ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ವರ್ಣಿಸಿದ ಕವೀಶ್ವರ ನಾರಿಯಜ್ಞಾನಕೆ ಹಾನಿಯ ಮುಕ್ತಿಗೆ ಮೃತ್ಯುವಕಾನನ ರೂಪು ನರಕ ಕುಂಡವೆಂಬಳತಾನು ಕೆಡಲು ಸುಳ್ಳು ಸ್ತುತಿ ಮಾಡಿದ ಪ ಗುದ್ದಲಿ ಮೂಗನು ಸಂಪಿಗೆ ನನೆ ಎಂದಬುದ್ದಲಿ ಮುಖವನು ಪದ್ಮಮುಖವೆಂದಇದ್ದಲಿ ತನುವನು ಇಂದ್ರನೀಲವೆಂದಹದ್ದಿನ ಕೈಯನು ಹರಿ ಸುಂಡಲೆಂದ 1 ಬೆಳ್ಳುಳ್ಳಿ ಹಲ್ಲನು ದಾಳಿಂಬ ಬಿತ್ತವೆಂದಹುಲ್ಲೆಗಣ್ಣೆಂದನು ಸುಳಿಗಣ್ಣಮಲ್ಲಿಗೆ ಮೊಳೆಯೆಂದನು ಮುರುಕಿ ಮಾತುಗಳನ್ನುಜೊಲ್ಲು ಸುರಿವುದಕೆ ಅಮೃತವೆಂದನು 2 ಕುಂಭ ಕುಚವೆಂದನು ಮಾಂಸದ ಮುದ್ದೆಯಬಿಂಬಾಧರವೆಂದನು ಹಂದಿಯ ತುಟಿಯಕಂಬ ಬಾಳೆ ಎಂದನು ಕೊರಡು ತೊಡೆಯನುಬಿಂಬ ಕನ್ನಡಿ ಎಂದನು ಕುಣಿಗಲ್ಲವ 3 ಕಲಹಂಸ ನಡಿಗೆಯೆಂದ ಕೋಣನ ನಡಿಗೆಯಅಳಿಕುಂತಳವೆಂದ ಮುರುಟು ಕೂದಲನುಬಲು ಸಿಂಹನಡುವೆಂದ ಮೊಸಳೆ ನಡುವನ್ನುಹೊಳೆವ ಬೊಂಬೆಯೆಂದ ಕೊಳಕು ಮೈಯನ್ನು 4 ಹೊಲಸು ಮೂಳಿಗೆ ನಾನಾ ಹೋಲಿಕೆಗಳನಿಟ್ಟುತಿಳಿದಂತೆ ಕವಿತಾನು ವರ್ಣಿಸಿದ ಕೊಂಡಾಡಿಸುಲಭ ಚಿದಾನಂದ ಸುಪಥವ ಕಾಣದಲೆಕಳಕೊಂಡ ಕವಿತಾನು ಬಹು ಪುಣ್ಯ ಪಥವ 5
--------------
ಚಿದಾನಂದ ಅವಧೂತರು
ಗುರುವಿನ ನೋಡಿರೋ ಕರುಣವ ಪಾಡಿರೋ ಪ ದೀನ ಜನರ ಅಭಿಮಾನಿ ನಿಜ ಸುಖದಾನಿ ಮಹಾಸುಜ್ಞಾನಿ | ಸ್ವಾನುಭವ ದಾಗರ ಗುಣಗಂಭೀರ ಪರಮ ಉದಾರ | ಮೂರ್ತಿ ವಿಮಲ ಸುಕೀರ್ತಿ | ಭರಿತನಾದಸುರ ಚರಿತನು 1 ವಿಡಿಯುತ ಕುರುಹು | ನಿರುತ ತತ್ವದ ಬೊಂಬೆಯೆನೆ ಸುಖದಿಂಬೆ ಅದು ಏನೆಂಬೆ | ನರ ಶರೀರದೆ ಬಂದ ಪರಗೃಹಲಿಂದಲ್ಯಾಡೊದ ಛಂದ | ವಿರಾಗದೋರಿದ ಯೋಗನು 2 ಬೆಳೆಯದೋರಿದ ಕಳೆಯ | ಮರೆದ ಮುನ್ನಿನ ಠಾವ ದೋರಿಸಿ ಜೀವನ್ಮುಕ್ತಿಯ ನೀವ | ನಮೋ ನಮೋ ಎಂದೆ | ಕರುಣವ ಮಾಡಿದ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಥರವಲ್ಲ ಸ್ವಾಮಿ ಥರವಲ್ಲ ಪ. ಥರವಲ್ಲ ಸ್ವಾಮಿ ಈ ತೆರನ ಮಾಡುವುದು ಕರುಣ ಸಾಗರನೆಂಬ ಬಿರುದಿನ್ನು ನಿಲದು ಅ.