ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಕ್ಷಿತಿಯ ಸಾರತರ ವೃಕ್ಷವನು ಕಂಡೆ ಪ ರಾಕ್ಷಸಾಂತಕ ದೇವ ನೀ ವಿರಚಿಸಿರುವ ಅ.ಪ ಅಡವಿಯೊಳಗೀವೃಕ್ಷಕಡಿಯ ಪಾತಿಯಿದು ದೃಢದ ಬೇರುಗಳು ಮೂರು ರಸವು ನಾಲ್ಕು ಪೊಡವಿಗಿಳಿದಿರ್ಪೈದು ಬಿಳಿಲುಂಟು ಕೊನೆ ಮೂರು ಎಡೆವ ಪರೆಯೇಳಾ ಕೊಂಬೆಗಳೆಂಟು ಫಲವೆರಡು 1 ಮೂರು ಮುಮ್ಮಡಿ ರಂಧ್ರ ಐದರಿಮ್ಮಡಿ ಪರ್ಣ ತೇರೈಸೆ ತೋರುವಾಕಾರ ಎರಡು ಮೂರೆರಡರಿಂದೆಸೆವ ಸಾರಫಲಗಳನೆಲ್ಲ ಓರಂತೆ ಭಕ್ಷಿಸುವ ಪಕ್ಷಿಯೊಂದುಂಟಯ್ಯ 2 ವೃಕ್ಷದಾ ಫಲಗಳನು ಭಕ್ಷಿಪುದನೀಕ್ಷಿಸುವ ಪಕ್ಷಿ ನೀನಾಗಿರಲು ಪರಮಕೃಪೆಯಾ ಪಕ್ಷಿಗಿತ್ತಾಗಲೊಂದೇ ಪಕ್ಷಿಯೆಂದೆನ್ನಿಸಿ ಕುಕ್ಷಿಯನ್ನುಳಿದೈದಲರಿದೇ ಮಾಂಗಿರಿಯ ರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೃತ್ಯವನವಧರಿಸು ಮಾಯೆಯ ನ್ಯತ್ಯವನವಧರಿಸು ಪ ಕೃತ್ಯವು ಶ್ರೀಹರಿ ಕಟ್ಟಳೆಯಾಗಲು ಅ.ಪ ಸ್ವರವೆನೆ ಪ್ರಣವದ ಸೌಮ್ಯದ ನಾದವು ಯೆರಡೊಂದೆಂದರೆ ಈಶನು ಪ್ರಕೃತಿಯು 1 ಮರ್ದಳವೆಂದರೆ ಮೊದಲ ಮಹತ್ತದು ಮಾನಿನಿ ಮಾಯೆಯೆಂದೆನಿಪಳು2 ರಂಗವು ನಿನ್ನಯ ರತಿಕರ ನೋಟವು ಸಂಗಿಸೆ ನಮ್ಮಯ ಶಿರದಲಿ ಕುಣಿವಳು 3 ಭಂಗಿಸಿ ಭಂಗಿಸಿ ಭವದಲಿ ಮೆಟ್ಟುತ ಹಿಂಗದ ರೀತಿಗೆ ಹೀಗಾಡುವಳು4 ಮುಂಗುಡಿಯೆಂದರೆ ಮೊದಲಹಂಕಾರವು ತೊಂಗುತ ಭೂತಂಗಳ ಸಾಗಿಪುದು 5 ಮೊದಲಿನ ಕೊನೆಗಳು ಮಾತ್ರೆಗಳೈದವು ವೊದಗಿದ ಭೂತಗಳೊಡಲಾಗುವವು 6 ನಡದೀ ಕೊನೆಗಳು ನೂಕುತ ಬೆಳೆಯಲು ನೆಡುವವು ವೃಕ್ಷದ ನಿಡುಬೇರುಗಳು 7 ಒಡೆದಾ ಭೂತಗಳೊಂದೊಂದೈದವು ಬಿಡದವ ಬೆರಸುತ ಬಹುವಾಗುವವು 8 ಇಂತೀ ಲೋಕಗಳೀರೇಳೆಂತಲು ನಿಂತೇ ಕುಣಿವಳು ನಿನ್ನಯ ಮಾಯೆಯು 9 ಆಗಲು ಪ್ರಾಣಿಗಳಮಿತಗಳಿವರೊಳು ಭೋಗದ ಬಯಕೆಯೆ ಬಹು ರಾಗಗಳು10 ಲಯೆಗಳು ಕ್ರಿಯೆಗಳು ಲೋಕಗಳತಿಗಳುನಿಯಿಮಿಸಿ ತಿರುಪತಿ ನಾಯಕ ನಿಂತವು11
--------------
ತಿಮ್ಮಪ್ಪದಾಸರು