ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಔಷಧದ ಬೇರೊಂದನು ನಾರದನು ತಂದ ಪೋಷಣೆಗೆ ಸಕಲರೂ ಸವಿಯಲೆಂದ ಪ ಜ್ವರಭೇದಗಳಿಗೆಲ್ಲ ನರಹರಿ ಎಂಬ ಬೇರು ಶಿರವೇಧೆ ಎಂಬುದಕೆ ಹರಿಹರಿ ಎಂಬ ಬೇರು ವಾತ ರುಜೆಗಳಿಗೆ ಸಿರಿಲೋಲನೀ ಬೇರು ಪರಿಪರಿಯ ಭವಗಳಿಗೆ ನಾರಾಯಣಾ ಎಂಬ ಬೇರು 1 ಪಿತ್ತರೋಗಂಗಳಿಗೆ ಚಿತ್ತಜನಪಿತನೆಂಬ ಪೃಥ್ವಿಯೊಳಗತ್ಯಧಮ ವಿಭಂದ ರೋಗಗಳಿ ಗರ್ಥಿಯಿಂ ಲೇಪಿಸುವ ಸತ್ವಗುಣನಿಧಿಯೆಂಬ ನಿತ್ಯಶೌರಿಯ ನಾಮ ಶಿವಬೇರು 2 ನಾರದನು ಬೇರೂರೆ ನೀರೆರೆದ ಪ್ರಹ್ಲಾದ ಧೀರಬಲಿ ಬೆಳೆಯಿಸಿದ | ನೀರ ಗಜನೆರೆದ ವೀರದಶಶಿರನನುಜನೆಚ್ಚರದೊಳಿದ ಕಾಯ್ದ ನಾರಿ ದ್ರೌಪದಿ ಶಿರದಿ ಮೊಗ್ಗಾಗಿ ಧರಿಸಿದಂಥ 3 ಅರಳಿದ ಸುಮಗಳನು ಅಕ್ರೂರ ಪೋಷಿಸಿದ ತ್ವರಿತದಿ ಕಾಯ್ಗಳನು ಶುಕದೇವ ಕಾಯ್ದ ನರರೆಲ್ಲರೀ ಫಲವ ದಿನದಿನವು ಮೆಲಲೆಂದು ವರದ ಮಾಂಗಿರಿರಂಗ ಪೇಳುತಿಹನು 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಾರತೀ ರಮಣಾ ಪವಮಾನಾ ಜಗದೊಳುಸುತ್ರಾಣ|ಘೋರದುರಿತಾರಣ್ಯ ದಹನ |ಮಾರಕದನಜಿತವಾರವಾರಕೆ ಶ್ರೀ ನಾರಾಯಣನ ಪದ ಆರಾಧನೆ ಕೊಡು ಪಮೈಗಣ್ಣಪದವಾಳ್ದವಾತ | ಲೋಕ ವಿಖ್ಯಾತ |ನಾಗಜನಕ ಭಜಕ ಪ್ರೀತ ||ಯೋಗೇಶ ಜಡಜಂಗಮ ವಿತತ | ಅದ್ಭುತ ಚರಿತ |ಬಾಗುವೆ ಲಾಲಿಸೋ ಮಾತ ||ಹೋಗುತಲಿದೆ ಹೊತ್ತೀಗಲೆ | ತವಕದಲಿಭಾಗವತರೊಳಗೆ ||ಭಾಗೀರಥೀ ಪಿತನಾಗುಣಪೊಗಳಿಸೊ |ಜಾಗುಮಾಡದಲೆ |ನಾಗಾದಿ ರೂಪನೆ ಗರುಡಾರ್ಚಿತ 1ಗೀರ್ವಾಣವಂದ್ಯ ಹರಿದಶ್ವ |ತೇಜಪೃಷದಶ್ವ |ದೂರ್ವಾಸಾರ್ಚಿತಮಾತರಿಶ್ವ||ಪಾರ್ವತೀಪತಿ ವಂದ್ಯ | ದುಸ್ವಭಾವಗತನಭಸ್ವ |ತ್ಪೂರ್ವಿಕಾ ದೇವ ಹಂಸಾಶ್ವ ||ತೋರ್ವುದು ಜ್ಞಾನವ | ಬೀರ್ವುದು ಕರುಣವ |ಪೂರ್ವದೇವ ಸಾರ್ವೆ ನಿನ್ನನು ಯನ್ನ ||ಚಾರ್ವಾಕ ಮತಿಯನು | ಬೇರೂರೆ ಸಳಿಯಾಲು |ಉರ್ವಿಯೊಳಗೆ ಮತ್ತೋರ್ವರ ಕಾಣೆ2ತ್ರಿಗುಣ ವರ್ಜಿತ | ಪ್ರಾಣೇಶ ವಿಠಲನ ದಾಸ |ನಗಪಾಲಾ ಕೊಡು ಯನಗೆ ಲೇಸ ||ಅಗಣಿತಮಹಿಮನೆ | ಕಾಷಾಯವಸನಭೂಷ |ನಿಗಮವೇದ್ಯನೆ ನಿರ್ದೋಷ ||ನಗಸ್ತೋಮಗಳಿಗೆ | ಪಗೆಯಾಗಿರ್ಪನ |ಮಗನ ಧ್ವಜದಿ ನಿಂದಿ ಗಡಕುರುಜರೆದೆ ||ಭುಗಿಲೆಂಬುವ ತೆರ ಮೃಗಧ್ವನಿ ಮಾಡಿದನಘ |ಪೊರೆವುದುಕರವಮುಗಿವೆ ಚರಣಕೆ 3
--------------
ಪ್ರಾಣೇಶದಾಸರು