ಪ. ಊರೊಳಗಿಹ ಜನರೆಲ್ಲರು ಕೂಡಿ ವಾರಿಜಾಕ್ಷನ ದಾಸನೆಂದು ಕೊಂಡಾಡಿ ಸಾರಿಸಾರಿಗೆ ನಿನ್ನ ಕೀರ್ತನೆ ಮಾಡಿ ಪೋರ ಪೇಚಾಡುವನೆಂಬರು ಕೂಡಿ1 ಪಾರಾಯಣದ ಪುಸ್ತಕವ ಕಟ್ಟಿಟ್ಟು ವಾರಿಜನಾಭ ನಿನ್ನಯ ಪೂಜೆ ಬಿಟ್ಟು ಕಾರಿ ಕೆಮ್ಮುತ ಬಿದ್ದಿರುವ ದೊಡ್ಡ ಗುಟ್ಟು ಯಾರ ಮೇಲಿನ್ನು ತೋರಿಸಲೆನ್ನ ಸಿಟ್ಟು 2 ಮೋಹ ಪಾಶದಿ ಮುಸುಕಿ ಕಟ್ಟಿದರೆ ಬಹ ಪಾತಕಗಳಿಗೆಲ್ಲ ನಾನಿದಿರೆ ನೀ ಹದಿನಾಲ್ಕು ಲೋಕೇಶನೆಂದೊದರೆ ದೇಹವ ಬಳಲಿಸಿದರೆ ನಾನೇನ್ಹೆದರೆ 3 ನಂಬಿರೊ ಭಕ್ತ ಕುಟುಂಬಿಯನೆಂದು ಅಂಬುಜಸಂಭವನ್ಯಾಕೆಂದನಂದು ಹಂಬಲಿಸಿದರು ನೀ ದಯದೋರದಿಂದು ಬೊಂಬೆಯೆ ಸರಿಯೆಂದು ಜನರೆಂಬೊ ಕುಂದು 4 ಸರ್ವದೋಷಹರ ಸಾಗರಜೇಶ ನಿರ್ವೇದದಿಂದ ನಾ ನುಡಿದೆನಾಕ್ರೋಶ ಸರ್ವಕಾಲಕು ಸಲಹುವ ನೀನೆ ಶ್ರೀಶ ಶರ್ವಾದಿ ವಂದ್ಯ ಶೇಷಾಚಲವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಜೋ ಜೋ ಯಶೋದೆಯ ನಂದ ಮುಕುಂದನೆಜೋ ಜೋ ಕಂಸಕುಠಾರಿ ಪ.ಜೋ ಜೋ ಮುನಿಗಳ ಹೃದಯಾನಂದನೆಜೋ ಜೋ ಲಕುಮಿಯ ರಮಣ ಅಪಹೊಕ್ಕುಳ ಹೂವಿನ ತಾವರೆಗಣ್ಣಿನಇಕ್ಕಿದಮಕರ ಕುಂಡಲದಜಕ್ಕುಳಿಸುವ ಕದಪಿನ ಸುಳಿಗುರುಳಿನಚಿಕ್ಕ ಬಾಯ ಮುದ್ದು ಮೊಗದ ||ಸೊಕ್ಕಿದ ಮದಕರಿಯಂದದಿ ನೊಸಲೊಳಗಿಕ್ಕಿದ ಕಸ್ತೂರಿ ತಿಲಕ |ರಕ್ಕಸರೆದೆದಲ್ಲಣ ಮುರವೈರಿಯೆಮಕ್ಕಳ ಮಾಣಿಕ್ಯ ಜೋ ಜೋ 1ಕಣ್ಣ ಬೆಳಗು ಪಸರಿಸುತಿರೆಗೋಪಿಅರೆಗಣ್ಣ ಮುಚ್ಚಿ ನೋಡಿ ನಗುತ |ಸಣ್ಣ ಬೆರಳುಗಳ ಬಾಯೊಳಗಳವಡಿಸಿಪನ್ನಗಶಯನ ತೊಟ್ಟಿಲಲಿ ||ನಿನ್ನ ಮಗನ ಮುದ್ದನೋಡು ಎಂದೆನುತಲಿತನ್ನ ಪತಿಗೆ ತೋರಿದಳು |ಹೊನ್ನ ಬಣ್ಣದ ಸೊಬಗಿನ ಖಣಿಯೆ ಹೊಸರನ್ನದ ಬೊಂಬೆಯೆ ಜೋ ಜೋ 2ನಿಡು ತೋಳ್ಗಳ ಪಸರಿಸುತಿರೆ ಗೋಪಿಯತೊಡೆಯ ಮೇಲ್ಮಲಗಿ ಬಾಯ್ದೆರೆಯೆ |ಒಡಲೊಳಗೀರೇಳು ಭುವನವಿರಲು ಕಂಡುನಡುಗಿ ಕಂಗಳನು ಮುಚ್ಚಿದಳು ||ಸಡಗರಿಸುತ ತಾನರಿಯದಂತೆಯೆಹೊಡೆ ಮರುಳಿ ಮೊಗವ ನೋಡುತಲಿಕಡಲಶಯನ ಮೊಗವ ನೋಡುತಲಿಕಡಲಶಯನ ಶ್ರೀ ಪುರಂದರವಿಠಲನುಬಿಡದೆ ನಮ್ಮೆಲ್ಲರ ರಕ್ಷಿಸುವ 3
--------------
ಪುರಂದರದಾಸರು