ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ಪ ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು ಅ.ಪ ಪಾಪವೆಂಬುದು ಹೊರಗಿಹುದೆ ತನ್ನ ಅಪವರ್ಗಕೆ ಮಾರ್ಗವಹುದೆ ಬಲು ತಾಪಸಿಗಾದರು ಅದು ಸಾಧನವಹುದೆ 1 ಪುಣ್ಯವೆಂಬದು ಬೇರೆಯಿಲ್ಲಾ ನಾನಾ ರಣ್ಯ ಚರಿಸಿದರು ದೊರಕುವದಲ್ಲಾ ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ ಅನ್ಯರಾಶಿ ಬದಲು ಗತಿಗವಸಲ್ಲಾ 2 ವೈಕುಂಠವೆಂಬೋದು ಅಲ್ಲೆ ಬರಿದೆ ಲೌಕೀಕ ತೊರದರೆ ಇಪ್ಪದು ಇಲ್ಲೆ ಈ ಕಲಿಯೊಳಗೆ ಈ ಸೊಲ್ಲೆವೊಲಿಸ ಬೇಕೆನೆ ಮಾರಿ ಓಡುವುದು ನಾ ಬಲ್ಲೆ 3 ಹರಿಸ್ಮರಣೆಗೆ ಪೋಪ ದೋಷ ಬಲು ಪರಿ ಧರ್ಮವ ಮಾಡಲು ಲೇಶ ಸರಿಯಾವು ತರುವಾಯ ಮೋಸದಿಂದ ತಿರುಗಿ ತಿರುಗಿ ಪುಟ್ಟಿ ಬಡವನು ಕ್ಲೇಶಾ4 ಒಬ್ಬರ ಸರಿಗಟ್ಟದಿರೊ ನಿನ ಕರ್ಮ ಸುಖವೆಂದು ಸಾರೊ ಉಬ್ಬಲ ದಾಡಿಪರಾರೊ ಎಲೆ ಲ್ಹಬ್ಬಿದ ವಿಜಯವಿಠ್ಠಲನೆಂದು ಸಾರೋ 5
--------------
ವಿಜಯದಾಸ
ಭಕುತಿ ಸುಲಭವಲ್ಲ ಶ್ರೀ ಹರಿ ಭಕುತಿ ಸುಲಭವಲ್ಲ ಪ ಮುಕುತಿಗೆ ಯುಕುತಿ ಬೇರೆಯಿಲ್ಲ ಶ್ರೀ ಹರಿ ಅ.ಪ ಉರುತರ ಕ್ಲೇಶಕೆ ಗುರಿಯಾಗುತಿರಲು ಹರಿ ಹರಿಯೆನ್ನುತ ಕಿರುಚುತ ಸತತವು ಕ್ಲೇಶ ಹರಿಯನು ಸುಲಭದಿ ಮರೆವುದು ಭಕುತಿಯ ತರವಾಗುವುದೇ 1 ಭುವಿಯಲಿ ಬಹು ವಿಧ ಸುವಿನೋದಗಳ ಸವಿಯನು ಪೊಂದಲು ವಿವಿಧ ಭಾಗ್ಯಗಳ ಸುವಿನಯದಲಿ ಮಾಧವನನು ಬೇಡಲು ಹವನ ಹೋಮಗಳು ಭಕುತಿಯಾಗುವುದೇ 2 ಶ್ರವಣ ಮನನ ವಿಧಿಧ್ಯಾಸಗಳಿಂ ಸಿರಿಪತಿ ಗುಣಗಣದಲಿ ದೃಢಮತಿಯನು ಮಾಡುತ ತನುಮನಗಳನÀರ್ಪಣೆಯನು ಮಾಡುತ ಮನಸಿಜ ಜನಕ ಪ್ರಸನ್ನನಾಗುವಂಥ 3
--------------
ವಿದ್ಯಾಪ್ರಸನ್ನತೀರ್ಥರು