ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಗಶಯನಾ ನಿನಗೆ ದಯಬಾರದೇನೋ ಪ ಕೂಗಿ ಬೇಸರವಾಯ್ತು ಬಸವಳಿದೆನೋ ಸ್ವಾಮಿ ಅ.ಪ ಗುಡಿಯ ಪ್ರಾಕಾರದಲಿ ನಡುನಡುಗಿ ಕಡುನೊಂದು ಮೃಡನು ತಾ ಬಾಯೆಂದು ಕರೆಕರೆಯೆ ಕಡುಮುದದಿ ಹಿಂದಿರುಗಿ ಕನ್ನವೊಂದನು ಗೈದು ಶೌರಿ 1 ಪೀತಾಂಬರವ ಮಾರಿ ವಿತ್ತಮಂ ತಾರೆಂದ ಮಾತೆಯಾ ಮಾತಿಗಂಜಿದ ಕಬೀರಂಗೆ ಖ್ಯಾತಿಯೀಯುವ ಬಯಕೆ ನಿನಗಾಯಿತಲ್ಲವೇ ಮಾತಿಂಗೆ ಮರುಳಾಗಿ ನಲಿಯಲಿಲ್ಲವೆ ನೀನು 2 ಸತಿಯೆಪ್ರಾಣವುಯೆಂದು ಕಾರಿರುಳ ಲೆಕ್ಕಿಸದೆ ಮತಿಗೆಟ್ಟ ತುಳಸಿದಾಸಂಗೊಲಿದೆಯಲ್ತೇ ಸತತ ಮಾಂಗಿರಿರಂಗ ಪತಿತಪಾವನಾಯೆಂದು ನುತಿಸಿ ನಾ ಕೂಗುವುದು ಕೇಳದಿಹುದೇ ಸ್ವಾಮಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನೊಲಿದು ನಿನ್ನ ಸೇವೆಯನು ಕೊಡು ಹರಿಯೇ ಪ ನಾನೊರಲುವಾ ಕೂಗು ಕೇಳಿಸದೆ ದೊರೆಯೇ ಅ.ಪ ಸಂಸಾರ ಸುಖಗಳನು ಅನುಭವಿಸಿ ಸಾಕಾಯ್ತು ಹಿಂಸೆ ಚಿಂತೆಯ ರುಚಿಯ ತಿಳಿದುದಾಯ್ತು ಹಂಸನೀರೊಳಗಿದ್ದು ನೀರರಿಯದಂತಾಯ್ತು ಕಂಸಾರಿ ಸಾಕಿನ್ನು ಭೂಮಿ ಬೇಸರವಾಯ್ತು 1 ಶತಪಾಪಿ ನಾನಾಗಿ ಪತಿತಜನ್ಮವನಾಂತು ವ್ರತ ನೇಮ ನಿಷ್ಠೆಗಳ ಮರೆತು ಕುಳಿತು ಮಿತವಿಲ್ಲದನ್ಯಾಯಕಾರ್ಯದಿಂ ಬಸವಳಿದು ಸತಿಸುತೆಯರಾಟದಲಿ ನಿನ್ನ ಮರೆತೆ2 ಕರುಣಾ ಸಮುದ್ರ ನೀನಲ್ಲವೇ ಹರಿಯೇ ಪೊರೆಯೋ ಮಾಂಗಿರಿರಂಗ ಕರುಣಾಂತರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್