ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲಕ್ಕೆ ನೀನೆ ಸ್ವತಂತ್ರನಾಗಿರ್ದು ಅಖಿಲೇಶ ಎನ್ನ ಸ್ವತಂತ್ರನೆನಿಸಿ ಕೊಲ್ಲುವರೆ ಪ ನೀನೆ ನಡೆಸಲು ನಡೆವೆ ನೀನೆ ನುಡಿಸಲು ನುಡಿವೆ ಸೂತ್ರ ಬೊಂಬ್ಯಂತೆ ನಾನಾಪರಿಯಲಿ ಎನಗೆ ಹೀನ ಬವಣ್ಯಾತಕೊ ದೀನಜನ ಭಂಧುವೆ ನೀನೆ ನೀಖಿಲೇಶ 1 ಅಡವಿ ಮಹದಾರಣ್ಯ ಗಿಡ ಗುಡ್ಡ ಗಂಹ್ವರ ಕಡುಕ್ಷೇತ್ರ ಮೊದಲಾದ ಇಡಿ ಬ್ರಹ್ಮಾಂಡಗಳ ಬಿಡದೆ ಉದರದೊಳಿಟ್ಟು ಅಡಗಿ ಮತ್ತದರೊಳಗೆ ನಡೆಸುವಿಯೆಲೊ ಸೃಷ್ಟಿ ಕಡುಚಿತ್ರಮಹಿಮ 2 ನಿನ್ನ ಮಹಿಮಿದು ಎಲ್ಲ ಭಿನ್ನವಿದರೊಳೊಂದು ಪರಿ ಬನ್ನ ಬಡಿಸುವುದು ಇನ್ನಿದು ತರವಲ್ಲ ಪನ್ನಂಗಶಯನನೆ ಮನ್ನಿಸಿ ಪೊರೆ ದಯದಿ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು