ರವ ಕೊಡು ಎಂದವರಿಗೆ ಹರಕೊಂ- | ದೊಸ್ತ್ರವ ತೆರೆದು ತೋರುವನ | ವೇಶ್ಯಾ ಸ್ತ್ರೀಯರ ಕಂಡರೆ ಕರೆದು | ಉತ್ತಮ ವಸ್ತ್ರವನೀಯುವನ 2 ಮಂತ್ರವ ಅರಿಯದೆ | ತಂತ್ರವ ಮಾಡುತ | ಅಂತರ ಪೂಜೆಯ ಅರಿಯದವನ | ಅಂತರಂಗದಿ ಭವತಾರಕನಂಘ್ರಿಯ | ಶಾಂತದಿಂದಲಿ ಧ್ಯಾನಿಸದವನ 3
--------------
ಭಾವತರಕರು