ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಸಂಸಾರ ಸುಖವು ಬೇಸರಾಯ್ತೆನಗೆ ವಾಸವಾನಜ ಲಾಲಿಸೊ ಪ ಏಸು ಜನುಮದ ಪಾಪವೊ ಈ ಸಂಸಾರ ಬಂಧನವೊ ಅ.ಪ ತಂದೆ ತಾಯಿ ಎಂಬುದದು ಒಂದು ಚಿಂತೆ ಬಂಧು ಬಳಗವು ಎಂಬುದದು ಬೇರೆ ಚಿಂತೆ ಸತಿ ಸುತರೆಂಬದದು ದೊಡ್ಡ ಚಿಂತೆ ಕಂದನಿಲ್ಲದಿರಲದು ಘೋರ ಚಿಂತೆ 1 ಹಿಂದೆ ಮಾಡಿದ ಪಾಪಕೀಸು ಭವಣೆಯು ಸಾಕು ಮುಂದೆ ಬೇಡವೊ ಸ್ವಾಮಿ ಈ ತೆರದ ತಾಪ ಇಂದು ಮಾಡಿದ ಪಾಪ ಒಂದುಳುಹದಂತೆ ತಂದೆ ಕರುಣದಿ ಸುಟ್ಟು ಸಲಹೆನ್ನ ದೊರೆಯೆ 2 ಪಾದ ಸರೋಜದಲಿ ಮಂದಮತಿಯ ಮನ ಚಲಿಸದೆ ನಿಲುವಂತೆ ಒಂದು ಬೇಡುವೆನೊ ದೇವ ಬೇರೊಂದ ನಾನೊಲ್ಲೆ ಮಂದರೋದ್ಧಾರ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು